ಲೋಕದರ್ಶನ ವರದಿ
ಮಹಾಲಿಂಗಪುರ 03: 22 ನೇಯ ವಾರ್ಡನಲ್ಲಿ 1976 ರಲ್ಲಿ ಅಂದರೆ ಸುಮಾರು 42 ವರ್ಷಗಳ ಹಿಂದೆ ತಯಾರಿಸಿದ ನೀರನ್ನು ಸಂಗ್ರಹಿಸುವ ಟಾಕಿ (ತೊಟ್ಟಿ)ಇದೆ. ಆ ಕಾಲದಲ್ಲಿ ಇಡೀ ಮಹಾಲಿಂಗಪುರ ಪಟ್ಟಣಕ್ಕೆ ಇಲ್ಲಿಂದಲೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು ಈಗ ಹತ್ತಾರು ವರ್ಷಗಳಿಂದಲೂ ಇದರಲ್ಲಿ ನೀರನ್ನು ತುಂಬಿರುವುದಿಲ್ಲ ಹಾಗೂ ಇದರ ಸರಿಯಾದ ನಿರ್ವಹಣೆ ಸಹ ಮಾಡಿರುವುದಿಲ್ಲ. ಹೀಗಾಗಿ ಸಿಮೇಂಟ್ ಕಳಚಿ ಒಳಗಿನ ಕಬ್ಬಿನ ಸಲಾಕೇಗಳು ಕಾಣುವ ಗಂಭೀರ ಸ್ಥಿತಿಯನ್ನು ಕಾಣಬಹುದು.
ಈ ಟಾಕಿಯು ಈ ರೀತಿ ಶಿತಿಲಗೊಂಡಿದ್ದು ಅಲ್ಲದೆ ಜೋರಾಗಿ ಗಾಳಿ ಬಿಟ್ಟಾಗ ಇಡೀ ನೀರಿನ ಟಾಕಿ ಅಲಗಾಡುವ ದೃಶ್ಯ ಬಹಳ ಭಯಾನಕ ವಾಗಿರುತ್ತದೆ. ಅಲ್ಲದೆ ಇದರ ಪಕ್ಕದಲ್ಲಿ ನೂರಾರು ಮನೆಗಳಿವೆ. ಹಾಗೂ ಅಂಗನವಾಡಿ ಕೇಂದ್ರ ಸಹ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಅಂಗನವಾಡಿ ಹಾಗೂ ಗಲ್ಲಿಯ ಮಕ್ಕಳು ತೊಟ್ಟಿ ಕೆಳಗಡೆ ಆಟವಾಡುತ್ತವೆ, ಇಲ್ಲಿಯ ಜನರು ಇದನ್ನೆಲ್ಲ ಅರಿತು ಯಾವ ಹೊತ್ತಿನಲ್ಲಿ ಎನಾಗುವುದೊ ಎಂದು ಭಯಭೀತರಾಗಿದ್ದಾರೆ.
ಅಕಾಸ್ಮಾತ್ ಅಪಾಯವೇನಾದರು, ಸಂಭವಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣ-ಹಾನಿ ಸಂಭವಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಸ್ಥಳಿಯ ವಾಡರ್ಿನ ನಾಗರಿಕರು ನೀರಿನ ಟಾಕಿ ಬಗ್ಗೆ ವಾಡರ್್ ಸದಸ್ಯರಿಗೂ ಹಾಗೂ ಸಮ್ಮಂದಪಟ್ಟ ಅಧಿಕಾರಿಗಳಿಗೂ ತಿಳಿಸಿದ್ದಾರೆ.
ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಅಮಾಯಕ ಜನರು ಅಪಾಯಕ್ಕೆ ಸಿಲುಕುವ ಮುಂಚೆ ನೀರಿನ ತೊಟ್ಟಿಯನ್ನು (ಟಾಕಿ) ತೆರವುಗೊಳಿಸಿ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಲು ಮೆಹ್ಬೂಬ್ ಜೀರಗಾಳ್, ನಜೀರ್ ಅತ್ತಾರ್, ರಫಿಕ್ ಮಾಲದಾರ್ಮಿಜರ್ಾಸಾಬ್ ಚಿಕ್ಕೋಡಿ, ಸಯ್ಯದ್ ಮೊಪಗಾರ್, ರಫಿಕ್ ಜಂಗಿ, ಮೆಹ್ಬೂಬ್ ಹುನ್ನೂರ್, ಇನ್ನೂ ಹಲವರು ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ.
ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಇತ್ತ ಗಮನಹರಿಸಿ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಲ್ಪಿಸಿ ಮುಗ್ದರಿಗೆ ಆಗುವ ಹಾನಿಯನ್ನು ತಪ್ಪಿಸಬೆಕಾಗಿದೆ.