ದಾಳಿಂಬೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯಾ ಬೆಳೆದು ಯಶ ಸಾಧಿಸಿದ ಕೃಷಿಕ


ಕೊಪ್ಪಳ 18: ದಾಳಿಂಬೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯಾ ಬೆಳೆದು ಯಶ ಸಾಧಿಸಿದ್ದಾರೆ ಕೊಪ್ಪಳ ಜಿಲ್ಲೆ ಯಲಬುಗರ್ಾ ತಾಲೂಕಿನ ಕೃಷಿಕ ಕಳಕಯ್ಯ ಹಿರೇಮಠ ಅವರ ಯಶೋಗಾಥೆ.  

ಯಲಬುಗರ್ಾ ತಾಲೂಕು ವಿವಿಧ ತೋಟಗಾರಿಕೆ ಬೆಳೆಗಳಿಗೆ ಪೂರಕ ವಾತಾವರಣ ಹೊಂದಿದೆ.  ದ್ರಾಕ್ಷಿ ನಂತರ ದಾಳಿಂಬೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿವೆ.  ಅಂಗಮಾರಿ ರೋಗದಿಂದ ಕಡಿಮೆಯಾಗಿದ್ದ ದಾಳಿಂಬೆ ಬೆಳೆ ವಿಸ್ತೀರ್ಣ ಮತ್ತೆ ಹೆಚ್ಚಾಗುತ್ತಿದೆ.  ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದ್ದು, ರೈತರು ದಾಳಿಂಬೆ ಬೆಳೆಯಲು ಮತ್ತೆ ಮುಂದೆ ಬರುತ್ತಿದ್ದಾರೆ.

ಅಂಥವರಲ್ಲಿ ಜಿ.ಜರಕುಂಠಿ ಗ್ರಾಮದ ಕಳಕಯ್ಯ ತಂದೆ ಶರಣಯ್ಯ ಹಿರೇಮಠರವರು ಒಬ್ಬರು.  ಮೂಲತಃ ಕೃಷಿ ಕುಟುಂಬದಿಂದ ಬಂದ ಕಳಕಯ್ಯನವರು ಹೊಲದಲ್ಲಿಯೇ ಮನೆ ಮಾಡಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ 2017-18 ನೇ ಸಾಲಿನಲ್ಲಿ 3600 ದಾಳಿಂಬೆ ಗಿಡಗಳನ್ನು 8*6 ಅಡಿ ಅಂತರದಲ್ಲಿ ನಾಟಿ ಮಾಡಿದ್ದರು.  ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಆಗಿನ ಪ್ರಭಾರಿ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರಾದ ಮಂಜುನಾಥ ಲಿಂಗಣ್ಣನವರ ಮಾರ್ಗದರ್ಶನದಲ್ಲಿ ಕೇಸರ್ ಎನ್ನುವ ತಳಿ ನಾಟಿ ಮಾಡಿ, ಇಲಾಖಾ ಅಧಿಕಾರಿಗಳ ಸಲಹೆಯಂತೆ 2.5 ವರ್ಷಗಳವರೆಗೂ ಖಾಲಿ ಜಾಗ ಬಿಡದೇ ಅಂತರ ಬೆಳೆಯಾಗಿ ಕಳೆದ ವರ್ಷ ಆಗಷ್ಟ ತಿಂಗಳಿಲ್ಲಿ ಸುಮಾರು 3500 ರಷ್ಟು ಥೈವಾನ್ ರೆಡ್ ಲೇಡಿ ಎಂಬ ತಳಿ ನಾಟಿ ಮಾಡಿದ್ದಾರೆ.  2 ರಿಂದ 2.5 ವರ್ಷಗಳಲ್ಲಿ ಪಪ್ಪಾಯದಿಂದ ಚೆನ್ನಾಗಿ ಆದಾಯ ಮಾಡಿಕೊಂಡು ನಂತರ ದಾಳಿಂಬೆ ಫಸಲಿಗೆ ಬಿಡಬೇಕೆನ್ನುವ ಇವರ ನಿಧರ್ಾರ ಸರಿಯಾಗಿಯೇ ಇದೆ.

ಅದರಂತೆ ಮಾರ್ಚ-ಎಪ್ರಿಲ್ನಲ್ಲಿಯೇ ಹಣ್ಣು ಬಿಡಲು ಆರಂಭಿಸಿದ ಪಪ್ಪಾಯಾ ಇದುವರೆಗೂ ಸುಮಾರು 80 ಟನ್ ಇಳುವರಿ ಕೊಟ್ಟಿದೆ.  ರಂಜಾನ್ ಹಬ್ಬದಲ್ಲಿ ಉತ್ತಮ ಫಸಲು ನೀಡಿದ ಪಪ್ಪಾಯಾದಿಂದ ಸರಾಸರಿ ಪ್ರತಿ ಹಣ್ಣಿಗೆ ರೂ. 13.00 ರಂತೆ ಇದುವರೆಗೂ ಸುಮಾರು ರೂ. 10.00 ಲಕ್ಷಕ್ಕೂ ಹೆಚ್ಚು ಆದಾಯ ಪಡೆದಿದ್ದಾರೆ.  ಖಚರ್ೆಲ್ಲಾ ಹೋಗಿ ರೂ. 7.00 ಲಕ್ಷ ನಿವ್ವಳ ಆದಾಯ ಪಡೆದಿದ್ದಾರೆ.  "ಇದುವರೆಗೂ ನಾನು ಜಮೀನಿಗೆ ಮಾಡಿದ ಖಚರ್ೆಲ್ಲ ಹೋಗಿ ರೂ. 5-6 ಲಕ್ಷ ಲಾಭ ಆಗಿದೆ.  ಇದರಲ್ಲೇ ಹೊಸ ಬುಲೆಟ್ ವಾಹನ ಖರೀದಿಸಿದೆ" ಎಂದು ಹರ್ಷ ವ್ಯಕ್ತಪಡಿದ್ದಾರೆ.  "ನಾನು ಮುಂದಿನ ವರ್ಷ ದಾಳಿಂಬೆ ಫಸಲಿಗೆ ಬಿಡುವ ಗುರಿ ಹೊಂದಿದ್ದು, ಇನ್ನು ಮುಂದೆ ಬರುವ ಆದಾಯವೆಲ್ಲ ಲಾಭವೇ.  ಪಪ್ಪಾಯದಿಂದ ಇನ್ನೂ 100 ಟನ್ಗಳಷ್ಟು ಇಳುವರಿ ಬಂದು ಒಳ್ಳೆಯ ಬೆಲೆ ಇದ್ದಲ್ಲಿ, ಇನ್ನೂ ಹತ್ತಾರು ಲಕ್ಷ ನನಗೆ ಆದಾಯ ಆಗುತ್ತದೆ.   

ಇಲಾಖಾ ಪಾತ್ರ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತ ಕಳಕಯ್ಯನವರಿಗೆ ಸುಮಾರು 1.00 ಲಕ್ಷ ಸಹಾಯಧನ ದೊರೆತಿದೆ.  ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ದಾಳಿಂಬೆಗೆ ಸಹಾಯಧನ ನೀಡಲಾಗಿದೆ.  ಒಂದು ಕಾಲದಲ್ಲಿ ಬರಗಾಲದಿಂದಾಗಿ ರೂ.50000 ದಷ್ಟು ಆದಾಯ ಪಡೆಯದ ಕಳಕಯ್ಯ ಲಕ್ಷಗಟ್ಟಲೇ ಆದಾಯ ಪಡೆದಿದ್ದಾರೆ. ಮುಂದೆ ದಾಳಿಂಬೆ ಇವರ ಕೈ ಹಿಡಿದಲ್ಲಿ ಇವರೊಬ್ಬ ಯಶಸ್ವಿ ಶ್ರೀಮಂತ ಕೃಷಿಕರಾಗುವದರಲ್ಲಿ ಯಾವುದೇ ಸಂಶಯ ಇಲ್ಲ" ಎನ್ನುತ್ತಾರೆ ಮಾನ್ಯ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ಲಿಂಗನಗೌಡ ಪಾಟೀಲರವರು.   

ಕಳಕಯ್ಯನವರೊಬ್ಬ ಮಾದರಿ ದಾಳಿಂಬೆ ಬೆಳೆಗಾರ. ಇವರ ಕೃಷಿ ಇತರಿಗೆ ಸ್ಪೂತರ್ಿ" ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ ಕಾಳೆ ಅವರು.  ವಾಮನಮೂತರ್ಿ ವಿಷಯ ತಜ್ಞರು ಆಗಿಂದ್ದಾಗ್ಗೆ ಸಸ್ಯ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಕಳಕಯ್ಯ ಹಿರೇಮಠ ಮೊ.ಸಂ. 9880950810, ಉಮೇಶ ಕಾಳೆ. ಮೊ.ಸಂ. 7899276326 ಕ್ಕೆ ಸಂಪಕರ್ಿಸಬಹುದು ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.