ಯುಪಿಎಸಸಿ ಪರೀಕ್ಷೆಯಲ್ಲಿ 739 ನೇ ರ್ಯಂಕ್ ಪಡೆದ ಬಸವರಾಜ ಪಾಟೀಲ
Basavaraj Patil secured 739th rank in UPSC exam
ನೇಸರಗಿ 10: ಇಲ್ಲಿಗೆ ಸಮೀಪದ ಮೇಕಲಮರಡಿ ಗ್ರಾಮದ ನಿವಾಸಿ ( ಹೊಸೂರ ಗ್ರಾಮದ ) ಬಸವರಾಜ ಮಡಿವಾಳಪ್ಪ ಪಾಟೀಲ ಇವರು ದೇಶದ ಪ್ರತಿಷ್ಠಿತ ಯುಪಿಎಸಸಿ ಪರೀಕ್ಷೆಯಲ್ಲಿ 939 ರ್ಯಂಕ್ ಪಡೆದು ತೇರ್ಗಡೆಯಾಗಿ ಅಪಾರ ಸಾಧನೆ ಮಾಡಿದ್ದಾನೆ.ಮೂಲತಃ ಇವರ ತಂದೆ ಹೊಸೂರ ಹಾಗೂ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಪ್ರಾಥಮಿಕ ಹಾಗೂ ಪ್ರಾಡಶಾಲೆ ಶಿಕ್ಷಕರಾದ ಮಡಿವಾಳಪ್ಪ ಮತ್ತು ಶಾಂತವ್ವ ಇವರ ಸುಪುತ್ರನಾದ ಬಸವರಾಜ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕೋಡಿ ತಾಲೂಕಿನ ಕಬ್ಬುರಿನಲ್ಲಿ ಮಾಡಿ 6 ರಿಂದ 10 ನೇ ತರಗತಿವರೆಗೆ ಕೊಥಳಿ ಕುಪ್ಪನವಾಡಿ ಗ್ರಾಮದ ಜವಾಹರ ನವೋದಯ ಶಾಲೆಯಲ್ಲಿ ಕಲಿತು, ಧಾರವಾಡದಲ್ಲಿ ಪಿಯುಸಿ ವಿಜ್ಞಾನ ಕಲಿತು,ತದನಂತರ ಮಕ್ಯಾನಿಕ ಇಂಜಿನಿಯರಿಂಗ ಮುಗಿಸಿ, ತದನಂತರ ಯುಪಿಎಸಸಿ ಅಧ್ಯಯನಕ್ಕಾಗಿ ದೆಹಲಿಯ ವಾಜಿಭಾಯಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು 4 ಸಲ ಪ್ರಲಿಮನರಿ, ಒಂದು ಸಲ ಐ ಎಫ್ ಎಸ್ ಫಲಿತಾಂಶದಲ್ಲಿ ದೇಶದಲ್ಲಿ 739 ರ್ಯಂಕ್ ಪಡೆದು ತೇರ್ಗಡೆ ಆಗಿ ಹುಟ್ಟಿದ ಊರ, ಬೆಳೆದ ಊರ ಕೀರ್ತಿ ತಂದಿದ್ದಾನೆ. ಈತನ ಸಾಧನೆಗೆ ಶಾಸಕರು, ಮಾಜಿ ಶಾಸಕರು, ಜನಪ್ರತಿನಿದಿಗಳು, ಸಂಘ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 