ಧಾರವಾಡ19: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಿಂಚಿ ಮರೆಯಾದ ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದ ಆಸ್ತಿ ಮತ್ತು ಸಮಸ್ತರಿಗೆ ಪ್ರೇರಣಾಶಕ್ತಿಯಾಗಿದ್ದರು. ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಂಡು ಪಾಲಿಸುವುದರಿಂದ ಶಿವಾಜಿ ಮಹಾರಾಜರಿಗೆ ಹೆಚ್ಚು ಗೌರವ ಸಲ್ಲುತ್ತದೆ ಎಂದು ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಹೇಳಿದರು.
ನಗರದ ಮರಾಠಾ ವಿಧ್ಯಾಪ್ರಸಾರಕ ಮಂಡಳದ ಭಾರತ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಉದ್ಘಾಟಿಸಿ, ಮಾತನಾಡಿದರು.
ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ಸಕರ್ಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ತಾಯಿ ಜೀಜಾಬಾಯಿ ಹಾಗೂ ಅವರ ಗುರುಗಳು ಮಾರ್ಗದರ್ಶನ ಮಾಡಿದರು. ಸಮಸ್ತ ಜನರು ಅವರಿಗೆ ಯಾವುದೆ ಜಾತಿ, ಧರ್ಮ ಭೇದವೆನಿಸದೆ ಗೌರವ ನಮನ ಸಲ್ಲಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದು ಹೇಳಿದರು.
ಶಿವಾಜಿ ರಾಜ್ಯದಲ್ಲಿ ಅವರಿಗೆ ಜೀವಕ್ಕೆ ಜೀವ ಕೊಡುವ ಸೇನಾಧಿಪತಿಗಳಿದ್ದರು. ಮಹಾರಾಜರ ಶೌರ್ಯ, ಸಾಹಸ, ದೇಶಕ್ಕೆ ಹಾಗೂ ಯುವಕರಿಗೆ ಮಾದರಿಯಾಗಿತ್ತು. ಅವರು ಪ್ರಜೆಗಳಿಗೋಸ್ಕರ ತ್ಯಾಗ, ಬಲಿದಾನ ಮಾಡಿವರು. ಇಂತಹ ನಾಯಕರು ನಮ್ಮ ದೇಶಕ್ಕೆ ಆಸ್ತಿಯಾಗಿದ್ದರು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದ ಮೊದಲು ಶಿವಾಜಿ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಸಂಸದ ಪ್ರಲ್ಹಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಪಾಲಿಕೆಯ ಸದಸ್ಯರು, ವಿವಿಧ ಪ್ರಮುಖರು ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಹುತಾತ್ಮಯೋಧರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ತಹಶಿಲ್ದಾರ ಪ್ರವೀಣ ಎ ಪಾಟೀಲ ಸಮಾಜದ ಮುಖಂಡರಾದ ಭೀಮಣ್ಣ ಕಸಾಯಿ ಮಾತನಾಡಿದರು. ಮಂಜುನಾಥ ಕದಂ, ಮಂಜುನಾಥ ಶಿಂದೆ, ಹೇಮಂತ್, ವಿಜಯ ಬೋಸಲೆ, ಪ್ರಕಾಶ ಕದಂ, ನವಿನ ಕದಂ, ಭೀಮಪ್ಪ ಸೇರಿದಂತೆ ಸಮಾಜದ ಇತರ ಪ್ರಮುಖರು ಹಾಗೂ ವಿದ್ಯಾಥರ್ಿಗಳು ಬಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರು ಎಸ್.ಕೆ. ರಂಗಣ್ಣವರ ಸ್ವಾಗತಿಸಿದರು. ರವಿ ಕುಲಕಣರ್ಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.