ಚುನಾವಣಾ ದಿನಾಂಕ ಬದಲಿಸಬೇಕೆಂಬ ಅರ್ಜಿ ತಿರಸ್ಕರಿಸಿದ ಸುಪ್ರೀಂ



ನವದೆಹಲಿ, ಏ.4-ತಮಿಳುನಾಡು ಮತ್ತು ಪುದುಚೇರಿಯಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣಾ ದಿನಾಂಕವನ್ನು ಬದಲಾವಣೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದಅರ್ಜಿ ಯೊಂದನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಇದನ್ನು  ನಿರಾಕರಿಸಿದೆ. 

ಗುಡ್  ಫೈಡೇ ಮತ್ತು ಈಸ್ಟರ್ನ ಪವಿತ್ರ ಆಚರಣೆ ಸಂದರ್ಭದಲ್ಲೇ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗಳು ಘೋಷಣೆಯಾಗಿವೆ. ಆದ ಕಾರಣ ಮತದಾನ ದಿನಾಂಕದ ವೇಳಾಪಟ್ಟಿಯನ್ನು ಬದಲಿಸುವಂತೆ ಕ್ರೈಸ್ತರ ಸಂಸ್ಥೆಯೊಂದು ಸುಪ್ರೀಂ  ಸಲ್ಲಿಸಿತ್ತು. 

ಈ  ಅರ್ಜಿ ಪುರಸ್ಕರಿಸಲು ನಿರಾಕರಿಸಿ ನ್ಯಾಯಮುರ್ತಿ  ಎಸ್.ಎ. ಬೊಬ್ಡೆ ನೇತೃತ್ವದ ಪೀಠವು ಪವಿತ್ರ ದಿನದಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲವೇ ಎಂದು ಅರ್ಜಿದಾರರ  ಪರ ವಕೀಲರನ್ನು ಪ್ರಶ್ನಿಸಿತು. 

ನೀವು ಹೇಗೆ ಪ್ರಾರ್ಥಿಸ  ಮತ್ತು ಹೇಗೆ ಮತ ಚಲಾಯಿಸಬೇಕು ಎಂಬುದನ್ನು ತಿಳಿಸಲು ನ್ಯಾಯಾಲಯ ಬಯಸುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.