ಕೊಪ್ಪಳ 28: ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಬುಡಶೆಟ್ನಾಳ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ಟಿ. ಕೃಷ್ಣಮೂತರ್ಿ ಅವರು ಮಂಗಳವಾರದಂದು ಭೇಟಿ ನೀಡಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಿನ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಡಶೆಟ್ನಾಳ ಕೆರೆ ಹೂಳೆತ್ತುವ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಟಿ. ಕೃಷ್ಣಮೂತರ್ಿ ಅವರು ಕೂಲಿ ಕೆಲಸವನ್ನು ನಿರ್ವಹಿಸುತ್ತಿರುವ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಬರಗಾಲ ಇರುವದರಿಂದ ಎಲ್ಲರೂ ಎಂಜಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿ ಪ್ರತಿ ದಿನಕ್ಕೆ ಕೂಲಿ ರೂ. 249/- ಗಳನ್ನು ಪಡೆಯಿರಿ. ಮಳೆಗಾಲ ಸಂದರ್ಭದಲ್ಲಿ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಿನ ರೀತಿಯಲ್ಲಿ ಸಂಗ್ರಹಣೆ ಆಗಿ ಅಂತರಜಲದ ಮಟ್ಟ ಹೆಚ್ಚಾಗುತ್ತದೆ. ಕೂಲಿಕಾರರು ತಮಲ್ಲಿ ನೇಮಿಸಿದ ಕಾಯಕ ಬಂಧುಗಳು ಕೂಲಿಕಾರರ ಸರಿಯಾದ ಮಾಹಿತಿ ನಿರ್ವಹಣೆ, ಅವರಿಗೆ ಕೆಲಸ ಹಂಚಿಕೆ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದವುಗಳ ಬಗ್ಗೆ ಉಸ್ತುವಾರಿ ವಹಿಸಬೇಕು.
ಮಂಗಳವಾರದಂದು 370 ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರರಿಗೆ ಕೆಲಸ ಒದಗಿಸಿದೆ. ಯಾವುದೇ ಕಾರಣಕ್ಕೂ ಕೂಲಿಕಾರರಿಗೆ ಕೆಲಸ ನೀಡಲು ನಿರಾಕರಿಸಿಲ್ಲ ಎಂಬ ಮಾಹಿತಿಯನ್ನು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ತಾ.ಪಂ. ಕಾಯರ್ಾಲಯಕ್ಕೆ ನೀಡಬೇಕು. ಪ್ರತಿಯೊಂದು ಕುಟುಂಬಕ್ಕೆ ಇದೇ ಕಾಮಗಾರಿಯಲ್ಲಿ 100 ಮಾನವ ದಿನಗಳಷ್ಟು ಕಾರ್ಯನಿರ್ವಹಿಸಲು ಅವಕಾಶ ಇರುವದರಿಂದ ಎಲ್ಲರಿಗೂ ಕೂಲಿ ಕೆಲಸ ನೀಡಿ, ಅವರಿಗೆ ಸಕಾಲದಲ್ಲಿ ಕೂಲಿ ಹಣವನ್ನು ಪಾವತಿಸುವಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು. ಕಾಮಗಾರಿ ಸ್ಥಳ ಪರಿಶೀಲಿಸಿದ ನಂತರ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ತಾಣವನ್ನು ವೀಕ್ಷಣೆ ಮಾಡಿದರು.
ಕಿರಿಯ ಅಭಿಯಂತರ ಪ್ರವೀಣ ನಾಗನೂರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರನಗೌಡ ಚೆನ್ನವೀರಗೌಡ್ರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ತಾಂತ್ರಿಕ ಸಹಾಯಕ ವಿಜಯ ಬಳಿಗಾರ, ಬಿಎಫ್ಟಿ ರವಿಕುಮಾರ ಸೇರಿದಂತೆ ಕಾಯಕಬಂಧುಗಳು ಮತ್ತು ಗ್ರಾ.ಪಂ. ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.