ಸಂಸ್ಕಾರ, ಸಂಸ್ಕೃತಿ ನೀಡುವಕೇಂದ್ರಗಳೇ ಮಠಮಂದಿರಗಳು: ಬಸವ ದೇವರು
ಶಿಗ್ಗಾವಿ 11 :ಮನುಷ್ಯನಿಗೆ ಸಂಸ್ಕಾರ, ಸಂಸ್ಕೃತಿ ನೀಡುವ ಶ್ರದ್ದಾ ಕೇಂದ್ರಗಳೆಂದರೆ ಅದುವೇ ಮಠ ಮಂದಿರಗಳು ಎಂದು ವಿರಕ್ತಮಠದ ಬಸವ ದೇವರು ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ರ ಅಂಗವಾಗಿ ನಡೆದ ಧರ್ಮಸಮಾರಂಭದಲ್ಲಿ ಮಾತನಾಡಿದ ಅವರು ಅರಿವಿನ, ಆದ್ಯಾತ್ಮ, ವಚನಗಳ ಹಂದರದ ಮಂಟಪವೇ ಅನುಭವ ಮಂಟಪ, ವಚನಗಳನ್ನು ತಿಳಿದಾಗ ಜ್ಞಾನ ಹೆಚ್ಚಿಸುವಜತೆಗೆ ಬದುಕು ಪಾವನವಾಗುತ್ತಿದೆಎಂದರು.
ವೇದಮೂರ್ತಿ ಮಹಾಂತೇಶ ಶಾಸ್ತ್ರಿಗಳು ಕಲ್ಲೂರ ಪ್ರವಚನ ಮಾಡಿದಅವರು ವಿರಕ್ತಮಠದಲ್ಲಿಆಧ್ಯಾತ್ಮದ ಗಾಳಿ ಸಿಗಬೇಕಾದರೆ ವಿರಕ್ತಮಠಕ್ಕೆ ಬಂದು ಬೇಟಿ ನೀಡಿರಿ,ಕೊನೆಗೆ ನಮ್ಮಜೊತೆಗೆ ಬರುವುದುಆತ್ಮ, ಜ್ಞಾನ, ದಾಸೋಹ, ಸಂಸ್ಕೃತಿಎಲ್ಲಿ ಸಿಗುತ್ತದೆ ಅದುವೇ ಸರ್ವಧರ್ಮದ ಮನೆ, ಯಾರು ಭಕ್ತಿ, ಭಾವದಿಂದ ಸ್ಮರಿಸುತ್ತಾರೆಅವರ ಮನಸ್ಸಿನಲ್ಲಿ ಮಂತ್ರಾಲಯವಿದೆ. ಜೀವನ ಬಹಳ ಪವಿತ್ರವಾದದು ಪಾವಿತ್ರತ್ಯೆಇದ್ದರೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ನೇತೃತ್ವವಹಿಸಿದ್ದರು,ಕುಮಾರೇಶ್ವರ ಶ್ರೀಗಳು ವಿರಕ್ತಮಠ ನಿಡಗುಂದಿ ಆರ್ಶಿವದಿಸಿದರು,ಸಂಗೀತ ಸೇವೆ ಗದಿಗೆಯ್ಯ ಹಿರೇಮಠ, ತಬಲಾ ಬಸವರಾಜ ಹೂಗಾರ, ವಿವಿಧಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಾಗರಾಜ ಮಿಶ್ರಿಕೋಟಿ, ಈರಣ್ಣಾಯಲಿಗಾರ, ಸಿ.ವ್ಹಿ.ಚಿಕ್ಕಮಠ, ಯಲ್ಲಪ್ಪ ಸಾಳುಂಕೆ, ಕಮಲವ್ವ ಹರಿಗೊಂಡ, ಸೋಮಲಿಂಗಯ್ಯ ಹಿರೇಮಠ, ಪ್ರಸಾದ ಸೇವೆ ದಿ.ಸಂಗಪ್ಪ ಮೊರಬದಕುಟುಂಬ ವರ್ಗ, ಚನ್ನಬಸನಗೌಡತೋಟದ, ಶಿವನಗೌಡ ತೋಟದ ಸೇರಿದಂತೆದೇವಸ್ಥಾನದ ಸೇವಾ ಸಮಿತಿ ಸದಸ್ಯರುಇದ್ದರು.ನಟರಾಜ ನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯರೂಪಕ ನೆರವೇರಿದವು.ಪ್ರೋ ಶರೀಫ ಮಾಕಪ್ಪನವರಕಾರ್ಯಕ್ರಮ ನಿರ್ವಹಿಸಿದರು.