ಲೋಕದರ್ಶನ ವರದಿ
ಹೊನ್ನಾವರ 21: ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಭಂಡ ಹೇಳಿಕೆ ನೀಡಿದಂತಹ ಸಂಸದ, ಸಚಿವ ಅನಂತಕುಮಾರ ಹೆಗಡೆಯವರಿಗೆ ಮನೆಗೆ ಕಳುಹಿಸಿ ತಕ್ಕ ಪಾಠ ಕಲಿಸುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಮತದಾರರಿಗೆ ಕರೆ ನೀಡಿದರು.
ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್, ಪಕ್ಷದ ಕಾಯರ್ಾಲಯದಲ್ಲಿ ಏರ್ಪಡಿಸಿದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನರೇಂದ್ರ ಮೋದಿಯಂತಹ ಸುಳ್ಳು ಭರವಸೆಗಳ ಸರದಾರನನ್ನು ದೇಶ ಈ ಹಿಂದೆಂದೂ ಕಂಡಿಲ್ಲಾ. ಜಗತ್ತಿನ ಮಹಾನ್ ಆಥರ್ಿಕ ತಜ್ಞ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಜಾಗತಿಕ ಮಟ್ಟದಲ್ಲಿ ದೇಶ ಆಥರ್ಿಕ ಕುಸಿತ ಕಂಡಾಗಲೂ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಆದರೂ ಹಿಂದಿನ ಯು.ಜಿ.ಎ. ಸಕರ್ಾರದ ಮೇಲೆ ವಿನಾಃ ಕಾರಣ ಆರೋಪಗಳನ್ನು ಮಾಡಿ ಅಂದಿನ ಸಕರ್ಾರ ಪತನ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದರು.
ದೇಶದ ಜನರಲ್ಲಿ ಅನೇಕ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸಕರ್ಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದ್ದು, ವಿದೇಶದಿಂದ ಕಪ್ಪು ಹಣ ವಾಪಸ್ ತಂದು ದೇಶದ ಬಡವರ ಪ್ರತಿ ಖಾತೆಗೂ ಹಣ ಜಮಾ ಮಾಡುತ್ತೇನೆಂದು ಭರವಸೆ ನೀಡಿದ್ದು ಕನಸಾಗಿಯೇ ಉಳಿದುಕೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು, ಅಡಿಗೆ ಅನಿಲಗಳ ಬೆಲೆೆಗಳು ಮೋದಿ ಸಕರ್ಾರದಲ್ಲಿ ಗಗನಕ್ಕೇರಿರುವುದು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.
ಕಾರಣ ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಉತ್ತಮ ಸರಕಾರ ಬರಬೇಕಾದರೆ ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆ.ಡಿ.ಎಸ್. ಮೈತ್ರಿ ಅಭ್ಯಥರ್ಿ ಆನಂದ ಅಸ್ನೋಟಿಕರ್ ಅವರನ್ನು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಸ್ವಾಗತಿಸಿ ಮಾತನಾಡಿ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸಿದ್ದು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಾದ್ಯಂತ ಆನಂದ ಅಸ್ನೋಟಿಕರ್ ಪರವಾಗಿ ಉತ್ತಮ ವಾತಾವರಣ ನಿಮರ್ಾಣವಾಗಿದ್ದು, ಅವರ ಗೆಲುವು ಖಚಿತ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ, ಕೆ.ಪಿ.ಸಿ.ಸಿ ಕಾರ್ಯದಶರ್ಿ ಎಂ.ಎನ್. ಆರಾದ್ಯ, ಮಾಜಿ ಶಾಸಕ ಮಂಕಾಳು ವೈದ್ಯ, ಕೆ.ಪಿ.ಸಿ.ಸಿ. ಕಾರ್ಯದಶರ್ಿ ಪುಷ್ಪಾ ನಾಯ್ಕ, ಇಂಟೆಕ್ ಅಧ್ಯಕ್ಷ ಆಗ್ನೆಲ್ ಡಾಯಸ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಸಾಬ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹಾದೇವಿ ನಾಯ್ಕ, ಪಕ್ಷದ ಮುಖಂಡರಾದ ಬಾಲಚಂದ್ರ ನಾಯ್ಕ, ವಿನಾಯಕ ಶೇಟ್, ದಾಮೋದರ ನಾಯ್ಕ, ರಾಮನಾಥ ನಾಯ್ಕ ಕಕರ್ಿ, ರಮೇಶ ಶೆಟ್ಟಿ, ಶಫಿವುಲ್ಲಾ ಚಂದಾವರ, ಮಂಜುನಾಥ ಭಟ್ಟ ಕಡ್ಲೆ, ಗಜಾನನ ನಾಯ್ಕ ಸಾಲ್ಕೋಡ, ಗಣೇಶ ನಾಯ್ಕ ಮುಗ್ವಾ, ನೆಲ್ಸನ್ ರೊಡ್ರಿಗೀಸ್, ಜೊಸ್ಪಿನ್ ಡಾಯಸ್, ಸುರೇಶ ಮೇಸ್ತ ಹಾಗೂ ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.