ರಾಯಣ್ಣನ ಉತ್ಸವದಲ್ಲಿ ಜನಮನ ಸೆಳೆದ ಸಾಂಸ್ಕೃತಿಕ ಸೊಬಗು

ಬೈಲಹೊಂಗಲ,13- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತದಿಂದ ರಾಯಣ್ಣನ ವೇದಿಕೆಯಲ್ಲಿ ಶನಿವಾರ ರಾತ್ರಿ ನಡೆದ ನೃತ್ಯ, ಗಾಯನ, ಸಂಗೀತ, ನಾಟಕ, ನಗೆ ಹಬ್ಬ, ರಸಮಂಜರಿ ಪ್ರೇಕ್ಷಕರ ಜನಮನ ಸೆಳೆಯಿತು.

    ಉತ್ತರ ಕನರ್ಾಟಕದ ಹಾಸ್ಯ ಮಾತಿನ ಶೈಲಿಯಲ್ಲಿ ಪ್ರಸಿದ್ಧಿ ಹೊಂದಿರುವ ಮಹಾದೇವ ಸತ್ತಿಗೇರಿ ಅವರು ಹಾಸ್ಯ ಸಂಜೆಯ ಮಾತುಗಳು ಹಳ್ಳಿಗರನ್ನು ನಗೆಗಡಲ್ಲಿ ಮುಳುಗಿಸಿತು. ಸತ್ತಿಗೇರಿಯವರು  "ಒಕ್ಕಲಿಗ್ಯಾಗ ಚಕ್ಕಡಿ ಬೇಕ, ವ್ಯಾಪಾರಸ್ಥಗ ತಕ್ಕಡಿ ಬೇಕ ತೂಕಾ ಮಾಡಾಕ' ಜನಪದ ಹಾಸ್ಯ  ಹಾಡಿಗೆ ಜನ ಶಿಳ್ಳೆ ಚಪ್ಪಾಳೆ ಹಾಕಿ ಸಂಭ್ರಮಿಸಿದರು.    

   ಮಂಗಳೂರಿನ ಭರತ ನಾಟ್ಯ ಕಲಾವಿದೆ ರೆಮೆನ್ಯೂ ಇವೆಟ್ಟೆ  ತಲೆ ಮೇಲೆ ಹಾಗೂ ಎರಡೂ ಮುಂಗೈಗಳ ಮೇಲೆ ದೀಪ ಉರಿಯುವ ಮಡಿಕೆಗಳನ್ನಿಟ್ಟುಕೊಂಡು ನೃತ್ಯ ಮಾಡಿ ರೋಮಾಂಚನ ಮೂಡಿಸಿದರು. ಕುಂದಾಪೂರದ ಜಾದೂ ಕಲಾವಿದ ಸತೀಶ ಹೆಮ್ಮಾಡಿ ಯವರಂತೂ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದ ಸಾವಿರಾರು ಜನರನ್ನು  ಹೊಸದೊಂದು ಭ್ರಮಾ ಲೋಕಕ್ಕೆ ಕರೆದೊಯ್ದು  ಚಿತ್ರ ವಿಚಿತ್ರ ಯಕ್ಷೀಣಿ ಲೋಕವನ್ನೇ ತೋರಿಸಿದರು. ನೋಡುಗರ ಮೈನವಿರೇಳಿಸುವ ಭಾರತದಲ್ಲೇ ಮೊಟ್ಟ ಮೊದಲ ಮಿಲ್ಕ ಕ್ಯಾನ್ ಎಸ್ಕೇಪ ಜಾದೂ ಪ್ರದಶರ್ಿಸಿ ಪುಳಕಿತಗೊಳಿಸಿದರು.

 ಸಂಗೊಳ್ಳಿ ಗ್ರಾಮದ   ಸರಕಾರಿ ಪ್ರಾಥಮಿಕ ಶಾಲೆಯ  ರಾಯಣ್ಣ ಕಲಾ ತಂಡದವರು ಅಭಿನಯಿಸಿದ ಸಂಗೊಳ್ಳಿ ರಾಯಣ್ಣ ನೃತ್ಯ ರೂಪಕ ಅಭಿಮಾನಿಗಳಲ್ಲಿ ದೇಶ ಭಕ್ತಿ ಬಡಿದೆಬ್ಬಿಸುವಂತಿತ್ತು. ರಾಯಣ್ಣ ಪಾತ್ರಧಾರಿ ವಿದ್ಯಾಥರ್ಿ ಸ್ವತ: ರಾಯಣ್ಣ  ಬಂದಿದ್ದಾನೆನ್ನುವಷ್ಟರ ಮಟ್ಟಿಗೆ ಅಭಿನಯಿಸಿ ಶಭಾಷ್ಗಿರಿ ಗಿಟ್ಟಿಸಿಕೊಂಡ ಸಾಯಿಕಲಾ ತಂಡದಿಂದ ನೃತ್ಯ ರೂಪಕ, ಕಲಾವಿದೆ ಸಂಪದಾ ಇಂಚಲ ಭರತನಾಟ್ಯ, ಮಾರಿಹಾಳದ ಶಿವಲಿಂಗಪ್ಪ ಕರವಿನಕೊಪ್ಪ ಬೈಲಾಟ ಪದಗಳು, ಹಿರೇನಂದಿಹಳ್ಳಿ ದುಗರ್ಾಪರಮೇಶ್ವರಿ ಭಜನಾ ಸಂಘದ ಭಜನೆ, ಅಥಣಿ ಚನ್ನಪ್ಪ ಕಾಂಬ್ಳೇ ಜಾನಪದ ಸಂಗೀತ, ಹುಬ್ಬಳ್ಳಿ ಸ್ವರ್ಣ ಮಯೂರಿ ನೃತ್ಯ ಸಂಸ್ಥೆಯ ಜಾನಪದ ನೃತ್ಯ, ಸುಗ್ಗಿ ಕುಣಿತ ನೋಡುಗರ ಗಮನ ಸೆಳೆಯಿತು. 

  ನಾದ ಸಂಗೀತ ಶಾಲಾ ತಂಡದ ಜಾನಪದ ಗೀತೆ, ಮಂಗಳೂರ ರೆಮೆನ್ಯೂ ಇವೆಟ್ಟೆಯ ಭರತನಾಟ್ಯ, ರಾಮದುರ್ಗ ಕಲಾವಿದೆ ಪೂಜಾ ವಿಭೂತಿಮಠ ಕಲಾ ತಂಡದ ರಸಮಂಜರಿ, ಬೈಲವಾಡ ನಿಜಗುಣಿ ನಾಟ್ಯ ಸಂಘದ ನಿಜಶಿವಯೋಗಿ ಸಾಮಾಜಿಕ ನಾಟಕ ನಡೆಯಿತು. ಕಮಕೇರಿ ಫಕ್ಕೀರವ್ವಾ ಮೇತ್ರಿ ಚೌಡಕಿ ಪದ, ವಕ್ಕುಂದ ಸಿದ್ಧಾರೂಢ ಭಜನಾ ಮಂಡಳಿ ಭಜನೆ, ಅಥಣಿ ವಿಲಾಸ ಕಾಂಬ್ಳೇ ಕನರ್ಾಟಕ ಹಿಂದೂಸ್ತಾನಿ ಸಂಗೀತ, ರಾಯಭಾಗ ಅಂದ ಕಲಾವಿದ ಕುಮಾರ ಬಡಿಗೇರ ಸುಗಮ ಸಂಗೀತ, ಇಂಗಳಗಿ ಮಂಜುನಾಥ ಹೊಸಬಾಳ ಭಾವ ಗೀತೆ, ರಾಮದುರ್ಗ ಸಿದ್ಧ ಮೊಟೆ ಡೊಳ್ಳಿನ ಪದ, ಬೆಳಗಾವಿ ಯಾದವೇಂದ್ರ ಪೂಜೇರಿ ವೈಲಿನ ವಾದನ, ಸುಗಮ ಸಂಗೀತ, ಬೆಂಗಳೂರ ಆರಾಧನಾ ಭರತನಾಟ್ಯ ಶಾಲೆಯ ವಿದ್ವಾನ ನಾಗಭೂಷಣ ಭರತನಾಟ್ಯ ಆಕರ್ಷಕವಾಗಿ ನಡೆದವು. 

ತಡ ರಾತ್ರಿಯವರೆಗೆ  ವೇದಿಕೆಯ ಮುಂಭಾಗದಲ್ಲಿ ಕಲಾವಿದರು ಜನರನ್ನು ತಮ್ಮ ಹಿಡಿತದಲ್ಲಿ ಹಿಡಿಟ್ಟುಕೊಳ್ಳಲು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾದವು.