ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಿ

Take action to increase your Esselse result

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಿ 

ಹೂವಿನ ಹಡಗಲಿ 19”: ಎಸ್ಸೆಸ್ಸೆಲ್ಸಿ  ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ನಡೆದ ಮುಖ್ಯ ಗುರುಗಳ ಶೈಕ್ಷಣಿಕ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿದರುವಿದ್ಯಾರ್ಥಿಗಳಿಗೆ ಗಮನ:ಪ್ರತಿ ಪ್ರೌಢಶಾಲೆಯಲ್ಲಿ ಅನುತ್ತೀರ್ಣರಾಗಬಹುದಾದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅಂಕ ಗಳಿಸಲು ಪ್ರಯತ್ನ ಆಗಬೇಕು .ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯವಾದಲ್ಲಿ ರಾತ್ರಿ ಶಾಲೆ ತೆರೆದು ಅಭ್ಯಾಸ ಮಾಡಿಸಿರಿ ಎಂದರು.ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಫೆಬ್ರವರಿ 25 ರಿಂದ ಆರಂಭವಾಗಲಿದೆ.ಇಲಾಖೆಯ ನಿಯಮಾನುಸಾರ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿ ತ್ವರಿತವಾಗಿ ಮೌಲ್ಯಮಾಪನ ಕಾರ್ಯ ನಿರ್ವಹಿಸಿರಿ ಫಲಿತಾಂಶ ವಿಶ್ಲೇಷಣೆ ಮಾಡಿರಿ ಎಂದು ಹೇಳಿದರು. 

ಬಿ ಸಿ ಎಂ ಹಿಂದುಳಿದ ಸಮಾಜ ಕಲ್ಯಾಣ ವ್ಯಾಪ್ತಿಯ ಹಾಸ್ಟೆಲ್ ಗಳಿಗೆ ಸಂಜೆ ಭೇಟಿ ಮತ್ತು ಪಾಲಕ ಪೋಷಕರ ಮನೆಗೆ ಹೋಗಿ ಮಾರ್ಗದರ್ಶನ ನೀಡುವಂತೆ ತಿಳಿಸಿದರು.ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ದೇಸಾಯಿ ಒಟ್ಟು 49 ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳ ಅವಲೋಕನ ಮಾಡಿ ಮಾರ್ಗದರ್ಶನ ನೀಡಿದರು.ಕೆ ಎಸ್ ಇ ಎ ಬಿ ಮಂಡಳಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿರಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ತಿಳಿಸಿದರು. 

ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಎಸ್ ಎ ಟಿ ಎಸ್ ನಲ್ಲಿ ಹೆಸರಿನ ಬದಲಾವಣೆ ಕುರಿತು ಮಾಹಿತಿ ಹಂಚಿಕೊಂಡರು.ಇದೇ ಸಂದರ್ಭದಲ್ಲಿ ನಿವೃತ್ತ ಉಪ ಪ್ರಾಂಶುಪಾಲ ಕೆ ಚಂದ್ರೇಗೌಡ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್, ಉಪ ಪ್ರಾಂಶುಪಾಲ ರವೀಂದ್ರನಾಥ ಬಿ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ,ಮಿಟ್ಯಾನಾಯ್ಕ್‌ ಉಪಸ್ಥಿತರಿದ್ದರು.