ಕೊಪ್ಪಳ 13: ದೇಶದ ಭವಿಷ್ಯದ ಜನನಾಯಕರಾಗಿ ರೂಪುಗೊಳ್ಳಲಿರುವ ವಿದ್ಯಾಥರ್ಿಗಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಮಾಹಿತಿ ಹಾಗೂ ಸಂಸತ್ತಿನ ಪರಿಕಲ್ಪನೆ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್.ವಿ. ಮೇಳಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿ.ಪಂ. ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಲಾದ ಜಿಲ್ಲಾ ಮಟ್ಟದ "ಯುವ ಸಂಸತ್ ಸ್ಪಧರ್ೆ ಕಾರ್ಯಕ್ರಮದಲ್ಲಿ ತೀಪರ್ುಗಾರರಾಗಿ ಆಗಮಿಸಿ ಅವರು ಮಾತನಾಡಿದರು.
ಭಾರತ ದೇಶವು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳನ್ನು ಹಾಗೂ ಯುವ ಜನಾಂಗವನ್ನು ಹೊಂದಿದ ರಾಷ್ಟ್ರವಾಗಿದೆ. ವಿದ್ಯಾಥರ್ಿಗಳು ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಕಲಾಪದ ವಿವಿಧ ವಿದ್ಯಾಮಾನಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಸಂಸತ್ ರಚಿಸಲಾಗುತ್ತದೆ. ಯುವ ಶಕ್ತಿಯು ರಾಷ್ಟ್ರದ ಮಹತ್ವದ ಶಕ್ತಿಯಾಗಿದೆ ಎಂದು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಆದ್ದರಿಂದ ವಿದ್ಯಾಥರ್ಿಗಳು ಪ್ರಜಾಪ್ರಭುತ್ವ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಸದನದಲ್ಲಿ ಸಭಾ ಅಧ್ಯಕ್ಷರ ಸ್ಥಾನವು ಪ್ರಮುಖವಾಗಿದ್ದು, ಆಯ್ಕೆಯಾದಂತಹ ಜನಪ್ರತಿನಿಧಿಗಳಿಗೆ ಸಭಾ ಅಧ್ಯಕ್ಷರು ಪ್ರಮಾಣ ಭೋಧಿಸುವರು. ಸಭಾಪತಿಗಳ ಆಸನದ ಎದುರಗಡೆಯ ಬಲ ಭಾಗದಲ್ಲಿ ಆಡಳಿತ ಪಕ್ಷದವರು, ಬಲ ಭಾಗದಲ್ಲಿ ವಿರೋಧ ಪಕ್ಷದವರು ಕುಳಿತುಕೊಳ್ಳುವರು. ಸಭಾಧ್ಯಕ್ಷರು ಆಗಮಿಸುವಾಗ ಸದಸ್ಯರೆಲ್ಲರು ಎದ್ದು ನಿಂತು ಗೌರವಿಸಬೇಕು ಮತ್ತು ಅಧ್ಯಕ್ಷರು ತಮ್ಮ ಆಸನ ಸ್ವೀಕರಿಸುವವರೆಗೆ ಸದಸ್ಯರೆಲ್ಲ ನಿಲ್ಲಬೇಕು. ಸದಸ್ಯರು ಯಾವುದೇ ಪ್ರಶ್ನೆಗಳನ್ನು ಕೇಳಬೇಕಾದರೆ ಮಾನ್ಯ ಸಭಾ ಅಧ್ಯಕ್ಷರೆ ಎಂದು ಕೇಳಬೇಕಾಗುತ್ತದೆ. ಇದಲ್ಲದೇ ವಿವಿಧ ನಿಯಮಗಳನ್ನು ವಿದ್ಯಾಥರ್ಿಗಳಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ "ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪಧರ್ೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ವಿದ್ಯಾಥರ್ಿಗಳು ಸಂಸಧೀಯ ಪಟುಗಳಾಗುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡು ಈಗಿನಿಂದಲೇ ಅವರನ್ನು ಉತ್ತಮ ನಾಯಕರನ್ನಾಗಿ ರೂಪಿಸಲು ಈರೀತಿಯ ಸ್ಪಧರ್ೆಗಳು ಸಹಕಾರಿಯಾಗಲಿವೆ. ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪಧರ್ೆ ಕಾರ್ಯಕ್ರಮದಲ್ಲಿ ನಾಲ್ಕು ತಂಡಗಳು ಭಾಗಿಯಾಗಿದ್ದು, ಆರೋಗ್ಯ, ಶಿಕ್ಷಣ, ಕೃಷಿ, ಕ್ಷೇಮಾಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಚಚರ್ೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ಒಂದು ತಂಡವನ್ನು ಜಿಲ್ಲೆಯ ವತಿಯಿಂದ ಆಯ್ಕೆ ಮಾಡಿ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯುವ ರಾಜ್ಯ ಮಟ್ಟದ ಯುವ ಸಂಸತ್ ಸ್ಪಧರ್ೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೊಪ್ಪಳ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್.ವಿ. ಮೇಳಿ ಅವರು ಹೇಳಿದರು.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸಂಸತ್ ತಂಡದ ಸಭಾಪತಿಯಾದ ಐಶ್ವರ್ಯ ಬೆಟಗೇರಿ ಎಂಬ ವಿದ್ಯಾಥರ್ಿನಿಯಿಂದ ಎಲ್ಲಾ ವಿದ್ಯಾಥರ್ಿಗಳು ಪ್ರಮಾಣ ವಚನ ಸ್ವೀಕರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ಪಧರ್ೆಗಳಲ್ಲಿ ಕಲಾಪ ಪ್ರಾರಂಭಕ್ಕೂ ಮುನ್ನ ಮಾಜಿ ಪ್ರಧಾನಿ ಅಟಲ್ ಬೀಹಾರಿ ವಾಜಪೇಯಿ, ಕೇಂದ್ರ ಸಚಿವ ಅನಂತ ಕುಮಾರ, ಮಾಜಿ ಸಚಿವ ಜಾಫರ್ ಶರೀಫ್, ಮಾಜಿ ಕೇಂದ್ರ ಮತ್ತು ರಾಜ್ಯ ಸಚಿವ ಹಾಗೂ ಕನ್ನಡ ಚನಲ ಚಿತ್ರನಟ ಅಂಬರೀಶ ಸೇರಿದಂತೆ ವಿವಿಧ ಗಣ್ಯರ ನಿಧನಕ್ಕೆ ಎಲ್ಲಾ ತಂಡಗಳಿಂದ ಸಂತಾಪ ಸೂಚಿಸಿ ಒಂದು ನಿಮಿಷ ಮೌನ ಆಚರಿ ಸ್ಪಧರ್ೆ ಪ್ರಾರಂಭಿಸಿದ್ದು, ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಆರ್.ಹೆಚ್ ಪತ್ತಾರ ಅವರು ವಹಿಸಿದ್ದರು. ಫ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶಗೌಡರ, ಕೊಳೂರು ಸರಕಾರಿ ಫ್ರೌಢ ಶಾಲೆ ಮುಖ್ಯ ಶಿಕ್ಷಕ ಅಶೋಕ ಕುಲಕಣರ್ಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕನ್ನಡ ವಿಷಯ ಪರಿವೀಕ್ಷಕ ನೀಲಕಂಠಪ್ಪ ಕಂಬಳಿ ಮತ್ತಿತರಿದ್ದರು. ವೀರಣ್ಣ ಮೇಟಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.