ಚಿಕ್ಕೋಡಿ 27: ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕಾಮಗಾರಿಯೊಂದಿಗೆ ಗ್ರಾಮೀಣ ಬಡವರಿಗೆ ಆಧಾರವಾಗಿ ನೈಸಗರ್ಿಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವದು, ಆಥರ್ಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಾ ಪಂ ಐಇಸಿ ಸಂಯೋಜಕ ರಂಜೀತ ಕಾಂಬಳೆ ಹೇಳಿದರು.
ಕೆ ಎಲ್ ಇ ಸಂಸ್ಥೆಯ ಜಿ ಐ ಬಾಗೇವಾಡಿ ಮಹಾವಿದ್ಯಾಲಯ ನಿಪ್ಪಾಣಿ ರಾಷ್ಟ್ರೀಯ ಸೇವಾ ಯೋಜನೆ ಯರನಾಳ ಗ್ರಾಮ ಪಂಚಾಯತಿ ಗವ್ಹಾಣ ಗ್ರಾಮದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಪ್ರತಿ ಕುಟುಂಬಕ್ಕೆ ಒಂದು ಆಥರ್ಿಕ ವರ್ಷದಲ್ಲಿ 100 ದಿನಗಳ ಉದ್ಯೋಗ, ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ, ಪ್ರಸುತ ಸಾಲಿನಲ್ಲಿ ದಿನಕ್ಕೆ 249 ಕೂಲಿ ದರ ,20-25 ಜನರನ್ನು ಸಂಘಟಿಸಿ ಕಾಯಕ ಸಂಘಗಳ ರಚನೆ ಮಾಡಲಾಗುತ್ತಿದೆ. ಅದರಲ್ಲಿ ಒಬ್ಬರನ್ನು ಕಾಯಕ ಬಂಧು ನೇಮಕ ಮಾಡಲಾಗುತ್ತದೆ. ಕಾಯಕ ಬಂಧು ನಿಮ್ಮ ಹಾಗೂ ಗ್ರಾಮ ಪಂಚಾಯತಿಯ ನಡುವೆ ಕೊಂಡಿ ಆಗಿ ಕಾರ್ಯನಿರ್ವಹಿಸುತ್ತಾರೆ. ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಿಕೊಳ್ಳಬಹುದು. ನಿಮ್ಮ ಸಮೀಪದ ಗ್ರಾಮ ಪಂಚಾಯತಿಗಳಿಗೆ ಒಮ್ಮ ಭೇಟಿ ನೀಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಯರನಾಳ ಗ್ರಾಮ ಪಂಚಾಯತಿ ಪಿಡಿಓ ಗಾಯತ್ರಿ ಟೋಣೆ ಮಾತನಾಡಿ ಪ್ರತಿ ಒಂದು ಮನೆಯವರು ಶೌಚಾಲಯ ನಿಮರ್ಾಣ ಮಾಡಿಕೊಳ್ಳಿ. ಎಸ್ ಬಿ ಎಂ ಯೋಜನೆಯಡಿ ಎಸ್ ಸಿ - ಎಸ್ ಟಿ ಜನರಿಗೆ 15000 ಮತ್ತು ಇತರೆ ಜನರಿಗೆ 12000 ಪ್ರೋತ್ಸಾಹ ಧನ ಕೊಡಲಾಗುವುದು. ಈಗಾಗಲೇ ಕಟ್ಟಿಕೊಂಡ ಶೌಚಾಲಯಗಳು ಕಡ್ಡಾಯವಾಗಿ ಬಳಕೆ ಮಾಡಬೇಕು ಮತ್ತು ನಿಮ್ಮ ಗ್ರಾಮವನ್ನು ಸ್ವಚ್ಛ ಗ್ರಾಮ ಮಾಡಲು ಸಹಕರಿಸಬೇಕೆಂದು ಹೇಳಿದರು.
ಗವ್ಹಾಣ ಗ್ರಾಮದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಥರ್ಿಗಳ ಗ್ರಾಮದ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಪ್ರಚಾರ ಮಾಡಿ ದುಡಿಯುವ ಕೈಗಳಿಗೆ ಕೆಲಸ, ಕೆಲಸ ಕೇಳುವುದು ನಿಮ್ಮ ಹಕ್ಕು, ವಲಸೆ ಹೋಗದಿರಿ ಎಂದು ಜಯಘೋಷದಿಂದ ಗ್ರಾಮದ ವಿವಿಧೆೆಡೆ ಸಂಚರಿಸಿ ಕರಪತ್ರ ಹಂಚಿಕೆ ಮಾಡಿ ಯೋಜನೆಯ ಮಾಹಿತಿಯನ್ನು ಗ್ರಾಮಸ್ತರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ ಎಸ್ ಎಮ್ ರಾಯಮಾನೆ ಉಪಪ್ರಾಚಾರ್ಯ ಡಾ ಸಿ. ವಿ. ಕೊಪ್ಪದ, ಮಲ್ಲಿಕಾಜರ್ುನ ಅರಳಿಮರದ, ಗ್ರಾಮಸ್ಥರಾದ ಸುರೇಶ ಪಾಟೀಲ, ತೋಳಸಾ ಪರೀಟ, ರಾಜು ಕಾಂಬಳೆ, ಗಜಾನನ ಸುತಾರ, ಅಪ್ಪಾಸಾಹೇಬ ಶೆಚಿದ್ರೆ, ಪ್ರಭಾಕರ ಮಾದಿಗ್ಪರ, ಕಾಂಚನಾ ಪಟೇಕರ ಉಪಸ್ಥಿತರಿದ್ದರು.
ಪೋಟೊಶೀಷರ್ಿಕೆ:26ಸಿಕೆಡಿ1
ಗವ್ಹಾಣ ಗ್ರಾಮದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಥರ್ಿಗಳು ವಿವಿದೆಡೆಯಲ್ಲಿ ಸಂಚರಿಸಿ ಕರಪತ್ರ ಹಂಚಿಕೆ ಮಾಡಿ ಯೋಜನೆಯ ಮಾಹಿತಿ ಗ್ರಾಮಸ್ಥರಿಗೆ ನೀಡಲಾಯಿತು.