ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಭವ್ಯ ಮೆರವಣಿಗೆ
A grand procession on the birth anniversary of Adi Jagadguru Renukacharya
ಕಂಪ್ಲಿ 10: ಪಟ್ಟಣದಲ್ಲಿ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಭವ್ಯ ಮೆರವಣಿಗೆ ವಿವಿಧ ಕಲಾದೊಂದಿಗೆ ವಿಜೃಂಭಣೆಯಿಂದ ಸೋಮವಾರ ಜರುಗಿತು. ಇಲ್ಲಿನ ಶಾರದ ಶಾಲಾ ಆವರಣದಲ್ಲಿ ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಪ್ರಯುಕ್ತವಾಗಿ ಭವ್ಯ ಮೆರವಣಿಗೆ ಆರಂಭಗೊಂಡು, ಸರ್ಕಾರಿ ಆಸ್ಪತ್ರೆ ಮೂಲಕ, ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಡಾರಾಜಕುಮಾರ, ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಬಳಿ ಸಂಪನ್ನಗೊಂಡಿತು. ಮುತೈದೆಯರ ಕಳಸ ಕನ್ನಡಿ ಸಕಲ ಮಂಗಳ ವಾದ್ಯಗಳು, ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.
ನಂತರ ಸಾಂಗಾತ್ರಯ ಪಾಠಶಾಲೆಯಲ್ಲಿ ಧರ್ಮಸಭೆ ನಡೆಯಿತು. ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ರೇಣುಕಾಚಾರ್ಯರ ಕೊಡುಗೆ ನಾಡಿಗೆ ಅಪಾರವಾಗಿದೆ. ಇಂದಿನ ದಿನಮಾನದಲ್ಲಿ ಅವರ ಆದರ್ಶ ತತ್ವಗಳೊಂದಿಗೆ ನೆಮ್ಮದಿಯ ಬದುಕು ಕೊಟ್ಟಿಕೊಂಡು, ನಾಡಿನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವನ್ನು ಇನ್ನಷ್ಟು ಪಸರಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಉಪಾಧ್ಯಕ್ಷ ಶಿವಪುತ್ರ್ಪ ಹೊನ್ನಳ್ಳಿ, ಕಾರ್ಯದರ್ಶಿ ವಾಗೀಶ ಪಂಡಿತಾರಾಧ್ಯ, ಸಹ ಕಾರ್ಯದರ್ಶಿ ಪುಟ್ಟಿ ಸಚಿನ್, ಕೋಶಾಧಿಕಾರಿ ವಿ.ವಿದ್ಯಾಧರ,
ಅಖಿಲ ಭಾರತ ವೀರಶೈವ ಮಹಾಸಭಾ ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ಎಲಿಗಾರ ಯಂಕಾರೆಡ್ಡಿ, ವೀರಶೈವ ತರುಣ ಸಂಘ ಅಧ್ಯಕ್ಷ ಜೀರ್ ಗಾದಿಲಿಂಗ, ವೀರಶೈವ ಸಮಾಜದ ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯ ಸ್ವಾಮಿ, ಇಟಗಿ ಬಸವರಾಜಗೌಡ, ಕೆ.ಎಂ.ಬಸವರಾಜ ಶಾಸ್ತ್ರಿ, ವೀರನಗೌಡ, ಅಮರೇಗೌಡ, ಬಿ.ವಿ.ಗೌಡ, ಅರವಿ ಅಮರೇಗೌಡ, ಎಸ್.ಎಂ.ಗುರುಪ್ರಸಾದ್, ಎಸ್.ಚಂದ್ರಶೇಖರಗೌಡ, ಜಡೇಶ್ಗೌಡ, ಅಲಬನೂರು ಬಸವರಾಜ, ಎಸ್.ಎಚ್.ವೀರಶ ಸೇರಿದಂತೆ ವೀರಶೈವ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 