ರೈತರ ಕಣ್ಣಿನಲ್ಲಿ ರಕ್ತ ಬರುವ ಪ್ರಸಂಗ ತಂದಿದೆ: ಶಿವಲಿಂಗಶಿವಾಚಾರ್ಯ ಶ್ರೀಗಳು

ಲೋಕದರ್ಶನವರದಿ

ಶಿಗ್ಗಾವಿ 09ಃ ಸಕರ್ಾರ, ಪಂಚಾಯತಿ ಹಾಗೂ ಜನಪ್ರತಿನಿಧಿಗಳು ಮಾಡದೇ ಇರುವ ಕೆಲಸವನ್ನು ಶ್ರೀಕಾಂತ ದುಂಡಿಗೌಡ್ರ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ  ಎಂದು ಗಂಜಿಗಟ್ಟಿ ಮಠದ ಶಿವಲಿಂಗಶಿವಾಚಾರ್ಯ ಮಹಾಶ್ರೀಗಳು ಹೇಳಿದರು.

ಬನ್ನೂರಿನ ಸಕರ್ಾರಿ ಶಾಲೆಯ ಆವರಣದಲ್ಲಿ ಭಾರತ್ ಸೇವಾ ಸಂಸ್ಥೆ ವತಿಯಿಂದ 6 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಶಿರ್ವಚಿಸಿ ನೂತನ ವದುವರರಿಗೆ ಆಶಿರ್ವದಿಸಿ ಮಾತನಾಡಿದ ಶ್ರೀಗಳು ಇಂದಿನ ಸಕರ್ಾರಗಳು ಬರಿ ಬೇಜಬ್ದಾರಿ ಹೇಳಿಕೆಗಳನ್ನು ನೀಡುತ್ತಾ ರೈತರ ಸಾಲ ಮನ್ನಾ ಮಾಡದೆ ರೈತರ ಕಣ್ಣಿನಲ್ಲಿ ರಕ್ತ ಬರುವ ಪ್ರಸಂಗ ತಂದಿದ್ದಾರೆ ಎಂದು ವಿಷಾದಿಸಿದರು. ಶ್ರೀಕಾಂತ ದುಂಡಿಗೌಡ್ರ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ ವಾರು ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಈ ಒಂದು ಒಳ್ಳೆಯ ಸಮಾಜ ಮೂಖಿ ಕೆಲಸಕ್ಕೆ ಸದಾ ನನ್ನ ಆಶಿವರ್ಾದ ಹಾಗೂ ಬೆಂಬಲ ಇರುತ್ತದೆ ಎಂದು ಹೇಳಿದರು.

ಭಾರತ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ತಾಲೂಕಿನಲ್ಲಿ ಬನ್ನೂರ ಗ್ರಾಮದ ಮಣ್ಣಿನ ಮಹಿಮೆ ರಾಜ್ಯಕ್ಕೆ ತಿಳಿದಿದೆ, ಈ ನಿಟ್ಟಿನಲ್ಲಿ ಯಾವ ಜನಪ್ರತಿನಿಧಿಗಳು ತಮ್ಮ ಮಕ್ಕಳ ಮದುವೆಗೆ ನೂರಾರು ಕೋಟಿ ರೂಗಳನ್ನು ವ್ಯಯಮಾಡುತ್ತಾರೆ.

   ಆದರೆ ಇಂತಹ ಉಚಿತ ಸಾಮೂಹಿಕ ವಿವಾಹವನ್ನು ಮಾಡಿ ಬಡವರ ಋಣವನ್ನು ತಿರಿಸುವ ಕೆಲಸಗಳು ಇನ್ನೂ ತಾಲೂಕಿನಲ್ಲಿ ಆಗಿಲ್ಲ, ಮುಂದಿನ ದಿನಗಳಲ್ಲಿ ದೇವರು ನನಗೆ ಅವಕಾಶ ಕೊಟ್ಟರೆ ಜಿಲ್ಲಾ ಪಂಚಾಯತ ವಾರು ವರ್ಷಕ್ಕೆ 5 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳುತ್ತೆನೆ ಈ ಒಂದು ಕೆಲಸದಲ್ಲಿ ಒಂದು ಭಾಗ ಮಾತ್ರ ನಾನು ಉಳಿದ 99 ಭಾಗ ನಮ್ಮೂರಿನ ಜನತೆಗೆ ಸಲ್ಲುತ್ತದೆ ಎಂದರು.

ಮುಖ್ಯ ಶಿಕ್ಷಕರಾದ ಬಿ ಶ್ರೀನಿವಾಸ್ ಪ್ರಾಸ್ಥಾವಿಕವಾಗಿ ಮಾತನಾಡಿ  ತಾಲೂಕಿನಲ್ಲಿ ಭಾರತ್ ಸೇವಾ ಸಂಸ್ಥೆಯು ಸಮಾಜಮೂಖಿ, ಸಾಂಸ್ಕೃತಿಕ, ಶೈಕ್ಷಣಿಕ, ಆದ್ಯಾತ್ಮಿಕ ಪರವಾದ ಕೆಲಸಗಳನ್ನು ಮಾಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಶ್ರೀಕಾಂತ ದುಂಡಿಗೌಡ್ರ ತಮ್ಮ ದುಡಿಮೆಯಲ್ಲಿ ಬಂದ ಲಾಭದಲ್ಲಿ  ಶೇ 25 ರಷ್ಟು  ಹಣವನ್ನು ಇಂತಹ ಸಮಾಜಿಕ ಕಾರ್ಯಗಳಲ್ಲಿ ಬಳಸುತ್ತಿದ್ದಾರೆ ಇದು ನಮ್ಮ ತಾಲೂಕಿನ ಭಾಗ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಗಣ್ಯಮಾನ್ಯರನ್ನು ಭಾರತ ಸೇವಾ ಸಂಸ್ಥೆ ಹಾಗೂ ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಭಳಗದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬನ್ನೂರಿನ ಹಿರೇಮಠದ ಶ್ರೀಗಳು, ಚಿಕ್ಕಮಠದ ಶ್ರೀಗಳು,  ಹಿರೆಮಲ್ಲೂರ ಹೀರೆಮಠದ ಶ್ರೀಗಳು, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಉಪಾಧ್ಯಕ್ಷ ಪರಶುರಾಮ ಸೊನ್ನದ, ಸದಸ್ಯರಾದ ಸುಭಾಷ ಚೌವ್ಹಾಣ, ಕೆಸಿಸಿ ಬ್ಯಾಂಕ ನಿದರ್ೇಶಕ ಗಂಗಣ್ಣ ಸಾತಣ್ಣವರ, ತಾಪಂ ಸದಸ್ಯರಾದ ಶ್ರೀಕಾಂತ ಪೂಜಾರ, ರಾಜು ವೆಣರ್ೇಕರ, ಮುಖಂಡರಾದ ಡಿ,ಎಸ್,ಮಾಳಗಿ, ಎನ್,ಸಿ,ಪಾಟೀಲ್, ಫಕ್ಕೀರಪ್ಪ ಕುಂದೂರ, ಕರೆಪ್ಪ ಕಟ್ಟಿಮನಿ, ಗುರುನಗೌಡ ಪಾಟೀಲ, ಶಿವಾನಂದ ಬಾಗೂರ, ಸಿದ್ರಾಮಣ್ಣ ಯಲಿಗಾರ, ಮಂಜುನಾಥ ದುಬೆ, ಕೆದಾರಪ್ಪ ಬಗಾಡೆ, ಅನಿಲ್ ಸಾತಣ್ಣವರ, ಈಶ್ವರಗೌಡ ಪಾಟೀಲ್, ಮಲ್ಲೇಶಪ್ಪ ಚೋಟಪ್ಪನವರ, ತಿಪ್ಪಣ್ಣ ಸಾತಣ್ಣವರ, ವಿರೇಶ ಆಜೂರ, ಶಿವಾನಂದ ಬಾಗೂರ, ಅರುಣ ಹುಡೇದಗೌಡ್ರ, ಅಣ್ಣಪ್ಪ ಬಡ್ಡಿ ಸೇರಿದಂತೆ ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಭಳಗದ ಸದಸ್ಯರು ಉಪಸ್ಥಿತರಿದ್ದರು.

ಶಿಕ್ಷಕ ಅರುಣ ಹುಡೆದಗೌಡ್ರ ಸ್ವಾಗತಿಸಿ ವಂದಿಸಿದರು.