ಲೋಕದರ್ಶನ ವರದಿ
ಮುಧೋಳ 18: ತೀವ್ರ ಬರಗಾಲದ ಹಿನ್ನಲೆಯಲ್ಲಿ, ಕುಡಿಯುವ ನೀರು ಪೊರೈಕೆಗಾಗಿ ಹಾಗೂ ರೈತರ ಹೀತದೃಷ್ಟಿಯಿಂದ ಹಿಡಕಲ್ಲ ಜಲಾಶಯದಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸುವ ಪ್ರಕ್ರೀಯೆ ಪ್ರಾರಂಭವಾಗಿದ್ದು, ರ್ಯತರು ಈಗ ಬಿಟ್ಟ ನೀರನ್ನು ಹಿತಮಿತವಾಗಿ ಬಳಸಬೇಕೆಂದು ಮಾಜಿ ಸಚಿವ ಹಾಗೂ ಶಾಸಕ ಗೋವಿಂದ ಕಾರಜೋಳ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂಗಾರು ಹಾಗೂ ಮುಂಗಾರು ಮಳೆ ಆಗದೆ ಇದ್ದುದ್ದರಿಂದ ತೀವ್ರ ಬರಗಾಲದ ಹಿನ್ನಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಈಗ ಬಿಟ್ಟ ಈ ನೀರು ಕೊನೆಯ ಗ್ರಾಮದವರೆಗೆ ತಲುಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದ್ದು, ಆ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಕಾರಜೋಳ ವಿನಂತಿಸಿದ್ದಾರೆ.
ಸಕಾಲದಲ್ಲಿ ಮಳೆಯಿಲ್ಲದೆ ನೀರಿಲ್ಲದೆ ರೈತರ ಬೆಳೆದು ನಿಂತ ಬೆಳೆ ಹಾನಿಯಾಗಿದೆ. ಅದಕ್ಕೆ ಸೂಕ್ತ ಪರಹಾರ ಧನ ನೀಡಬೇಕು ಎಂದು ಕಾರಜೋಳ ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 4.68 ಲಕ್ಷ ಹೆಕ್ಟೆರ ಭೂಮಿ ಸಾಗಾವಳಿ ಮಾಡುತ್ತಿದ್ದು ಇದರಲ್ಲಿ 2.45 ಲಕ್ಷ ಹೆಕ್ಟೆರ್ ನೀರಾವರಿಯಾಗಿದೆ. 2.28 ಲಕ್ಷ ರೈತರಿದ್ದು, ಇದರಲ್ಲಿ 69 ಸಾವಿರ ಅತಿ ಸಣ್ಣ ರೈತರಿದ್ದಾರೆ. 75 ಸಾವಿರ ಸಣ್ಣ ರೈತರು ಹಾಗೂ 82 ಸಾವಿರ ಇನ್ನೂಳಿದ ರೈತರಿದ್ದಾರೆ. ರೈತರ ಸ್ಥಿತಿ ಚಿಂತಾಜನಕವಾಗಿದ್ದು ಕೂಡಲೆ ಜಿಲ್ಲೆ ಯಲ್ಲಿ ಬರಗಾಲ ಕಾಮಗಾರಿಯನ್ನು ಪ್ರಾರಂಭಿಸಬೇಕು. ಹಾಗೂ ರೈತರು ಗುಳೆ ಹೊಗುವುದನ್ನು ತಪ್ಪಿಸಬೇಕೆಂದು ಕಾರಜೋಳ ಸರಕಾರವನ್ನು ಒತ್ತಾಯಿಸಿದರು. ವಾರದೋಳಗೆ ಎಲ್ಲೆಡೆ ಬರಗಾಲ ಕಾಮಗಾರಿ ಪ್ರಾರಂಭಿಸಬೇಕು,ಕುಡಿಯುವ ನೀರು ನಿರ್ವಹಣೆಗಾಗಿ ಪ್ರತಿ ತಾಲೂಕಿಗೆ ರೂ 2 ಕೋಟಿ ವಿಶೇಷ ಅನುಧಾನ ಬಿಡುಗಡೆ ಮಾಡಬೇಕು. ಹಾಗೂ ಒಂದು ಲಕ್ಷದ ವರೆಗಿನ ಎಲ್ಲ ರೈತರ ಸಾಲಮನ್ನಾ ಮಾಡಬೇಕು ಇಲ್ಲದಿದ್ದರೆ ಅನಿವಾರ್ಯವಾಗಿ ಹೋರಾಟ ಮಾಡುವುದಾಗಿ ಕಾರಜೋಳ ಎಚ್ಚರಿಸಿದ್ದಾರೆ.ಬಜೆಪಿ ಅಧ್ಯಕ್ಷರಾದ ಕೆ.ಆರ್.ಮಾಚಪ್ಪನವರ, ಗುರುರಾಜ ಕಟ್ಟಿ, ಬಂಡು ಘಾಟಗೆ,ಕುಮಾರ ಹುಲಕುಂದ, ಬಸವರಾಜ ಮಾನೆ, ಸೋನಾಪ್ಪಿ ಕುಲಕಣರ್ಿ,ಶಬ್ಬಿರ ಮುಲ್ಲಾ, ಆನಂದ ಕುಲಕಣರ್ಿ ಮುಂತಾದವರಿದ್ದರು.