ಲೋಕದರ್ಶನ ವರದಿ
ಶಿಗ್ಗಾವಿ 09: ಸರಕಾರಿ ಶಾಲೆಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸಿದಾಗ ಮಾತ್ರ ಕಲಿಕೆಯಲ್ಲಿ ಗುಣಾತ್ಮಕ ಫಲಿತಾಂಶ ನಿರೀಕ್ಷಿಸಲು ಸಾಧ್ಯ. ಹೀಗಾಗಿ ಜನ ನೀಡಿದ ಅಧಿಕಾರ ಸದ್ಬಳಕೆ, ಹೊಣೆಗಾರಿಕೆಯಿಂದ ಅರಿತು ಸಮರ್ಥವಾಗಿ ನಿಭಾಯಿಸಿದಾಗ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಶಿಗ್ಗಾವಿ ಕ್ಷೇತ್ರವೊಂದು ಸಾಕ್ಷಿಯಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಮಂಗಳೂರು ರಿಪೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಿ.ಆರ್ ಚಟುವಟಿಕೆ ವತಿಯಿಂದ ಆಯೋಜಿಸಿದ್ದ ಸರಕಾರಿ ಶಾಲೆಗಳಿಗೆ ಉಚಿತ ಡೆಸ್ಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನರ ಪ್ರತಿನಿಧಿ ಗಳು ಮುಂದಿನ ಚುನಾವಣೆಯ ದೃಷ್ಟಿಕೋನದಲ್ಲಿ ಕೆಲಸ ಮಾಡಿದರೆ, ಅಭಿವೃದ್ಧಿ ಅಸಾಧ್ಯ. ಮುಂದಿನ ಜನಾಂಗ ಮುಂದಿಟ್ಟುಕೊಂಡು ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸಿದಾಗ ಕೆಲಸಗಳು ಭರವಸೆಯ ಮಾತುಗಳನ್ನು ಕಟ್ಟಿ ಹಾಕುತ್ತೇವೆ ಎಂದರು. ಇದರ ಫಲವಾಗಿ ಕ್ಷೇತ್ರದಲ್ಲಿ ಕೈಗೊಂಡ ಶಿಕ್ಷಣದ ಕ್ರಾಂತಿ ಇಂದು ಮಹತ್ತರ ಹೆಜ್ಜೆಯಿಟ್ಟಿದೆ. ಮಕ್ಕಳ ಭವಿಷ್ಯಕ್ಕೆ ಮಹತ್ವ ನೀಡಿದರೆ, ಮುಂದೆ ಅವರು ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ ಎಂಬುದು ನನ್ನ ಜೀವ ನದ ಆಶಯವಾಗಿದೆ. ಆಳುವ ಸರಕಾರಕ್ಕೆ ತಾಯ್ತನದ ಹೃದಯ ಮುಖ್ಯ. ಅದು ಜನರ ನೋವಿನ ಅರಿವು ಅರಿತು, ಕಳಕಳಿಯ ಮನಸ್ಸು ವ್ಯಕ್ತಪಡಿಸಿದಾಗ ಉತ್ತಮ ಕಾರ್ಯಕ್ರಮಗಳು ಜಾರಿಗೊಳ್ಳುವುದಷ್ಟೇ ಅಲ್ಲ ಜನರ ಬಳಿ ತಲುಪುತ್ತವೆ. ಆದರೆ, ದುದರ್ೈವ ನಮ್ಮ ನಾಡಿನಲ್ಲಿ ಅದು ಇಂದು ಕಣ್ಮರೆಯಾಗಿದೆ. ಶಿಕ್ಷಣಕ್ಕೆ ಕಳೆದ 5 ವರ್ಷದಿಂದ ನಯಾ ಪೈಸೆ ಅನುದಾನ ಬಂದಿಲ್ಲ. ಕೇಂದ್ರದಿಂದ ವಿಶೇಷ ಅನುದಾನ ತಂದು ಕ್ಷೇತ್ರದಲ್ಲಿ 88 ನೂತನ ಕೊಠ ಡಿಗಳು ಸೇರಿದಂತೆ ಶೌಚಾಲಯ ನಿಮರ್ಾಣಕ್ಕೆ ಕ್ರಮ ಜರುಗಿಸಲಾಗಿದೆ. ಸರಕಾರೇತರ ಸಂಸ್ಥೆಗಳಿಂದಲೂ ನೆರವು ಪಡೆದು ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಓಟಿಗಾಗಿ ಸಮುದಾಯ ಭವನ, ಇನ್ನಿತರ ಬಳಕೆಗೆ ಬಾರದ ಕಾರ್ಯಗಳಿಗೆ ಅನುದಾನ ನೀಡುವುದಕ್ಕಿಂತ ಭವಿಷ್ಯ ಬರೆಯುವ ಮಕ್ಕಳ ಶಿಕ್ಷಣಕ್ಕೆ ಪ್ರಥಮ ಒತ್ತು ನೀಡಲಾಗಿ ದೆ. ತಮ್ಮ ಲೋಕಸಭೆ ವ್ಯಾಪ್ತಿಯಲ್ಲಿ 7138 ಡೆಸ್ಕ್ ಹಾಗೂ 110 ಶಾಲೆಗಳಲ್ಲಿ 230 ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಬರುವ ದಿನದಲ್ಲಿ ಒಬ್ಬ ಮಗುವು ನೆಲದ ಮೇಲೆ ಕೂಡದಂತೆ ಎಲ್ಲ ಶಾಲೆಗಳಿಗೂ ಡೆಸ್ಕ್ ಪೂರೈಸುವ ಸಂಕಲ್ಪ ಮಾಡಿದ್ದೇನೆ. ಶಿಗ್ಗಾವಿ ಕ್ಷೇತ್ರಕ್ಕೆ 1.80 ಕೋಟಿ ರೂ. ವೆಚ್ಚದ 720 ಡೆಸ್ಕ್, 8 ಸ್ಮಾರ್ಟ ಕ್ಲಾಸ್, ನಿಮರ್ಿಸಲಾಗಿದೆ. ಹೆಚ್ಚುವರಿಯಾಗಿ 2 ತಿಂಗಳಲ್ಲಿ 1 ಸಾವಿರ ಡೆಸ್ಕ್, 50 ಶೌಚಾಲಯಗಳನಿಮರ್ಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಗಳಿ ಗ್ರಾಮದ ಮೃತ ಯೋಧ ಚಂದ್ರಶೇಖರ ಡವಗಿ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಚೆಕ್ ನೀಡಲಾಯಿತು. ಹಾಗೂ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್, ಸಿಲಿಂಡರ್ ವಿತರಿಸಲಾಯಿತು.
ವಿರಕ್ತಮಠದ ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಉಪಾಧ್ಯಕ್ಷ ಪರಶುರಾಮ ಸೊನ್ನದ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುಭಾಸ ಚವ್ಹಾಣ, ಮುಖಂಡರಾದ ಗಂಗಾಧರ ಸಾತಣ್ಣವರ, ಡಾ.ಮಲ್ಲೇಶಪ್ಪ ಹರಿಜನ, ದೇವಣ್ಣ ಚಾಕಲಬ್ಬಿ, ಕರಿಯಪ್ಪ ಕಟ್ಟಿಮನಿ, ತಹಸೀಲ್ದಾರ ಶಿವಾನಂದ ರಾಣೆ, ಬಿಇಒ ಶಿವಾನಂದ ಹೆಳವರ, ಸಮನ್ವಯಾಧಿಕಾರಿ ಮಂಜುಳಾ ಚಂದ್ರಗಿರಿ, ಶಿವಾನಂದ ಮ್ಯಾಗೇರಿ, ನಿಂಗಪ್ಪ ಹರಿಜನ, ಉಪಸ್ಥಿತರಿದ್ದರು.