ವಿಚಾರ ಸಂಕಿರಣ ಕಾರ್ಯಕ್ರಮ ಪ್ರಥಮ ಚಿಕಿತ್ಸೆ ಜ್ಞಾನ ಅತ್ಯವಶ್ಯಕ ಪಾಟೀಲ

ಲೋಕದರ್ಶನ ವರದಿ

ಸಿಂದಗಿ 23: ಪ್ರಥಮಚಿಕಿತ್ಸೆ ಹೆಚ್ಚಿನ ಅನಾಹುತಗಳನ್ನು ತಪ್ಪಿಸುವ ಕೆಲಸ ಮಾಡುತ್ತದೆ ಎಂದು ಸ್ಥಳಿಯ ಭಾವಿಕಟ್ಟಿ ಆಸ್ಪತ್ರೆಯ ವೈಧ್ಯ ಡಾ.ಸಂಗಮೇಶ ಪಾಟೀಲ ಹೇಳಿದರು.

ಶನಿವಾರ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಮಹಾವಿದ್ಯಾಲಯದ ಯುವ ರೆಡ್ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ತಾಲೂಕಾ ಶಾಖೆ ಸಿಂದಗಿ, ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಥಮ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು. ಪ್ರಥಮ ಚಿಕಿತ್ಸೆ ತರಬೇತಿ ಎಲ್ಲರೂ ಪಡೆಯಬೇಕಾಗಿರುವುದು ಅತ್ಯವಶ್ಯಕವಗಿದೆ. ಪ್ರಥಮ ಚಿಕಿತ್ಸೆ ತರಬೇತಿ ಪಡೆದ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳುಗಳಿಗೆ ಸರಿಯಾದ ವೈಧ್ಯಕೀಯ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಒಂದು ಸಂದರ್ಭದಲ್ಲಿ ಇದು ಸರಳ ಚಿಕಿತ್ಸೆಯಾಗಿರುತ್ತದೆ. ಕೆಲಸ ಸಂದರ್ಭದಲ್ಲಿ ಜೀವರಕ್ಷಕ ತಂತ್ರವಾಗಿರುತ್ತದೆ ಎಂದರು.

ಯುದ್ದ ಭೂಮಿಯಲ್ಲಿ ಭಯಾನಕತೆ ಕಂಡು ಗಾಯಾಳು ಯೋಧರಿಗೆ ಚಿಕಿತ್ಸೆ ನೀಡಲು ಹೆನ್ರಿ ಡ್ಯುನಾಂಟ್ ಅವರು ಪ್ರಾರಂಭಿಸಿದ ರೆಡ್ಕ್ರಾಸ್ ಸಂಸ್ಥೆಯೊಂದಿಗೆ ಪ್ರಥಮಚಿಕಿತ್ಸೆಯು ಪ್ರಾರಂಭವಾಯಿತು. ಯುದ್ಧ ಬೂಮಿಯಲ್ಲಿ ರೆಡ್ಕ್ರಾಸ್ ಸಂಸ್ಥೆಯು ಗಾಯಾಳು ಯೋಧರಿಗೆ ಪ್ರಥಮಚಿಕಿತ್ಸೆ ಮೂಲಕ ಅವರಿಗೆ ವೈಧ್ಯಕೀಯ ಚಿಕಿತ್ಸೆ ನೀಡಲಾಯಿತು ಎಂದರು.

ರೋಗಿ ಅಥವಾಗಿ ಅಪಘಾತಕ್ಕಿಡಾದ ವ್ಯಕ್ತಿಯ ಜೀವ ಉಳಿಸುವುದು, ಆಗಿರುವ ಅವಘಡವು ತಿವ್ರವಾಗದಂತೆ ತಡೆಯುವುದು, ಉಂಟಾದ ತಿವ್ರ ರಕ್ತಸ್ರಾವ ತಡೆಗಟ್ಟುವುದು ಪ್ರಥಮಚಿಕಿತ್ಸೆಯ ಉದ್ದೇಶವಾಗಿದೆ ಎಂದು ಹೇಳಿ ಪ್ರಥಮಚಿಕಿತ್ಸೆಯ ತರಬೇತಿ ನೀಡಿದರು.

ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್.ಎ.ಕೆರೂಟಗಿ ನೈಸಗರ್ಿಕ ಆಪತ್ತು ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಭಾರತೀಯ ರೆಡ್ಕ್ರಾಸ್ ತಾಲೂಕ ಶಖೆಯ ಚೇರಮನ್, ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಯುವ ರೆಡ್ಕ್ರಾಸ್ ಘಟಕವು ಪ್ರೋಗ್ರಾಮ್ ಆಫೀಸರ್ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಇಬ್ರಾಹಿಂಪೂರ ಅವರು ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಅರವಿಂದ ಮನಗೂಳಿ, ಬಿ.ಎ.ಪಾಟೀಲ, ಡಾ. ಎ.ಬಿ.ಸಿಂದಗಿ, ಡಾ.ಬಿ.ಜಿ.ಪಾಟೀಲ, ಡಾ.ಜೆ.ಜಿ.ಜೋಶಿ, ಎಮ್.ಜಿ.ಬಿರಾದಾರ, ಜಿ.ಜಿ.ಕಾಂಬಳೆ, ಶಶಿಕಾಂತ ಹೂಗಾರ, ಬಿ.ಡಿ.ಮಾಸ್ತಿ, ಬಿ.ಜಿ.ಮಠ, ಎಮ್.ಎಸ್.ಹೊಸಮನಿ, ಎಸ್.ಎಸ್.ಪಾಟೀಲ, ವಿ.ಜಿ. ಇನಾಮದಾರ, ಶೋಭಾ ಪೂಜಾರಿ, ಪ್ರಕಾಶ ಪೂಜಾರಿ, ಆರ್.ಪಿ.ಬಿರಾದಾರ, ವಿ.ಬಿ.ಪಾಟೀಲ, ಯಂಕಂಚಿಕರ ಸೇರಿದಂತೆ ಮಹಾವಿದ್ಯಾಲಯದ ಮತ್ತು ಶಿಕ್ಷಣ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಂಥಪಾಲಕ ಸಿದ್ದಬಸವ ಕುಂಬಾರ ಸ್ವಾಗತಿಸಿದರು. ಪ್ರಶಿಕ್ಷಣಾಥರ್ಿ ಅಶೋಕ ಮಾಲಳ್ಳಿ ನಿರೂಪಿಸಿದರು. ಪದ್ಮಾವತಿ ಮಲ್ಲೇದ ವಂದಿಸಿದರು