ಲೋಕದರ್ಶನ ವರದಿ
ಮಾಂಜರಿ 28: ಗಡಿನಾಡಿನಲ್ಲಿ ಜೊಲ್ಲೆ ಕುಟುಂಬವು ತಮ್ಮ ಕುಟುಂಬವನ್ನಲ್ಲದೇ ಇತರರ ಕುಟುಂಬಗಳನ್ನು ಬೆಳಕಾಗಿಸುತ್ತಿದ್ದಾರೆ. ಜ್ಯೊತಿಪ್ರಸಾದರನ್ನೇ ಪ್ರೇರಣೆಯಾಗಿಸಿ ಸಮಾಜೋನ್ನತಿಗೆ ಶ್ರಮಿಸುತ್ತಾ ಸಂಸ್ಥೆಯನ್ನು ಉತ್ತುಂಗಕ್ಕೇರಿಸುವ ಕಾರ್ಯ ಮಾಡಿದ್ದಾರೆ. ಜೊಲ್ಲೆ ಪರಿವಾರದಿಂದ ಸಮಾಜದಲ್ಲಿ ಯಾರು ಸಾಮಾನ್ಯ, ಅಸಾಮಾನ್ಯರಾಗಿರದೇ ಎಲ್ಲರೂ ಸಮಾನರು ಎನ್ನುವ ಭಾವವನ್ನು ತೋರಿಸಿಕೊಟ್ಟವರು ಜೊಲ್ಲೆ ಮನೆತನದವರು. ಪ್ರತಿಯೊಬ್ಬರಿಗೂ ಪ್ರೇರಣೆ ಸಿಗುವ ಸದುದ್ದೇಶದಿಂದ ಪ್ರೇರಣಾ ಉತ್ಸವ ಪ್ರಾರಂಭಿಸಿ ಜನಸಾಮಾನ್ಯರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ಕಣೇರಿಯ ಸಿದ್ದಗಿರಿ ಮಠದ ಪ.ಪೂ. ಮುಪ್ಪಿನ ಕಾಡಸಿದ್ದೇಶ್ವರ ಮಹಾಸ್ವಾಮಿಜೀ ಆಶಿರ್ವಚನ ನೀಡಿದರು.
ಗಡಿಭಾಗದ ಜನತೆಯ ಸುಧಾರಣೆಗಾಗಿ ಸಂಸ್ಥೆಯನ್ನು ಸ್ಥಾಪಿಸಿ, ಸತತವಾಗಿ ಶ್ರಮಿಸುತ್ತಿರುವ ಸಂಸ್ಥಾಪಕರ ಕಾರ್ಯ ಶ್ಲಾಘನೀಯ. ಹಲವು ದಿಶೆ, ಮೌಲ್ಯಗಳನ್ನು ಒಳಗೊಂಡ ಸಮಗ್ರ ಸಮನ್ವಯತೆಯು ಉತ್ತಮವಾಗಿದೆ. ಸಮಾಜಕ್ಕಾಗಿ ದುಡಿಯುವ, ಬಸವಾದಿ ಶರಣರ ತ್ತವ ಸಿದ್ದಾಂತಗಳನ್ನು ತಮ್ಮಲ್ಲಿ ಅಂತರ್ಗತ ಮಾಡಿಕೊಂಡು ಒಳ್ಳೆಯ ಬದುಕಾಗಿಸಿಕೊಳ್ಳಬೇಕು. ಶುದ್ಧ ಮನಸ್ಸಿನಿಂದ ದುಡಿದರೆ, ಅಭ್ಯುದಯ ಪ್ರಗತಿ ಸಾಧ್ಯವಾಗಲಿದ್ದು, ಶಿಕ್ಷಣ , ಸಹಕಾರ, ಸಮಾಜಸೇವಾ ಕೇತ್ರದಲ್ಲಿ ಸಮಾಜಕ್ಕೆ ಅತ್ಯುತ್ತಮ ಕೊಡುಗೆಗಳನ್ನು ಜೊಲ್ಲೆ ಉದ್ಯೊಗ ಸಮುಹ ನೀಡಿದೆ ಎಂದು ಬಾವನ ಸೌಂದತ್ತಿಯ ಓಂಕಾರ ಆಶ್ರಮದ ಪೂಜ್ಯ ಮಾತೋಶ್ರೀ ಭ್ರಮರಾಂಬಿಕಾ ದೇವಿ ಆಶೀರ್ವಚನ ನೀಡಿದರು.
ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದ ಆಯೋಜಿಸಲಾದ 7 ನೇ ವರ್ಷದ ಪ್ರೇರಣಾ ಉತ್ಸವದ ಅಂಗವಾಗಿ ಗುರುವಾರದಂದು ಶ್ರೀ ಬೀರೇಶ್ವರ ಶಾಖೆಗಳ ಶಾಖಾ ವ್ಯವಸ್ಥಾಪಕರಿಗೆ ಸತ್ಕಾರ, 5 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾದ ಫ್ಯಾನ್ಸಿ ಡ್ರೆಸ್ ಸ್ಪಧರ್ೆಯಲ್ಲಿ 23 ಜನ ಸ್ಪಧರ್ಾಳುಗಳು ಭಾಗವಹಿಸಿದ್ದು, ಯಕ್ಸಂಬಾದ ಸಯೀಶ ಜೊಲ್ಲೆ ಪ್ರಥಮ ಸ್ಥಾನ, ಚಿಕ್ಕೋಡಿಯ ಸಾನ್ವಿ ಡೋಂಗರೆ ದ್ವಿತೀಯ ಸ್ಥಾನ, ಯಕ್ಸಂಬಾದ ವೀರಗೌಡ ಪಾಟೀಲ ತೃತೀಯ ಸ್ಥಾನ ಪಡೆದುಕೊಂಡರು. ರಂಗೋಲಿ ಸ್ಪಧರ್ೆಯಲ್ಲಿ ಯಕ್ಸಂಬಾದ ಪದ್ಮಶ್ರೀ ರುಗೆ ಪ್ರಥಮ ಸ್ಥಾನ, ರೇಣುಕಾ ಪಾಟೀಲ ದ್ವಿತೀಯ ಸ್ಥಾನ, ಪುಜಾ ಚೌಗುಲೆ ತೃತೀಯ ಸ್ಥಾನ ಪಡೆದುಕೊಂಡರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸಹಕಾರ ಭಾರತಿಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಜಯಾನಂದ ಜಾಧವ ಹಾಗೂ ರಾಜ್ಯ ಸಹಕಾರ ಭಾರತಿ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾದ ಕಿರಣ ನಿಕಾಡೆ ಅವರನ್ನು ಜೊಲ್ಲೆ ಉದ್ಯೋಗ ಸಮೂಹದಿಂದ ಸತ್ಕರಿಸಲಾಯಿತು. ಅದೇ ರೀತಿ ನಿಪ್ಪಾಣಿ ಮತಕ್ಷೇತ್ರದ 8 ಜನ ಫಲಾನುಭವಿಗಳಿಗೆ ಮುಖ್ಯಮಮತ್ರಿ ಪರಿಹಾರ ನಿಧಿಯಿಂದ ವಿವಿಧ ಚಿಕಿತ್ಸಾ ಸಹಾಯಧನವಾಗಿ ಸುಮಾರು 2.67 ಲಕ್ಷ.ರೂ.ಗಳ ಪರಿಹಾರ ಧನವನ್ನು ವಿತರಿಸಲಾಯಿತು.
ಯುವ ಧುರೀಣ ಬಸವಪ್ರಸಾದ ಜೊಲ್ಲೆ ಮಾತನಾಡಿ ಗಡಿಭಾಗದಲ್ಲಿ ವಿವಿಧ ಕ್ಷೇತ್ರಗಳ ಅಭ್ಯುದಯಕ್ಕಾಗಿ ಪ್ರೇರಣಾ ಉತ್ಸವ ಪೂರಕವಾಗಿ ಸ್ಪಂದಿಸುತ್ತಿದೆ. ಯುವಕರಲ್ಲಿನ ಪ್ರತಿಭಾನ್ವೇಷಣೆ, ಯುವ ಸಂಪನ್ಮೂಲಗಳ ಗುಣಮಟ್ಟ ಹೆಚ್ಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವುದು, ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳ ಉಳಿವುಗಳ ಪ್ರಯತ್ನವೇ ನಮ್ಮ ಮೂಲ ಧ್ಯೇಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಬೀರೇಶ್ವರ ಅಧ್ಯಕ್ಷ ಜಯಾನಂದ ಜಾಧವ, ಕಲ್ಲಪ್ಪಾ ಜಾಧವ, ಬಂಡಾ ಘೋರ್ಪಡೆ ಜಯವಂತ ಭಾಟಲೆ, ಸಂಜಯ ಶಿಂತ್ರೆ, ಆಶಾ ಟವಳೆ, ಬಾಳಾಸಾಬ ಪಾಟೀಲ ಮುಂತಾದವರು ಮಾತನಾಡಿದರು.
ಶಾಕಿ ಶಶಿಕಲಾ ಜೊಲ್ಲೆ ಮಾತನಾಡಿ ನನ್ನ ದೇಶ ಜಗತ್ತಿನ ಧಾಮರ್ಿಕ, ಸುಸಂಸ್ಕೃತ ರಾಷ್ಟ್ರವಾಗಿದೆ. ಹಲವಾರು ಶರಣರಿಗೆ ಸಂತರಿಗೆ ಜ್ಞಾನ ನಿಡಿದ ನಾಡು ನಮ್ಮದಾಗಿದೆ. ಸಂಸಾರವೆಂಬ ಬಾಲಬಂಡಿಯಲ್ಲಿ ಸತಿಪತಿಗಳು ಚೆನ್ನಾಗಿ ಅನ್ಯೋನ್ಯವಾಗಿದ್ದರೆ ಅದುವೇ ಸ್ವರ್ಗದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಜಿ.ಪಂ.ಸದಸ್ಯೆ ಸುಮಿತ್ರಾ ಉಗಳೆ, ಕಲ್ಲಪ್ಪಾ ಜಾಧವ, ಡಿಕೆಎಸ್.ಎಸ್.ಕೆ ನಿದರ್ೇಶಕರಾದ ಅಜೀತ ದೇಸಾಯಿ, ಬಾಳಗೌಡ ರೇಂದಾಳೆ, ಅನ್ವರ್ ದಾಡಿವಾಲೆ, ಮಹೇಶ ಭಾತೆ, ಅಪ್ಪಾಸಾಹೇಬ ಜೊಲ್ಲೆ, ರಾಹುಲ ಪಾಟೀಲ, ಬಂಡಾ ಘೋರ್ಪಡೆ, ದಿನಕರ ಪೇಟಕರ, ಲಕ್ಷ್ಮಣ ಕಬಾಡೆ, ವಿಜಯ ರಾವುತ ನಿಪ್ಪಾಣಿ ನಗರಸಭೆ, ಸದಲಗಾ, ಚಿಕ್ಕೋಡಿ ಪುರಸಭೆಗಳ ಸದಸ್ಯರು, ಮಹಿಳಾ ಮೋಚರ್ಾದ ಸದಸ್ಯರು, ಸೇರಿದಂತೆ ಸಂಸ್ಥೆಯ ನಿದರ್ೇಶಕರು, ಸಿಬ್ಬಂದಿ ವರ್ಗದವರು ಹಾಗೂ ಜೊಲ್ಲೆ ಕುಟುಂಬದ ಹಿತೈಷಿಗಳು ಉಪಸ್ಥಿತರಿದ್ದರು. ರಮೇಶ ಪಾಟೀಲ ನಿರೂಪಿಸಿ ವಂದಿಸಿದರು.