ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲು ಕನರ್ಾಟಕ ನವನಿಮರ್ಾಣ ಸೇನೆ ಒತ್ತಾಯ

ಲೋಕದರ್ಶನ ವರದಿ

ಕೊಪ್ಪಳ 11: ನಗರದ ರಸ್ತೆಗಳ ಕಾಮಗಾರಿ ಆದಷ್ಟು ಬೇಗನೆ ಮುಗಿಸಬೇಕೆಂದು ಒತ್ತಾಯಿಸಿ ಆಗ್ರಹಿಸಿ ಕನರ್ಾಟಕ ನವ ನಿಮರ್ಾಣ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ಅವರಿಗೆ  ಕನರ್ಾಟಕ ನವ ನಿಮರ್ಾಣ ಸೇನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರ ನೆತೃತ್ವದ ತಂಡ ಮಂಗಳವಾರದಂದು ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ನಗರದ ರಸ್ತೆಗಳ ಕಾಮಗಾರಿ, ಆದಷ್ಟು ಬೇಗನೆ ಮುಗಿಸಬೇಕು ಯಾಕೆಂದರೆ ಇನ್ನೇನು ಕೆಲವೇ ದಿನಗಳ ಮಾತ್ರ ಗವಿಸಿದ್ಧೇಶ್ವರ ಜಾತ್ರೆ ಇರುತ್ತದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುವುದರಿಂದ ನಗರದ ರಸ್ತೆಗಳಿಂದ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾದರು ಆದ್ದರಿಂದ  ಕಾಮಗಾರಿ ಮುಗಿಸಬೇಕು ಜೊತೆಗೆ ರಸ್ತೆಗಳ ಮಗ್ಗಲಿನಲ್ಲಿ ಮರಮ್ ಹಾಕಬೇಕು, ಗುಂಡಿಗಳನ್ನು ಮುಚ್ಚಬೇಕು ಮುಖ್ಯವಾಗಿ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 63 ರ ಸಿ.ಸಿ ಸಿಮೆಂಟ್ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೂಳಿಸಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು.

ಹೀಗಾಗಿ ಜಾತ್ರೆಯ ಮುಂಚಿತವಾಗಿಯೇ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ವಹಿಸಿಬೇಕು ಒಂದು ವೇಳೆ ನಗರದ ಇಗಿರುವ ರಸ್ತೆ ವ್ಯವಸ್ಥೆ ಜಾತ್ರೆಯವರೆಗೂ ಹೀಗೆ ಮುಂದುವರೆಯುವ ಪರಿಸ್ಥಿತಿ ನಿಮರ್ಾಣವಾದರೆ ಅನಿವಾರ್ಯವಾಗಿ ಸಂಘಟನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೋಳ್ಳಲಾಗುವುದು ಎಂದು ಎಚ್ಚರಿಸುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನಾಟಕ ನವ ನಿಮರ್ಾಣ ಸೇನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರ, ಜಿಲ್ಲಾಧ್ಯಕ್ಷ ಫುರ್ಖಾನ್ ಅಹ್ಮದ, ತಾಲೂಕ ಅಧ್ಯಕ್ಷ ರವಿ ಡೊಳ್ಳಿನ್, ಮಂಜುನಾಥ ಮಸ್ಕಿ, ಚೇತನ ಕುಮಾರ ಹಿರೇಮಠ, ಮರಿಯಪ್ಪ ಮಂಗಳೂರ, ಶಿವಪ್ಪ ಮಂಡಲಗೀರಿ, ರಫೀಕ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.