ಸಕರ್ಾರದ ಯೋಜನೆಗಳ ಲಾಭ ಪಡೆದುಕೊಳ್ಳಿ: ಕೌಜಲಗಿ


ಲೋಕದರ್ಶನ ವರದಿ

ಬೈಲಹೊಂಗಲ 19: ಸಕರ್ಾರದ ಯೋಜನೆಗಳನ್ನು ಜನರು ಸಮಗ್ರವಾಗಿ ತಿಳಿದುಕೊಂಡು ಅವುಗಳ ಲಾಭ ಪಡೆದುಕೊಂಡು ಆಥರ್ಿಕವಾಗಿ ಸದೃಢರಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. 

ಪಟ್ಟಣದ ಪುರಸಭೆ ಆವರಣದಲ್ಲಿ ದೀನ ದಯಾಳ ಅಂತ್ಯೋದಯ ನಲ್ಮ ಅಭಿಯಾನ ಯೋಜನೆಯಡಿ ಶನಿವಾರ ನಡೆದ ಬೀದಿ ಬದಿಯ ವ್ಯಾಪಾರಸ್ಥರ (ಸಂರಕ್ಷಣೆ, ಜೀವನೋಪಾಯ) ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀದಿ ಬದಿಯ ವ್ಯಾಪಾರಸ್ಥರ ಉನ್ನತೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಅವಶ್ಯವಿದೆ. ಬೀದಿ ಬದಿಯ ವ್ಯಾಪಾರಸ್ಥರ ಆಥರ್ಿಕ ಪರಿಸ್ಥಿತಿ ಸುಧಾರಣೆ ಮಾಡಲು, ಉದ್ಯೋಗಕ್ಕೆ ಹಲವು ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವ್ಯಾಪಾರಸ್ಥರು ಅವುಗಳನ್ನು ತಿಳಿದುಕೊಂಡು ಕಷ್ಟದಿಂದ ಪಾರಾಗಿ ತೃಪ್ತಿಯ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದರು. 

ರಾಜ್ಯದಲ್ಲಿ ಸಮ್ಮಿಶ್ರ ಸಕರ್ಾರವಿದೆ. ಇಂದಿನ ಅಯವ್ಯಯದಲ್ಲಿ ಪ್ರತಿಯೊಬ್ಬ ಬೀದಿ ಬದಿಯ ವ್ಯಾಪಾರಸ್ಥರಿಗೆ ಬಡ್ಡಿ ರಹಿತವಾಗಿ 10 ಸಾವಿರ ರೂ.ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಅದು ಕೂಡಲೇ ಜಾರಿಗೆ ಬರಲಿದೆ. ಜೊತೆಗೆ ಆರೋಗ್ಯಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಯೋಜನೆಯಲ್ಲಿ ಪ್ರತಿಯೊಬ್ಬ ಬಿಪಿಎಲ್ ಕಾಡರ್್ ಸದಸ್ಯರಿಗೆ ಯಾವುದೇ ಚಿಕಿತ್ಸೆಗೆ 1 ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಸಕರ್ಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗಳ ಸೌಲಭ್ಯ ಇಲ್ಲದಿದ್ದರೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಒಪ್ಪಿಗೆ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ. ಅದರ ವೈದ್ಯಕೀಯ ವೆಚ್ಚವನ್ನು ಸಕರ್ಾರವೇ ಭರಿಸಲಿದೆ. ಅದಕ್ಕಾಗಿ ಆರೋಗ್ಯ ಕಾಡರ್್ ಮಾಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಬೀದಿ ಬದಿಯ ವ್ಯಾಪಾರಸ್ಥರ ಸಭೆ ಕರೆದು ಅವರ ಕುಂದುಕೊರತೆ, ನೋವುಗಳನ್ನು ಆಲಿಸಬೇಕು. ಸಭೆಯಲ್ಲಿ ಸಮಸ್ಯೆಗಳನ್ನು ಚಚರ್ಿಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು ಎಂದರು. 

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ವೈ.ಹೆಳವರ, ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಮಾತನಾಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮುತ್ನಾಳ ಸಾರ್ವಜನಿಕವಾಗಿ ಕಾಯ್ದುಕೊಳ್ಳಬೇಕಾದ ಸ್ವಚ್ಚತೆ, ಆರೋಗ್ಯದ ಕುರಿತು ವಿವರಿಸಿದರು. 

ಪರಿಸರ ಅಭಿಯಂತರ ಸತೀಶ ಖಜ್ಜಿಡೊಣಿ, ಪಿಎಸ್ಐ ಎಂ.ಎಸ್.ಹೂಗಾರ, ಡಾ.ಸಂಜೀವ ತಿಗಣಿ ವೇದಿಕೆಯಲ್ಲಿ ಇದ್ದರು. 

ರಮೇಶ ಹಿಟ್ಟಣಗಿ ನಿರೂಪಿಸಿದರು. ನೂರಾರು ಬೀದಿ ಬದಿಯ ವ್ಯಾಪಾರಸ್ಥರು, ಪುರಸಭೆ ಸಿಬ್ಬಂದಿ ಇದ್ದರು. 

  

ನೋಟ್

ಕೇಂದ್ರ ಮತ್ತು ರಾಜ್ಯ ಸಕರ್ಾರ ಗುರುತಿನ ಚೀಟಿ ಹೊಂದಿದ ಬೀದಿ ಬದಿಯ ವ್ಯಾಪಾರಸ್ಥರಿಗೆ 5 ಲಕ್ಷ ರೂ.ವರೆಗೆ ಮನೆ ಕಟ್ಟಿಸಿಕೊಳ್ಳಲು ಹಣಕಾಸಿನ ಸೌಲಭ್ಯಗಳನ್ನು ಕಲ್ಪಿಸುತ್ತಿವೆ. 3ಲಕ್ಷ ವಿನಾಯಿತಿ ಇದೆ. ಫಲಾನುಭವಿಗಳು 50 ಸಾವಿರ ನೀಡಬೇಕು. 1.5 ಲಕ್ಷ ರೂ.ಬ್ಯಾಂಕಿನವರು ನೇರವಾಗಿ ಖಾತೆಗೆ ಹಣ ವಗರ್ಾವಣೆ ಮಾಡುತ್ತಾರೆ. ಸಾಲದ ಹಣ ಮರುಪಾವತಿಸಲು 20 ವರ್ಷಗಳಕಾಲ ಕಾಲಾವಕಾಶ ಕಲ್ಪಿಸಲಾಗಿದೆ.

ಮಹಾಂತೇಶ ಕೌಜಲಗಿ, ಶಾಸಕರು