ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಲೋಕದರ್ಶನ ವರದಿ

ತಾಳಿಕೋಟೆ 25:ಪಟ್ಟಣದಲ್ಲಿ ಇದೇ ದಿ. 28 ಹಾಗೂ 29 ಈ ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಬುಧವಾರರಂದು ಅವರ ಕಾಯರ್ಾಲಯದಲ್ಲಿ ಬಿಡುಗಡೆಗೊಳಿಸಿದರು.

ಈ ಸಮಯದಲ್ಲಿ ಮಾತನಾಡಿದ ಸಚಿವ ಜಿಗಜಿಣಗಿ ಅವರು ಕನ್ನಡ ನಾಡು, ನುಡಿ, ಭಾಷೆಯನ್ನು ಬೆಳೆಸಲು ಕನ್ನಡ ಸಾಹಿತ್ಯ ಪರಿಷತ್ ಸತತವಾಗಿ ಮುನ್ನಡೆಯುತ್ತಾ ಸಾಗಿ ಬಂದಿದೆ ಈ ಭಾರಿ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಐತಿಹಾಸಿಕ ನಗರಿ ತಾಳಿಕೋಟೆ ಪಟ್ಟಣದಲ್ಲಿ ಆಯೋಜಿಸಿರುವದು ಅತ್ಯಂತ ಸಂತೋಷವೆನಿಸುತ್ತಿದೆ ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯಿಂದ ಸಹಕಾಯ ಸಹಕಾರ ವನ್ನು ಕನ್ನಡ ಸಾಹಿತ್ಯ ಪರಿಷತ್ಗೆ ನೀಡುತ್ತೇನೆಂದರು.

ಈ ಸಮಯದಲ್ಲಿ ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ನ ಪದಾಧಿಕಾರಿಗಳಾದ ಮುರಿಗೆಪ್ಪ ಸರಶೆಟ್ಟಿ, ಕಾಶಿನಾಥ ಮುರಾಳ, ತಮ್ಮಣ್ಣ ದೇಶಪಾಂಡೆ, ಎಸ್.ಎನ್.ಡಿಸಲೆ, ಮೊದಲಾದವರು ಇದ್ದರು.