ಜಗತ್ತಿನಲ್ಲಿ ಅತೀ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ
ಮಾಂಜರಿ 1: ಜಗತ್ತಿನಲ್ಲಿ ಅತೀ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ. ಆದರೆ ನಾನು ಎಂಬ ರಾಕ್ಷಸ ಮನುಷ್ಯನ ಮನುಷ್ಯತ್ವವನ್ನು ತಿಂದು ಅವನನ್ನು ಏಕಾಂಗಿಯಾಗಿಸುತ್ತಿದ್ದಾನೆ. ಎಂದವರು ಈ ಜಗತ್ತಿನಲ್ಲಿ ಯಾರೂ ಉಳಿದಿಲ್ಲತ ಉಳಿಯುವುದೂ ಇಲ್ಲ. ಅಹಂಕಾರ ಅವನನ್ನು ಅಂದನನ್ನಾಗಿ ಮಾಡುತ್ತದೆ. ಹೀಗಾಗಿ ತನ್ನ ಮನಸುನ್ನು ತಾನು ಗೆದ್ದರೆ ಅವನೇ ಈಶನಾಗುತ್ತಾನೆ ಎಂದು ಯಡೂರಿನ ಕಾಡ ಸಿದ್ದೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ರೇಣುಕಾದೇವರು ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರ ರಂದು ಸಾಯಂಕಾಲ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಕಾಡಸಿದ್ದೇಶ್ವರ ಮಠದಲ್ಲಿ ಯೋಜಿಸಲಾದ ಮಾಸಿಕ ಚಿಂತನ ಸಭೆ ಹಾಗೂ ಧರ್ಮ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು
ನಿಸರ್ಗದಲ್ಲಿ ಸಿಗುವ ಮಣ್ಣು, ನೀರು, ಗಾಳಿಯನ್ನು ಎಂದಿಗೂ ಕಲುಷಿತಗೊಳಿಸಬಾರದು. ಪ್ರಕೃತಿಯನು ್ನಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬದುಕನ್ನು ಉತ್ತಮ ವಿಚಾರಗಳಿಗೆ ಉಪಯೋಗಿಸಬೇಕು. ಕೆಟ ್ಟ ಚಟಗಳಿಂದ ದೂರವಿದ್ದು, ಮನುಷ್ಯ ಪ್ರಕೃತಿ ಋಣ ಉಂಡು ಸಮಾಜಮುಖಿಯಾಗಿ ಬದುಕಬೇಕು ಎಂದು ಸಲಹೆ ರೇಣುಕಾ ದೇವರು ನೀಡಿದರು.
ಮನೆಯ ವಾಸ್ತು ಮುಖ್ಯವಲ್ಲ. ಬದುಕಿಗೆ ಮನಸಿನ ವಾಸ್ತು ಮುಖ್ಯ. ನಿಸರ್ಗದೊಂದಿಗೆ ಬದುಕಿದರೆ ಬದುಕು ಸ್ವರ್ಗವಾಗುತ್ತದೆ ಎಂದು ನಾನು ಎಂಬುದು ನರಕಕ್ಕೆ ಸಮ. ನಾವು ಎಂಬುದೇ ಸ್ವರ್ಗ. ನಾವೆಲ್ಲರೂ ಒಂದಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಿದರೆ ಅದು ನಮ್ಮ ಸ್ವರ್ಗಜಗತ್ತಿನಲ್ಲಿ ನಿಸರ್ಗಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ. ಅದನ್ನು ಪ್ರೀತಿಸಬೇಕು. ದ್ವೇಷ ಬಿಟ್ಟು ಪ್ರೇಮದ ಬದುಕು ಕಟ್ಟಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. ಈ ವೇಳೆ ಊರಿನ ಸಮಾಜದ ಮುಖಂಡರು ಹಾಗೂ ಭಕ್ತಾದಿಗಳು ಹಾಜರಿದ್ದರು ್ರ್ರಥಮ ಬಾರಿಗೆ ಮಾಂಜರಿ ಗ್ರಾಮಕ್ಕೆ ಆಗಮಸಿದ್ಧ ವೀರಭದ್ರ ದೇವಸ್ಥಾನದ ಉತ್ತರದಿಕಾರಿಗಳಾದ ರೇಣುಕಾ ದೇವರು ಇವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು