ಬೈಲಹೊಂಗಲ 03: ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ನಾಡಿನ ಸಮಸ್ತ ರೈತ ಬಾಂಧವರ ಸಹಕಾರದೊಂದಿಗೆ ಮೂರು ದಿನಗಳಕಾಲ ನಡೆದ ಭಾರೀ ಜಾನುವಾರು ಜಾತ್ರೆಯ ಪ್ರದರ್ಶನ ಮತ್ತು ಮಾರಾಟ ಯಶಸ್ವಿಯಾಗಿ ನಡೆಯಿತು.
ಪಟ್ಟಣದ ಜಾನುವಾರ ಮಾರುಕಟ್ಟೆ ಹಳೆಯ ಜಾನುವಾರು ಸಂತೆಯ ವೈಭವ ಪಡೆದಿತ್ತು. ಕಣ್ಣು ಹಾಯಿಸಿದಷ್ಟು ಜಾನುವಾರುಗಳು ಕಂಡು ಬಂದವು. ಮೂರುದಿನಗಳ ಕಾಲ ನಡೆದ ಜಾತ್ರೆಯಲ್ಲಿ ಕಮೀಟಿಯ ಸಂಘಟಕರು ಯಾವುದೇ ಒಂದು ನಯಾ ಪೈಸೆ ಇಲ್ಲದೆ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಿ ಪ್ರಶಂಸೆ ಪಡೆದಿದ್ದಾರೆ.
ಈ ಕಾರ್ಯಕ್ಕೆ ನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಶ್ರೀ ಮರಡಿ ಬಸವೇಶ್ವರ ಜಾತ್ರೆ ನಿಮಿತ್ತ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಜಾನುವಾರ ಜಾತ್ರೆಯಲ್ಲಿ ವಿವಿಧ ಬಗೆ, ಬಗೆಯ ಅತ್ಯಾಕರ್ಷಕ ತಳಿಯ ಜಾನುವಾರುಗಳು ಪ್ರದರ್ಶನಗೊಂಡಿದ್ದು ವಿಶೇಷವಾಗಿದೆ. ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಜಾನುವಾರುಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಜಾತ್ರೆಗೆ ಕಳೆ ತಂದು ಕೊಟ್ಟವು. ಒಂದಕ್ಕಿಂತ ಒಂದು ಚೆಂದ ಕಾಣುವ ಜಾನುವಾರುಗಳು ನೋಡುಗರನ್ನು ಕಣ್ಮನ ಸೆಳೆದವು. ಪ್ರದರ್ಶನದಲ್ಲಿ ಪಾಲ್ಗೊಂಡ ಜಾನುವಾರುಗಳಲ್ಲಿ ನಿಣರ್ಾಯಕರು ಆಯ್ಕೆ ಮಾಡಿದ ಜಾನುವಾರುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ರೈತರು ತಮ್ಮಗಿಷ್ಟವಾದ ಜಾನುವಾರ ಖರೀದಿಸಿ ಖುಷಿ ಪಟ್ಟರು.
ಬೆಳಗಾವಿ, ಮಹಾರಾಷ್ಟ್ರ, ಬಾಗಲಕೋಟ, ವಿಜಾಪೂರ, ಸಾಂಗ್ಲಿ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಜಾನುವಾರು ಪ್ರದರ್ಶನ ಮತ್ತು ಖರೀದಿ-ಮಾರಾಟಕ್ಕೆ ಬಂದಿದ್ದು ವಿಶೇಷವಾಗಿತ್ತು. ಕಿಲಾರಿ ಹೋರಿ, ಎಚ್.ಎಫ್.ತಳಿ ಆಕಳು, ಮೈಸೂರಿ ತಳಿ ಹೋರಿ, ಹಾಲಲ್ಲಿ ಹೋರಿಗಳು, ಎಮ್ಮೆಗಳು, ಕರುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ದೇವಿ ಆರಾಧಕ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸೇರಿದಂತೆ ಗಣ್ಯರು ವಿಜೇತ ಜಾನುವಾರುಗಳಿಗೆ ಬಹುಮಾನಗಳನ್ನು ವಿತರಿಸಿದರು. ಶ್ರೀ ಮರಡಿ ಬಸವೇಶ್ವರ ಜಾತ್ರಾ ಜಾನುವಾರ ಪ್ರದರ್ಶನ ಕಮಿಟಿ ಅಧ್ಯಕ್ಷ ಶಿವರಂಜನ ಬೋಳಣ್ಣವರ, ಉಪಾಧ್ಯಕ್ಷರಾದ ಮಡಿವಾಳಪ್ಪ ಹೋಟಿ, ಪ್ರ.ಕಾರ್ಯದಶರ್ಿ ಮಹಾಂತೇಶ ತುರಮರಿ, ಮುರಗೇಶ ಗುಂಡ್ಲೂರ, ಶಿವಾನಂದ ಇಂಚಲ, ರುದ್ರಪ್ಪ ಹೊಸಮನಿ, ಮಹಾಂತೇಶ ಮತ್ತಿಕೊಪ್ಪ, ಸಂ.ಕಾರ್ಯದಶರ್ಿಗಳಾದ ಅಶೋಕ ಮತ್ತಿಕೊಪ್ಪ, ಎಫ್.ಎಸ್.ಸಿದ್ಧನಗೌಡರ, ಸಹ ಕಾರ್ಯದಶರ್ಿ ಮಾರುತಿ ತಿಗಡಿ, ಮಹೇಶ ಹರಕುಣಿ, ಸುರೇಶ ಯರಗಟ್ಟಿ, ಸದಸ್ಯರಾದ ವಿ.ಎಸ್.ಕೋರಿಮಠ, ವಿಠ್ಠಲ ದಾಸೋಗ, ವಿಠ್ಠಲ ಅಂದಾನಿ, ಉಳವಪ್ಪ ಉಪ್ಪಿನ, ಅಶೋಕ ಕಡಕೋಳ, ಲಕ್ಷ್ಮಣ ಸೋಮನಟ್ಟಿ, ಸಣ್ಣಬಸಪ್ಪ ಕುಡಸೋಮಣ್ಣವರ, ಶಂಕರೆಪ್ಪಾ ತುರಮರಿ, ಸೋಮನಾಥ ಸೊಪ್ಪಿಮಠ, ಶಂಕರೆಪ್ಪ ಕಡಕೋಳ, ಶ್ರೀಶೈಲ ಹೋಟಿ, ಮಲ್ಲಿಕಾಜರ್ುನ ಇಂಚಲ, ಮಲ್ಲಿಕಾಜರ್ುನ ಕಮತಗಿ, ಪುಂಡಲೀಕ ಹೋಟಿ, ಶ್ರೀಶೈಲ ಯಡಳ್ಳಿ, ಎಪಿಎಂಸಿ ಅಧ್ಯಕ್ಷ ಭರಮಣ್ಣ ಸತ್ಯನವರ, ಬಾಬುಸಾಬ ಸುತಗಟ್ಟಿ, ಬಸಪ್ಪ ಜಂಬಗಿ, ಜಗದೀಶ ಕೋತಂಬ್ರಿ, ರಮೇಶ ಹುಲ್ಲೇನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಫಲಿತಾಂಶ :
2 ಮತ್ತು 6 ಹಲ್ಲು ಹೋರಿಯಲ್ಲಿ : ಜಾನುವಾರು ಜಾತ್ರೆಯಲ್ಲಿ ಮಾಯಾನಟ್ಟಿಯ ಮುರಗೇಶ ಪೂಜಾರಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರಹೊಮ್ಮಿದರು. 2 ಮತ್ತು 6 ಹಲ್ಲು ಹೋರಿಯಲ್ಲಿ ಅಥಣಿಯ ರಾಹುಲ್ ಸಿಂಧೆ (ಪ್ರಥಮ), ನಾವಲಗಿಯ ಮಲ್ಲಪ್ಪ ನೇಸೂರ (ದ್ವಿತೀಯ) ಸ್ಥಾನ, ಜಮನಾಳದ ಅಜರ್ುನಗೌಡ ವಾಗ್ಮೋಡಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಹಲ್ಲು ಹಚ್ಚದ ಹೋರಿಯಲ್ಲಿ : ದುರದುಂಡೆಪ್ಪ ಮಾನಿಗೋ (ಪ್ರಥಮ), ಕೆಂಗಾನೂರಿನ ಈರಪ್ಪ ಬೇವಿನಕೊಪ್ಪ (ದ್ವಿತೀಯ), ಅಥಣಿಯ ಪರಶುರಾಮ ನರೋಡಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಎಮ್ಮೆಗಳ ಆಕರ್ಷಕ ಬಹುಮಾನಗಳಲ್ಲಿ :
ಆನಿಗೋಳದ ರಮೇಶ ಉಪ್ಪಾರ (ಪ್ರಥಮ), ಬೈಲಹೊಂಗಲದ ಕುಬೇರ ತಟ್ಟಿಮನಿ (ದ್ವಿತೀಯ), ಈರಪ್ಪ ಮದ್ನಾಳ್ಳಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಆಕಳುಗಳು : ಬಿಜಾಪೂರದ ಗುರುಪಾದ ವಾಗ್ಮೋರೆ (ಪ್ರಥಮ), ರವಿ ಬಟ್ಟೆ (ದ್ವೀತಿಯ), ಅಥಣಿಯ ಭಜರಂಗ ಪಾಟೀಲ (ತೃತೀಯ) ಸ್ಥಾನ ಪಡೆದಿದ್ದಾರೆ.
ಜೋಡೆತ್ತು ಗಳ ಆಕರ್ಷಕ ಬಹುಮಾನಗಳಲ್ಲಿ: ಸುಳೇಬಾಂವಿಯ ಬಸವಣ್ಣೆಪ್ಪಾ ಮುರಾರಿ (ಪ್ರಥಮ), ಗಡ್ಲೆಂಗ್ಲೇಜ್ನ ಗಣಪತಿ ಡೋಮನೆ (ದ್ವಿತೀಯ), ಹೊಸೂರಿನ ಉದಯ ಬೂದಿಹಾಳ (ತೃತೀಯ) ಸ್ಥಾನ ಪಡೆದಿದ್ದಾರೆ.
ಬಾಕ್ಸ್ ಐಟಂ:
ಬೈಲಹೊಂಗಲ ನಾಡಿನ ಜಾನುವಾರು ಮಾರುಕಟ್ಟೆಯ ಹಳೇ ವೈಭವ ಮರುಕಳಿಸಿದಂತಾಗಿತ್ತು. ನೂರಾರು ಜಾನುವಾರುಗಳು ಪ್ರದರ್ಶನ ಮತ್ತು ಮಾರಾಟವಾಗಿದ್ದು ವಿಶೇಷವಾಗಿದೆ. ಮೂರುದಿನಗಳ ಕಾಲ ನಡೆದ ಜಾನುವಾರ ಜಾತ್ರೆಯಲ್ಲಿ ಕಮೀಟಿಯ ಸಂಘಟಕರು ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಿದ್ದಾರೆ. ಜಾನುವಾರುಗಳ ಜಾತ್ರೆಯಲ್ಲಿ ನಾಗರಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಿ ಪ್ರೋತ್ಸಾಹಿಸಿದ್ದು ಸಂತಸವಾಗಿದೆ.
ರುದ್ರಪ್ಪಾ ಹೊಸಮನಿ, ಸಂಘಟಕರು