ಅದ್ದೂರಿಯಿಂದ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ

ಮಾಂಜರಿ 22: ಸಮಾಜದಲ್ಲಿ ಜಾತಿ ಸಂಘರ್ಷಕ್ಕಿಂತ ಶಾಂತಿ ಸಮಬಾಳ್ವೆ, ಧರ್ಮ ಜಾಗೃತಿಯನ್ನು ಜನರಿಗೆ ಮುಟ್ಟುವ ಕೆಲಸ ಆಗಬೇಕೆಂದು ಕಾಶಿ ಜಂಗಮ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ಅವರು ಇಂದು ಕನರ್ಾಟಕ ಮಹಾರಾಷ್ಟ್ರ ರಾಜ್ಯ ಆರಾಧ್ಯ ದೈವವಾದ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವರ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ಕಲ್ಲೋಳ ಆಶ್ರಮ ಹಾಗೂ ಸಿಬ್ಬಂದಿ ನಿವಾಸಗಳ ಉದ್ಘಾಟನಾ ಸಮಾರಂಭ ಹಾಗೂ ಸಹಸ್ರ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.

 ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳು ವಹಿಸಿದ್ದರು. ಮೇಲಣ ಗವಿಮಠ ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು, ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿಗಳು, ಜೈನಾಪೂರದ ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು, ಹಿರೇಮಠ ಶಹಾಪೂರದ ಸೂಗುರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಸಮಾಜದಲ್ಲಿ ಇಂದು ಹಲವಾರು ಬದಲಾವಣೆಯಾಗುತ್ತಿವೆ. ನಾವು ನಮ್ಮ ಹಿಂದಿನ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.

ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳು ಮಾತನಾಡಿ ಆತ್ಮ ವಿಶ್ವಾಸವನ್ನು ಹೊರಗಿನಿಂದ ಕೊಂಡುಕೊಳ್ಳಲಾಗದು. ನಮ್ಮೊಳಗಿನಿಂದಲೆ ಕಂಡುಕೊಳ್ಳಬೇಕು. ಜೀವನದಲ್ಲಿ ಮನುಷ್ಯ ಬರುವಾಗ ಎನೂ ತಂದಿಲ್ಲ, ಹೋಗುವಾಗಲೂ ಏನನ್ನು ಒಯ್ಯುವುದಿಲ್ಲ. ಇರುವಷ್ಟು ದಿನ ಶಿಸ್ತಾಗಿ ದುಡಿದು ಮಸ್ತಾಗಿ ಜೀವನ ಸಾಗಿಸಬೇಕು. ಬದುಕಿನ ವಿಕಾಸಕ್ಕೆ ಭೌತಿಕ ಸಂಪತ್ತಷ್ಟೆ ಕಾರಣವಲ್ಲ. ಅದರ ಜೊತೆಗೆ ಒಂದಿಷ್ಟು ಶಿವಜ್ಞಾನದ ಅರಿವನ್ನು ಪಡೆಯಬೇಕಾಗುತ್ತದೆ. ಉಜ್ವಲ ಬದುಕಿಗೆ ಧರ್ಮವೇ ಅಡಿಪಾಯವಾಗಿದೆ. ಜಾಗತೀಕರಣ, ಉದಾರಿಕರಣ, ಮತ್ತು ಖಾಸಗಿಕರಣ ಬೆಳೆದರಷ್ಟೆ ಸಾಲದು. ಅದರ ಜೊತೆಗೆ ಮಾನವಿಯತೆಯ ಅಂತಃಕರಣ ಬೆಳೆದು ಬರಬೇಕಾಗಿದೆ. ಪ್ರೀತಿ ನೀತಿ ಸತ್ಯ ಸ್ನೇಹ ವಿನಯಗಳ ಸೆಲೆ ಬತ್ತುತ್ತಲಿವೆ. ಸತ್ಯದ ಸತ್ಪಥದಲ್ಲಿ ಬದುಕನ್ನು ಕಟ್ಟಿ ಬೆಳೆಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಇಂದು ಸಾಯಂಕಾಲ ಗೋಧೂಳಿ ಮುಹೂರ್ತದ ಶುಭ ಕನ್ಯಾ ಲಗ್ನದಲ್ಲಿ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಹಾಗೂ ಸಹಸ್ರ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ ಮಹಾಪ್ರಸಾದ ನಡೆಯಿತು. ವೀರಭದ್ರ ದೇವರ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವದ ಪೌರೋಹಿತ್ಯವನ್ನು ಶ್ರೀಶೈಲ ಶಾಸ್ತ್ರೀ, ರವಿ ಶಾಸ್ತ್ರಿಗಳು, ಬಸವರಾಜ ಶಾಸ್ತ್ರಿಗಳು, ಮಲ್ಲಯ್ಯಾ ಜಡೆ ದೇವಸ್ಥಾನದ ಪ್ರಧಾನ ಅರ್ಚಕರು, ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿಗಳು ಮತ್ತು ಆಗಮ ಸಂಸ್ಕೃತ ಪಾಠಶಾಲೆಯ ವಿದ್ಯಾಥರ್ಿಗಳು ಹಾಜರಿದ್ದರು. ಮುಂದ್ರೋಪ ಶ್ರೀಗಳು, ಮಲ್ಲೆ ಹಿಪ್ಪರಗಿ ಶ್ರೀಗಳು, ಮನುಗೂಳಿ ಶ್ರೀಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿತು. 

ಕಲ್ಯಾಣ ಮಹೋತ್ಸವಕ್ಕೆ ಬೆಳಗಾವಿ, ಬಿಜಾಪೂರ, ಬಾಗಲಕೋಟ, ಧಾರವಾಡ, ಕೊಲ್ಹಾಪೂರ, ಸಾಂಗಲಿ ಜಿಲ್ಲೆಯ ಹಲವಾರು ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

ಫೋಟೋ: 20ಮಾಂಜರಿ1

ಯಡೂರ ಗ್ರಾಮದಲ್ಲಿ ಆಯೋಜಿಸಲಾದ ವೀರಭದ್ರ ದೇವರ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡ ಕಾಶಿ ಪೀಠದ ಜಗದ್ಗರು ಡಾ. ಚಂದ್ರಶೇಖರ ಸ್ವಾಮೀಜಿಗಳು, ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಸ್ವಾಮೀಜಿಗಳು ಹಾಗೂ ಪೌರೋಹಿತ್ಯರು ಅಕ್ಷತಾರೋಹಣ ಮಾಡುವಾಗ