ಸ್ವರಾಂಜಲಿ ವಿಶೇಷ ಭಾವಸಂಗೀತ ಕಾರ್ಯಕ್ರಮ
ಬೆಳಗಾವಿ 15: ಶಹಾಪುರದ ಪ್ರಸಿದ್ಧ ಸರಸ್ವತಿ ವಾಚನಾಲಯದ 150ನೇ ಶತಕೋತ್ತರ್ ಸುವರ್ಣ ಮಹೋತ್ಸವ ವರ್ಷನಿಮಿತ್ತ ಪ್ರಸಿದ್ಧ ಗಾಯಕ ವಿನಾಯಕ ಮೋರೆ ಹಾಗೂ ಗಾಯಕಿ ಅಕ್ಷತಾ ಮೋರೆ ಅವರಿಂದ "ಸ್ವರಾಂಜಲಿ" ವಿಶೇಷ ಭಾವಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅವರು ಅನೇಕ ಸುಮಧುರ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮನಗೆದ್ದರು. ಅವರಿಗೆ ಸಿಂಥಸೈಜರ್‌ನಲ್ಲಿ ಸುನೀಲ ಗುರವ, ತಬಲಾ ಸಂತೋಷ್ ಪುರಿ ಮತ್ತು ಆಕ್ಟೋಪಾಡ್‌ನಲ್ಲಿ ಸ್ನೇಹಲ್ ಜಾಧವ ಅವರು ಅತ್ಯುತ್ತಮ ಸಂಗೀತಸಾಥ ಮಾಡಿದರು.
ಸರಸ್ವತಿ ವಾಚನಾಲಯದ ಅಧ್ಯಕ್ಷೆ ಸ್ವರೂಪಾ ಇನಾಮದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಕಲಾವಿದರನ್ನು ಪರಿಚಯಿಸಿದರು. ಗಣ್ಯರಿಂದ ದೀಪ ಬೆಳಗಿಸಲಾಯಿತು. ಕಾರ್ಯಾಧ್ಯಕ್ಷ ಸುಹಾಸ ಸಾಂಗ್ಲಿಕರ ಅವರು ವಿನಾಯಕ ಮೋರೆ ಮತ್ತು ಅಕ್ಷತಾ ಮೋರೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಶ್ರೋತೃಗಳು ಪಾಲ್ಗೊಂಡಿದ್ದರು.