ಲೋಕದರ್ಶನ ವರದಿ
ಬೈಲಹೊಂಗಲ 13: ಪಟ್ಟಣದಲ್ಲಿ ಸಕರ್ಾರಿ ಪ್ರಥಮ ದಜರ್ೆಯ ಗಂಡು ಮಕ್ಕಳ ಮಹಾವಿದ್ಯಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ವಿವಿಧ ಕಾಲೇಜು ವಿದ್ಯಾಥರ್ಿಗಳು ಗುರುವಾರ ಅನಿಧರ್ಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟಿಸಿದರು.
ರಾಯಣ್ಣ ವೃತ್ತದಲ್ಲಿ ವೇದಿಕೆ ನಿಮರ್ಿಸಿ ಧರಣಿ ಕುಳಿತ ವಿದ್ಯಾಥರ್ಿಗಳು ರಸ್ತೆ ತಡೆದು ಸಕರ್ಾರ, ಜನಪ್ರತಿನಿಧಿಗಳಿಗೆ ದಿಕ್ಕಾರ ಕೂಗಿದರು. ಬೈಲಹೊಂಗಲ ಪಟ್ಟಣ ಪ್ರದೇಶದಲ್ಲಿ ಸಕರ್ಾರಿ ಪ್ರಥಮ ದಜರ್ೆಯ ಗಂಡು ಮಕ್ಕಳ ಮಹಾವಿದ್ಯಾಲಯ ಮಂಜೂರಾತಿ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡು ಧರಣಿ ಸತ್ಯಾಗ್ರಹ ಕುಳಿತಿರುವದಾಗಿ ತಿಳಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ಧಾರೂಢ ಹೊಂಡಪ್ಪನವರ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಡ ವಿದ್ಯಾಥರ್ಿಗಳಿಗೆ ಆಗುತ್ತಿರುವ ಶೋಷಣೆ ತಡೆಯಲು ಸಕರ್ಾರ ಬೈಲಹೊಂಗಲಕ್ಕೆ ಕೂಡಲೇ ಸಕರ್ಾರಿ ಪ್ರಥಮ ದಜರ್ೆ ಮಹಾವಿದ್ಯಾಲಯ ಮಂಜೂರು ಮಾಡಿ ಬಡ ಮಕ್ಕಳು ಪದವಿ ಓದಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಬೈಲಹೊಂಗಲ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾಮಾಜಿಕ ಚಿಂತಕ ಮಡಿವಾಳಪ್ಪ ಮೂಗಬಸವ ಮಾತನಾಡಿ, 'ಸಕರ್ಾರಿ ಪದವಿ ಕಾಲೇಜು ಬೇಕೆಂಬ ಕೂಗು ವಿದ್ಯಾಥರ್ಿಗಳ ಹಲವು ವರ್ಷಗಳ ಬೇಡಿಕೆ ಆಗಿದೆ. ಇದನ್ನು ಶೀಘ್ರವಾಗಿ ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದರು. ವಿದ್ಯಾಥರ್ಿಗಳಾದ ಸಿದ್ದನಗೌಡ ಪಾಟೀಲ, ರಫೀಕ ಹುದಲಿ, ಸೋಮೇಶ ಅಸುಂಡಿ, ಅಂಕೀತ ಶಿಂತ್ರಿ, ಸಾಗರ ಗಂಗಬಸಪ್ಪನವರ, ಆನಂದ ಇಬ್ರಾಹಿಂ, ಶಿವಕುಮಾರ ಢಮ್ಮಣಗಿ, ಪ್ರಮೋದ ಕರಿಗಾರ, ವಿಠ್ಠಲ ಕಂಬಾರ, ಆದರ್ಶ ಶೀಲವಂತರ ಇದ್ದರು. ಇದೇ ವೇಳೆ ವಿವಿಧ ಮುಖಂಡರು ವಿದ್ಯಾಥರ್ಿಗಳ ಧರಣಿಗೆ ಬೆಂಬಲ ನೀಡಿದರು.