ಕುಂಭಮೇಳ ಮಾದರಿಯಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಉತ್ಸವದ ಸಂಗಮವಾಗಿದೆ : ಫಕೀರ ಶ್ರೀಗಳು

The Mylaralingeshwar temple is a confluence of festivals on the Kumbh Mela pattern: Fakir Sri

ಕುಂಭಮೇಳ ಮಾದರಿಯಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಉತ್ಸವದ ಸಂಗಮವಾಗಿದೆ : ಫಕೀರ ಶ್ರೀಗಳು 

ಶಿಗ್ಗಾವಿ 4: ಪ್ರಯಾಗರಾಜದ ಕುಂಭಮೇಳ ಮಾದರಿಯಲ್ಲಿ ಶಿಗ್ಗಾವಿಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವದ ಸಂಗಮವಾಗಿದೆ ಎಂದು ಶಿರಹಟ್ಟಿ ಶ್ರೀ ಜಗದ್ಗುರು ಪಕೀರ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಸಭೆ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಕೆಲವರು ಸೇವೆ ಮಾಡಿ ಮುಕ್ತರಾಗಿದ್ದಾರೆ, ಇನ್ನೂ ಕೆಲವರು ದುಶ್ಚಟ ಮಾಡುವರು ದುಶ್ಚಟ ಬಿಟ್ಟು ಮಕ್ತರಾಗಿರಿ ಎಂದು ಆರ್ಶಿವದಿಸಿದರು.ಡಾ.ಮಲಯ ಶಾಂತಮುನಿ ಶ್ರೀಗಳು ಶಿವಗಂಗಾ ಆರ್ಶಿವದಿಸಿದರು.   ಹೆಸ್ಕಾಂ ಅಧ್ಯಕ್ಷ ಸೈಯದ ಅಜ್ಜಂಪೀರ ಖಾದ್ರಿ ಮಾತನಾಡಿ ನಾವು ಎಲ್ಲರೂ ಸುಖವಾಗಿ ಬಾಳಿ ಬದುಕಬೇಕು ಅಲ್ಲದೇ ಮಳೆ ಬೆಳೆ ಸಮಯಕ್ಕೆ ಸರಿಯಾಗಿ ಆಗಲಿ, ಧಾನ ಅತ್ಯಂತ ಶ್ರೇಷ್ಠವಾದದ್ದು ಆದರೆ ನಮಗೆ ದೇವರು ಕೊಟ್ಟಿದ್ದು ನಮಗೆ ಗೊತ್ತಾಗಲ್ಲ ಹಾಗೂ ತಾಯಂದಿರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಿರಿ ಎಂದರು.ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಅತಿಹೆಚ್ಚು ಜನರು ಸೇರಿ ಆಗುವ ಜಾತ್ರೆ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರಣಿಕದ ಮೂಲಕ ಜೀವನ ನಿರ್ವಹಣೆ ಮಾಡುವ ಪದ್ದತಿ ಕರ್ನಾಟಕದಲ್ಲಿ ಜಗತ್ತಜಾಹೀರವಾಗಿದೆ. ಯಾರು ಭಕ್ತಿಯಿಂದ, ಶ್ರದ್ಧೆಯಿಂದ ನಡೆದರೆ ದೇವರ ದರ್ಶನವಾಗುತ್ತದೆ ಎಂದರು.10 ನೇ ಪಡೆ ಕಮಾಡೆಂಟ್ ಎನ್‌.ಬಿ.ಮೆಳ್ಳಾಗಟ್ಟಿ ಮಾತನಾಡಿ ಶ್ರದ್ದಾ ಕೇಂದ್ರಗಳು ಮೊದಲು ಧಾರ್ಮಿಕ ಜೊತೆಗೆ ಶಿಕ್ಷಣ ಕೇಂದ್ರಗಳಾಗಿ ಸೇವೆ ಸಲ್ಲಿಸುತ್ತಿದ್ದವು. ಭಕ್ತಿ ಭಾವ, ಸಾಂಸ್ಕೃತಿಕ, ನೈತಿಕತೆ ಪರಂಪರೆಯನ್ನು ತೆಗೆದುಕೊಂಡು ಹೋಗುವ ಕಾರ್ಯಗಳು ಮಠ ಮಂದಿರದಿಂದ ಆಗುತ್ತಿದ್ದವು ಎಂದರು.ನಿಂಗಪ್ಪ ಪೂಜಾರ ಮಾತನಾಡಿದರು.ಅದ್ಯಕ್ಷತೆವಹಿಸಿದ ನಿಂಗಪ್ಪ ನಾಗಪ್ಪ ಯಲವಿಗಿ,ಭರತೇಶ.ಎ.ಬಳಿಗಾರ,ಬಸವರಾಜ ಗುಮ್ಮತಿಮಠ, ಆನಂದ ಸುಭೇದಾರ, ಚಂದ್ರಶೇಖರ ನಿಕ್ಕಂ, ಮಹಾಲಿಂಗಪ್ಪ ಮತ್ತೂರ, ಸಿದ್ದಣ್ಣ ಮೊರಬದ, ಸಿ.ವ್ಹಿ.ಮತ್ತಿಗಟ್ಟಿ, ಜಯಣ್ಣಾ ಹೆಸರೂರ, ಮಾಲತೇಶ ಯಲಿಗಾರ, ಪ್ರಮೋದ ಚಲವಾದಿ, ಸುಭಾಸ ಕಾಂಬಳೆ, ಶಶಿಧರ ದೇಶಪಾಂಡೆ, ಚನ್ನಬಸಪ್ಪ ಕುಂಬಾರ, ಬಸವರಾಜ ಹೊನ್ನಣ್ಣವರ ಸೇರಿದಂತೆ ದಾನಿಗಳಿಗೆ ಸನ್ಮಾನ ಮತ್ತು ನಟರಾಜ ಶಾಲೆ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನೆರವೇರಿತು. ಶಿಕ್ಷಕಿ ಗಂಗೂಬಾಯಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.