ಹೂಗಾರ ಸಮಾಜದವರು ಶ್ರದ್ಧೆ-ಭಕ್ತಿಯಿಂದ ಬೆಳೆದವರು

ಲೋಕದರ್ಶನ ವರದಿ

ಇಂಡಿ 20:ಹೂಗಾರ ಸಮಾಜದ ಕುಲಬಾಂಧವರು  ಸಮಾಜದ ಎಲ್ಲ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ  ಇದ್ದು  ದೇವರ ಮೇಲೆ ಭಯ ಭಕ್ತಿ ಇರಿಸಿಕೊಂಡು ಜೀವನ ಮಾರ್ಗ ಕಂಡುಕೊಳ್ಳುವ ಸರಳ ಸ್ವಭಾವದ ಗುಣ ಪೂರ್ವಜರಿಂದ ಬೆಳೆದು ಬಂದಿದೆ ಎಂದು  ಜಿ.ಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಹೇಳಿದರು. 

ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡ  ಇಂಡಿ ತಾಲೂಕಾ ಹೂಗಾರ ಸಮಾಜದ ಪ್ರಥಮ ಸಮಾವೇಶದ ಉದ್ಘಾಟನೆ ಹಾಗೂ ಶರಣ ಹೂಗಾರ ಮಾದಯ್ಯ ಸಮುದಾಯದ ಭವನದ ಭೂಮಿ ಪೂಜಾ ಕಾರ್ಯಕ್ರಮ  ಉದ್ಘಾಟನೆ  ನೆರವೇರಿಸಿ ಮಾತನಾಡಿದ ಅವರು   12ನೇ ಶತಮಾನದಲ್ಲಿ ಅಣ್ಣ ಬಸವಣ್ಣ  ಅಂದಿನ ಅಂಧಕಾರ ಸಮಾಜವನ್ನು  ಹೊಸ ಬದಲಾವಣೆಯತ್ತ ತರಲು  ಅನೇಕ ಸಮಾಜದ ಶರಣರನ್ನು ಒಗ್ಗೂಡಿಸಿ ಸರಿ ಸಮ ಸಮಾಜದ ನಿಮರ್ಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಅತಹ ಶರಣರ ಸಮಕಾಲಿನ ವ್ಯಕ್ತಿಗಳಲ್ಲಿ ಹೂಗಾರ ಮಾದಯ್ಯ ಶರಣರು ಒಬ್ಬರಾಗಿದ್ದರೆ. ಅಣ್ಣ ಬಸವಣ್ಣನ ಸಂದೇಶದಂತೆ  ಇಂಡಿ ಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲರು ಎಲ್ಲ ಸಮುದಾಯದೊಂದಿಗೆ  ಪ್ರೀತಿ ವಿಶ್ವಾಸ ಬೆಳೆಸಿಕೊಂಡು  ಸಮಾಜಿಕ ನ್ಯಾಯ ನೀಡುತ್ತಿರುವದು ಸಂತೋಷದಾಯಕ . ಹೂಗಾರ ಸಮಾಜದ ಬಾಂಧವರು ಮಕ್ಕಳಿಗೆ ಶಿಕ್ಷಣ ಕೊಟ್ಟು ಸಂಸ್ಕಾರವಂತರನ್ನಾಗಿ ಮಾಡಿ ಎಂದು ಸಮಾಜದ ಬಾಂಧವರಿಗೆ  ಸಲಹೆ ನೀಡಿದರು.

ನಾನು ಬಾಲ್ಯದಿಂದಲೂ ಈ ಸಮುದಾಯದ ಜೊತೆ ಸ್ನೇಹ ಹೊಂದಿದ್ದೆನೆ, ಇವರ ಮನಸ್ಸು ಹೂವಿನಂತೆ  ಕೋಮಲ ಮತ್ತು ಮೃದು ಹೃದಯತ್ವವಿರುವ ಜನರಿದ್ದು  ದೇವರ ಮೇಲೆ ಅಪಾರ ಭಕ್ತಿ ಭಯ ಹೊಂದಿದ್ದಾರೆ. ಸಮಾಜದ ಜನರಲ್ಲಿ ಸೇವಾ ಮನೋಭಾವನೆ  ಜೊತೆ ಕಾಯಕಯೋಗಿಗಳಾಗಿದ್ದಾರೆ. ಸಮಾಜದಲ್ಲಿ ಎಲ್ಲಾ ಸಮುದಾಯದವರೊಂದಿಗೆ ಅನೂನ್ಯವಾಗಿ ಬದುಕುತ್ತಿದ್ದಾರೆ. ಇಂದು ಹೂಗಾರ ಸಮಾಜ ಸಮಾಜದಲ್ಲಿ ಸಣ್ಣ ಸಮುದಾಯದವಾಗಿದ್ದು  ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು.ಚಿಕ್ಕದೆಂದು ಕಡೆಗಣೆ ಮಾಡಿದರೆ  ಸಂಘಟನೆ ಮುಖಾಂತರ ಅನ್ಯಾಯದ ವಿರುಧ್ಧ ಧ್ವನಿ ಎತ್ತಬೇಕು ಎಂದು  ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಹೇಳಿದರು. 

ಸುನೀತಾ ದೇವಾನಂದ ಚವ್ಹಾಣ, ತಾ.ಪಂ ಅಧ್ಯಕ್ಷ ಶೇಖರ ನಾಯಕ,  ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ , ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಬಿ.ಡಿ.ಪಾಟೀಲ, ಭೀಮನಗೌಡ ಪಾಟೀಲ, ಇಲಿಯಾಸ ಬೋರಾಮಣಿ, ಚಿದಾನಂದ ಗುರುಸ್ವಾಮಿ, ಡಿ.ಎ ಮುಜಗೊಂಡ, ಅನೀಲಗೌಡ ಬಿರಾದಾರ, ದೆವೇಂದ್ರ ಕುಂಬಾರ, ರಾಜುಗೌಡ ಪಾಟೀಲ, ಬುದ್ದುಗೌಡ ಪಾಟೀಲ, ಜೀತಪ್ಪ ಕಲ್ಯಾಣಿ, ಸೋಮನಾಥ ಹೂಗಾರ, ಶ್ರೀಕಾಂತ ದೇವರ,  ಸಂಜು ಹೋಗಾರ, ಸೂರ್ಯಕಾಂತ ಪೂಜಾರ, ಅಶೋಕ ಹೂಗಾರ, ಮಂಜುನಾಥ ಹೂಗಾರ, ಶಿವಾನಂದ ಹೂಗಾರ, ಸಿದ್ದು ಪೂಜಾರಿ, ಭಾರತಿ ಬುಯ್ಯಾರ, ಮಾಂತೇಶ ಹೂಗಾರ, ಪುಂಡಲೀಕ ಹೂಗಾರ, ಶಾಂತು ಹೂಗಾರ ವೇದಿಕೆಯಲ್ಲಿದ್ದರು. 

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶರಣ  ಹೂಗಾರ ಮಾದಯ್ಯನವರ ಭಾವಚಿತ್ರ ಮೇರವಣಿಗೆ ಯಲ್ಲಿ 108 ಸುಮಂಗಲೆಯರು ಕುಂಭ ಮೇರವಣಿಗೆಯಲ್ಲಿ ಭಾಗವಸಿದರು .   ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪ್ರತಿಭೆಗಳನ್ನು ವೇದಿಕೆಲ್ಲಿ ಸನ್ಮಾನಿಸಿದರು.