ಯಲ್ಲಾಪುರ 20: ರಾಷ್ಟ್ರದ ಸ್ವಾಭಿಮಾನ ಮತ್ತು ದೇಶ ಕಟ್ಟಲು ಬಿಜೆಪಿ ಮತ ನೀಡಲು ಮತದಾರರು ಉತ್ಸುಕರಾಗಿದ್ದಾರೆ. 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುತದಿಂದ ಅಧಿಕಾರಗಳಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮತ ನೀಡಿ ಬರಲಿರುವ ಏ. 23 ರಂದು ನಡೆಯುವ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ನಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಸೈನಿಕ್ರ ಬುಲೆಟ್ಗೆ ಶಕ್ತಿ ತುಂಬುವ ಕೆಲಸ ಮತದಾರ ಮಾಡಬೇಕಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸುಸ್ಥಿರ ಅಭಿವೃದ್ಧಿ ಕಂಡಿದೆ ಎಂದು ಕೇಂದ್ರ ಸಚಿವ ಹಾಗೂ ಉತ್ತರಕನ್ನಡ ಲೋಕಸಭಾ ಬಿಜೆಪಿ ಅಭ್ಯಥರ್ಿ ಅನಂತಕುಮಾರ ಹೆಗಡೆ ಹೇಳಿದರು.
ಅವರು ಶುಕ್ರವಾರ ಸಂಜೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ, ಮತಯಾಚಿಸಿ ನಂತರ ದೇವಿ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಿರುತೆರೆ ಚಿತ್ರ ನಟಿ ಮಾಳವಿಕಾ ಅವಿನಾಶ ಮಾತನಾಡಿ, ಈ ಹಿಂದೆ 10 ವರ್ಷ ಆಡಳಿತ ನಡೆಸಿದ ಯು.ಪಿ.ಎ ಸಕರ್ಾರದ ಅವಧಿಯಲ್ಲಿ ನಮ್ಮ ದೇಶದ ಪರಿಸ್ಥಿತಿ ಕುಗ್ಗಿಹೋಗಿ, ಪ್ರತಿಯೊಬ್ಬ ಭಾರತೀಯರು ಆತಂಕಪಟ್ಟಿದ್ದರು. ಹೂಡಿಕೆದಾರರು, ವ್ಯಾಪಾರಸ್ಥರು ಭಾರತದ ಜೊತೆ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರು. ನಂತರ ಗುಜರಾತ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನಡೆಸಿದ ನರೇಂದ್ರ ಮೋದಿಯವರಿಗೆ ಈ ದೇಶದ ಜನತೆ ಅಧಿಕಾರ ನೀಡುವ ಮೂಲಕ ನಮ್ಮ ದೇಶದ ಪರಿಸ್ಥಿತಿಯನ್ನು ಬದಲಾಯಿಸಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ನೀಡುವ ಮೂಲಕ ರಾಷ್ಟ್ರರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ. ಭ್ರಷ್ಟಾಚಾರ ನಿಮರ್ೂಲನೆ, ರಾಷ್ಟ್ರ ರಕ್ಷಣೆಯಲ್ಲಿ ರಾಜಿಯಿಲ್ಲದ ನಿಧರ್ಾರ ಕೈಗೊಂಡ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ದಿಟ್ಟ ನಡೆ, ನೇರ ನುಡಿಯ ಮೂಲಕ ಸ್ವಾಭಿಮಾನ ಹೊಂದಿವರಾಗಿದ್ದಾರೆ. ಏ. 23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಅನಂತಕುಮಾರ ಹೆಗಡೆಯವರಿಗೆ ನೀಡಬೇಕು ಎಂದರು
ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ. ನವೀನ ಮಾತನಾಡಿ, ಅನಂತಕುಮಾರ ಹೆಗಡೆಯವರನ್ನು ಸಂಸದರನ್ನಾಗಿ ಆಯ್ಕೆ ಮಾಡುವ ಮೂಲಕ ನಿಮ್ಮ ಜಿಲ್ಲೆಯ ಮಗನನ್ನು ರಾಷ್ಟ್ರಕ್ಕೆ ಸಮಪರ್ಿಸಿದ ಜಿಲ್ಲೆಯ ಜನರು ಸೌಭಾಗ್ಯವಂತರು. ಈ ಚುನಾವಣೆಯಲ್ಲಿ ಮತ್ತೊಮ್ಮೆ ಇವರನ್ನು ಗೆಲ್ಲಿಸುವ ಮೂಲಕ ಹೊಸ ಇತಿಹಾಸ ರಚಿಸಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಜಿ.ನಾಯ್ಕ, ರಾಜ್ಯ ವಕ್ತಾರ ಪ್ರಮೋದ ಹೆಗಡೆ, ಬಿಜೆಪಿ ಮಹಿಳಾ ಮೋಚರ್ಾ ಜಿಲ್ಲಾಧ್ಯಕ್ಷೆ ರೇಖಾ ಹೆಗಡೆ, ಜಿ.ಪಂ ಸದಸ್ಯೆ ಶ್ರುತಿ ಹೆಗಡೆ, ತಾ.ಪಂ ಸದಸ್ಯೆ ಚಂದ್ರಕಲಾ ಭಟ್ಟ, ಪ.ಪಂ ಸದಸ್ಯೆ ಶ್ಯಾಮಿಲಿ ಪಾಟಣಕರ, ಪಕ್ಷದ ಪ್ರಮುಖರಾದ ನಮೀತಾ ಬೀಡಿಕರ, ಯುವ ಮೋಚರ್ಾ ಅಧ್ಯಕ್ಷ ಪ್ರಸಾದ ಹೆಗಡೆ, ನಗರ ಘಟಕಾಧ್ಯಕ್ಷ ಬಾಬು ಬಾಂದೇಕರ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಾ ಘಟಕಾಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ಯುವ ಮೋಚರ್ಾ ಕಾರ್ಯಕಾರಿಣಿ ಸದಸ್ಯ ನರಸಿಂಹ ಕೋಣೇಮನೆ ನಿರೂಪಿಸಿದರು. ವೆಂಕಟರಮಣ ಬೆಳ್ಳಿ ವಂದಿಸಿದರು.