ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 01:ತಾಲೂಕಿನಾಧ್ಯಾಂತ ಪ್ರತಿಷ್ಠಿತ ದೈವವೆಂದೇ ಪ್ರಖ್ಯಾತಿ ಪಡೆದ ಶ್ರೀ ವೆಂಕಟೇಶ್ವರನ 62ನೇ ರಥತ್ಸವವು ಪಟ್ಟಣದ ರಾಮನಗರದಲ್ಲಿ ಫೆಬ್ರವರಿ 10 ರಂದು ಅದ್ದೂರಿಯಾಗಿ ನಡೆಯಲಿದ್ದು ಅದರ ಅಂಗವಾಗಿ ಇಂದು ಶ್ರೀ ವೆಂಕಟೇಶ್ವರ ರಥದ ಗಡ್ಡೆಯನ್ನು ಹೊರ ಹಾಕಲಾಗಿದೆ ಎಂದು ಶ್ರೀ ವೆಂಕಟೇಶ್ವರ ಸ್ವಾಮಿದೇವಸ್ಥಾನದ ಧರ್ಮಕರ್ತ ನಾಣ್ಯಾಪುರ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ರಾಮನಗರದ ತೇರಿನ ಮನೆಯ ಬಳಿ ಮಾತನಾಡಿ ದಿವಂಗತ ಗಂಗಾವತಿ ವೆಂಕೋಬಣ್ಣನವರು 61 ವರ್ಷಗಳ ಹಿಂದೆ ಅತಿ ವಿನೂತನವಾಗಿ ಅಷ್ಟೇ ಸುಭದ್ರವಾಗಿ ಈ ರಥವನ್ನು ತಯಾರಿಸಿ ದಾನ ಕೊಟ್ಟಿದ್ದಾರೆ ಅವರ ಮಕ್ಕಳಾದ ಗಂಗಾವತಿ ವಿಜಯಕುಮಾರ್ ಮತ್ತು ಕುಟುಂಬ ವರ್ಗದವರು ಇಂದಿಗೂ ಶ್ರೀ ವೆಂಕಟೇಶ್ವರ ರಥೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಈ ವರ್ಷವೂಸಹ 62ನೇ ವರ್ಷದ ಶ್ರೀ ವೆಂಕಟೇಶ್ವರ ರಥೋತ್ಸವವು ಫೆಬ್ರವರಿ 10 ರಂದು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಲಿದೆ. ವಿಳಂಬಿನಾಮ ಸಂವತ್ಸರದ ಫೆಬ್ರವರಿ 05ರ ಮಂಗಳವಾರ ಕಲಶ ಸ್ಥಾಪನೆ ಹಾಗೂ ಅಶ್ವೋತ್ಸವ, 6ರ ಬುಧವಾರ ಹನುಮಂತೋತ್ಸವ, 07ರ ಗುರುವಾರ ಗರುಡೋತ್ಸವ, 09ರ ಶನಿವಾರ ಶ್ವೇತಗಜೋತ್ಸವ, 10ರ ಪಂಚಮಿಯಂದು ಭಾನುವಾರ ಸಂಜೆ 5ಕ್ಕೆ ಶ್ರೀ ವೆಂಕಟೇಶ್ವರ ರಥೋತ್ಸವವು ಅದ್ದೂರಿಯಾಗಿ ಜರುಗಲಿದೆ, 11ರ ಸೋಮವಾರ ಕಡುಬಿನ ಕಾಳಗ, 12ರ ಮಂಗಳವಾರ ಅವಭೃತ ಸ್ನಾನ ಹೀಗೆ 7 ದಿನಗಳ ಕಾಲ ದೈವ ಕಾರ್ಯಕ್ರಮಗಳು ಜರುಗುವವು. ನಂತರ 1 ವಾರದ ತನಕ ಜಾತ್ರಾಮಹೋತ್ಸವ ವಿಜೃಂಭಣೆಯಾಗಿ ನಡೆಯುವುದು ಎಂದರು.
ದಾನಿಗಳ ಕುಟುಂಬವರ್ಗದ ಮುಖ್ಯಸ್ಥರಾದ ಗಂಗಾವತಿ ವಿಜಯಕುಮಾರ ಮಾತನಾಡಿ ಫೆಬ್ರವರಿ 10 ರಂದು 62ನೇ ವರ್ಷದ ಶ್ರೀ ವೆಂಕಟೇಶ್ವರ ರಥೋತ್ಸವವು ಪ್ರತಿ ವರ್ಷದಂತೆ ಅದ್ದೂರಿಯಾಗಿ ಜರುಗಲಿದ್ದು ಜನದಟ್ಟಣೆ ಹೆಚ್ಚಾಗಿರುವುದರಿಂದ ವ್ಯಾಪಾರಿಗಳಿಗೆ ಅವರ ಅಂಗಡಿ ಅಚ್ಚಿಕೊಳ್ಳಲಿಕ್ಕೆ ಜಾಗ ಕಾಯ್ದಿರಿಸಲಾಗಿದೆ. ಕಾರಣ ಎಲ್ಲಾ ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಳ್ಳುವುದರ ಮೂಲಕ ಸಹಕರಿಸಬೇಕು ಎಂದರು.
ನಾಣಿಕೇರಿ ದೈವದ ಅಧ್ಯಕ್ಷ ಬಾರಿಕರ ಬಾಪೂಜಿ ಹಾಗೂ ಹುಳ್ಳಿ ಪ್ರಕಾಶ್ ಮಾತನಾಡಿ ಈ ಜಾತ್ರೆಯಲ್ಲಿ ನಾಣಿಕೇರಿ ದೈವಸ್ಥರಿಂದ ಬಯಲು ಕುಸ್ತಿಗಳುಸಹ ಅದ್ದೂರಿಯಾಗಿ ನಡೆಯುತ್ತವೆ. ಇದರಲ್ಲಿ ನಾಡಿನ ಹೆಸರಾಂತ ಕುಸ್ತಿ ಪೈಲ್ವಾನರು ಭಾಗವಹಿಸುತ್ತಾರೆ. ಕುಸ್ತಿಪಂದ್ಯಾವಳಿಗಳ ರೂಪುರೇಷೆಗಳು ಸಿದ್ದವಾಗುತ್ತಿದ್ದು ಸದ್ಯದಲ್ಲೆ ಇದರಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಥದ ದಾನಿಗಳಾದ ಗಂಗಾವತಿ ವೆಂಕೋಬಣ್ಣನವರ ಕುಟುಂಬ ವರ್ಗದವರಾದ ವಿಜೇತ, ವಸಂತ ಮಾಲವಿ, ಪುರಸಭೆ ಸದಸ್ಯ ಮಾತಾಗ್ಯಾಸ್ ಯರ್ರಿಸ್ವಾಮಿ, ಮುಖಂಡರಾದ ಅರಸಿಕೇರಿ ಹನುಮಂತಪ್ಪ, ಬಾರಿಕರ ಹುಲುಗಪ್ಪ, ಗುಂಡ್ರ ಹನುಮಂತ, ಹೆಗ್ಡಾಳ್ ನಾರಾಯಣ, ಬಾರಿಕರ ಗಂಗಾಧರ, ಬಂಟ್ರ ಹುಲುಗಪ್ಪ, ಕಟಿಗಿ ರಫಿ, ಆಯಗಾರ ಪ್ರಮುಖರಾದ ಬಾರಿಕರ ನಿಂಗಪ್ಪ, ದಾಸರ ಹುಲುಗಪ್ಪ, ಅಂಬಾಡಿ ಗಾಳೆಪ್ಪ, ತಾಯಪ್ಪ, ಪಾದಗಟ್ಟಿ ಆಂಜನೇಯ ಸ್ವಾಮಿ ಸೇವಾ ಸಮಿತಿ ಸದಸ್ಯರು, ವೆಂಕಟೇಶ್ವರ ರಥೋತ್ಸವ ಸೇವಾ ಕರ್ತರು, ನಾಣಿಕೇರಿ ಬಂದುಗಳು, ರಾಮನಗರ ನಿವಾಸಿಗಳು ಉಪಸ್ಥಿತರಿದ್ದರು.