ನರೇಗಾ ಯೋಜನೆ ಒಕ್ಕಲುತನಕ್ಕೆ ವಿಸ್ತರಿಸುವಂತೆ ಒತ್ತಾಯ

ಬೆಳಗಾವಿ : ನರೇಗಾ ಯೋಜನೆಯನ್ನು ಒಕ್ಕಲುತನಕ್ಕೆ ವಿಸ್ತರಿಸುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಮಾಡಿ

ಕೊಂಡಿದ್ದಾರೆ.

ಈ ಕುರಿತು ಗುರುವಾರ ದಿನದಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ರೈತರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ, ಒಕ್ಕಲುತನ ಎಂದರೆ ಲಾಟರಿ ವ್ಯವಸ್ಥೆ ಇದ್ದಂತಿದೆ. ಇದರ ಸುಳಿಗೆ ಸಿಕ್ಕು ರೈತರು ನರಳುವಂತಾಗಿದೆ. ನರೇಗಾ ಯೋಜನೆ ಜನಪ್ರೀಯತೆಯಿಂದ ಒಕ್ಕಲುತನಕ್ಕೆ ಭಾರಿ ಹಡೆತ ಬಿದ್ದು, ರೈತರ ಜಮೀನುಗಳಲ್ಲಿ ಜನರು ಕೂಲಿ ಮಾಡದೆ ನರೇಗಾ ಯೋಜನೆಯಲ್ಲಿ ಈಡಿ ಊರಿಗೆ ಊರುಗಳೆ ಕೆಲಸ ನಿರ್ವಹಿಸುತ್ತಿವೆ. 

ರೈತರ ಜಮೀನುಗಳಲ್ಲಿ ಕೂಲಿಗೆ ಕೆಲಸಗಾರರು ಸಿಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನರೇಗಾ ಯೋಜನೆಯನ್ನು ಒಕ್ಕಲುತನಕ್ಕೆ ವಿಸ್ತರಿಸುವಂತೆ ಮನವಿ ಮೂಲಕ ಒತ್ತಾಯಿಸಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ, ಸುಭಾಶ ದಾಯಗೊಂಡ, ಬಾಳು ಮಾಯಣ್ಣಾ, ರಾಮಚಂದ್ರ ಫಡಕೆ ಸೇರಿದಂತೆ ಅನೇಕು ಉಪಸ್ಥಿತರಿದ್ದರು.