ಲೋಕದರ್ಶನವರದಿ
ಧಾರವಾಡ 23 : ನಗರದ ಅಂಜಮನ್ ಸಂಸ್ಥೆಯ ಆವರಣದಿಂದ ಪ್ರಾರಂಭಗೊಂಡ ಧಾರವಾಡ ಮುಸ್ಲೀಂ ಬಾಂಧವರ ಮೆರವಣಿಗೆಯು ಕಾಶ್ಮೀರದ ಪುಲ್ವಾಮಾ ದಲ್ಲಿ ಭಯೋತ್ಪಾದಕರ ಕೃತ್ಯಕ್ಕೆ ವೀರ ಮರಣ ಹೊಂದಿದ ಸಿ.ಆರ್.ಪಿ.ಎಫ ನ 44 ಜನ ಯೋಧರ ನೆನಪಿಗಾಗಿ ರ್ಯಾಲಿಯು ಜರುಗಿತು. 1.25 ಕಿಲೋಮೋಟರ್ ಉದ್ದದ ತ್ರೀವರ್ಣ ಬಟ್ಟೆ ಮಕ್ಕಳು ದಾರಿಯುದ್ದಕ್ಕೂ ಹೊತ್ತು ದೇಶ ಭಕ್ತಿಯ ಗೀತೆ, ಪಾಕಿಸ್ತಾನ ವಿರುದ್ಧ ಘೋಷಣೆಗಳೊಂದಿಗೆ ಹಳೆ ಬಸ್ ನಿಲ್ದಾಣ, ವಿವೇಕಾನಂದ ವೃತ್ತ, ಆಝಾದ ಪಾರ್ಕ, ಜುಬಿಲಿ ಸರ್ಕಲ್, ಕೋರ್ಟ ಸರ್ಕಲ್, ಡಿ.ಸಿ. ಕಛೇರಿಯ ವರೆಗೆ ಮೆರವಣಿಗೆಯ ಮೂಲಕ ತೆರಳಿ ಮನವಿಯನ್ನು ಅಪರ್ಿಸಿದರು.
ನೇತೃತ್ವ ವಹಿಸಿದ್ದ ಇಸ್ಮಾಯಿಲ್ ತಮಾಟಗಾರ ಮಾತನಾಡಿ ಕೇಂದ್ರ ಸಕರ್ಾರದ ನಿಧರ್ಾರಕ್ಕೆ ಧಾರವಾಡ ಮುಸ್ಲೀಂ ಬಾಂಧವರು ಬದ್ಧರಾಗಿದ್ದು ಈ ರೀತಿಯ ಭಯೋತ್ಪಾದನೆ ಮಾಡುವ ಯಾವದೇ ಜಾತಿಯ ಮನುಷ್ಯನಿದ್ದರು ಅವನಿಗೆ ಸರಿಯಾದ ಕಾನೂನು ರೀತಿಯ ಶಿಕ್ಷೆ ಆಗಲೆಬೇಕು ಎಂದರು. ಪಾಕಿಸ್ತಾನದ ಸರಕಾರದಿಂದ ಭಯೋತ್ಪಾದನೆಯು ಕಾಶ್ಮೀರ ಕಣಿವೆಯಲ್ಲಿ ಹೆಚ್ಚಾಗುತ್ತಿದ್ದು ಅದನ್ನು ಸದೆಬಡೆಯಲು ಭಾರತ ಕಠಿಣ ಕ್ರಮ ಅನುಸರಿಸಬೇಕು ಅದಕ್ಕೆ ನಮ್ಮೆಲ್ಲ ಭಾರತೀಯರ ಬೆಂಬಲವಿದೆ ಎಂದರು.
ನಜೀರ ಮನಿಯಾರ, ಇಮ್ರಾನ್ ಕಳ್ಳಿಮನಿ, ಸಮೀರ ಪಾಗೆ, ಇಕ್ಬಾಲ್ ಜಮಾದಾರ, ಡಾ. ಇಕ್ಬಾಲ ಶೇಖ್, ಇಫರ್ಾನ ತಾಡಪತ್ರಿ, ಅಲಿ ಕರನಾಚಿ, ದೇವರ ವರು, ಮಹ್ಮದಗೌಸ ಮಕಾನದಾರ, ಶಫಿ ಕಳ್ಳಿಮನಿ, ಇಮ್ತಿಯಾಜ್ ಮುಲ್ಲಾ, ಡಾ. ಎಸ್.ಎ. ಸರಗಿರೊ, ಎ.ಎಮ್. ಮನಿಯಾರ, ಆಯ್.ಎಮ್. ಜವಳಿ, ಗೌಸಸಾಬ ನದಾಫ, ಎಮ್.ಕೆ. ನಾಯಕವಾಡಿ, ಎ.ಸಿ. ತಹಶೀಲ್ದಾರ್, ಡಿ.ಎಮ್.ಮಾಲದಾರ, ನಜೀರ ಅಹ್ಮದ ಹೆಬ್ಬಳ್ಳಿ, ಮುಕ್ತಿಯಾರ ಪಠಾಣ, ಎಸ್.ಎಸ್. ಸೌದಾಗರ, ಅಬ್ದುಲ ದೇಸಾಯಿ, ಎ.ಎಮ್ ಖಾದರಿ, ಅಬ್ದುಲ ಲತೀಫ ಬಚರ್ಿವಾಲೆ, ಬಸೀರ ಖಾನಮ್, ನಾನೆಕ ಬೆಲಗಾಮ, ಅಶ್ಪಾಕ ಕೊಪ್ಪಳ, ಎ.ಎಮ್. ಹಾವೇರಿಪೇಠ, ಎಮ್.ಎ.ಧಾರವಾಡಕರ, ವಾಯ್,ಎ,ಪಠಾಣ್, ಅಂಜುಮನ್ ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾಥರ್ಿ, ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.