ಕಬ್ಬಿಗೆ ಸೂಕ್ತ ದರ ನೀಡಲು ಆಗ್ರಹಿಸಿ ಸ್ವಾಭಿಮಾನಿ ಶೇತಕರಿ ಸಂಘಟನೆ ಪ್ರತಿಭಟನೆ

ಚಿಕ್ಕೋಡಿ 13: ರೈತರು ಬೆಳೆದ ಕಬ್ಬಿಗೆ ಎಫ್ಆರ್ಪಿ ಆಧಾರದ ಮೇಲೆ ದರ ನೀಡಬೇಕು ಇಲ್ಲದ್ದಿದ್ದರೆ ಕಾಖರ್ಾನೆ ಬಂದ್ ಮಾಡಬೇಕೆಂದು ಒತ್ತಾಯಿಸಿ ಸ್ವಾಭಿಮಾನಿ ಶೇತಕರಿ ಸಂಘಟನೆ ಕಾರ್ಯರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಚಿಕ್ಕೋಡಿ ಮತ್ತು ನಿಪ್ಪಾಣಿ ಭಾಗದ ಗಳತಗಾ, ಬೇಡಕಿಹಾಳ, ಯಕ್ಸಂಬಾ, ಭೋಜ, ಕಾರದಗಾ, ಶಮನೇವಾಡಿ, ಸದಲಗಾ ಮುಂತಾದ ಗ್ರಾಮಗಳಿಂದ ಆಗಮೀಸಿದ ರೈತರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಅಲ್ಲಿಂದ ಬಸವ ಸರ್ಕಲ ಮಾರ್ಗವಾಗಿ ತಹಶೀಲ್ದಾರ ಕಚೇರಿಗೆ ಆಗಮೀಸಿ ಒಂದು ಗಂಟೆಗಳ ಕಾಲ ಧರಣಿ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಗಡಿ ಭಾಗವಾದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಸಕ್ಕರೆ ಕಾಖರ್ಾನೆಗಳು ಒಂದೇ ಕಂತಿನಲ್ಲಿ ಎಫ್ಆರ್ಪಿ ದರ ನೀಡುತ್ತೇವೆಂದು ಅಲ್ಲಿಯ ಕಾಖರ್ಾನೆಯ ಮಾಲಿಕರು ಪ್ರತಿಜ್ಞೆಗೈದು ಹಂಗಾಮು ಆರಂಭ ಮಾಡಿದ್ದಾರೆ. ಅದೇ ರೀತಿ ನಮ್ಮ ಭಾಗದ ಸಕ್ಕರೆ ಕಾಖರ್ಾನೆಗಳು ಕೂಡಾ ರೈತರಿಗೆ ಯೋಗ್ಯ ದರ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಮುಖಂಡ ರಾಜು ಕಿಚಡೆ ಮಾತನಾಡಿ, ಕಳೆದ ಹಂಗಾಮಿನಲ್ಲಿ ಪೂರೈಕೆಯಾದ ಕಬ್ಬಿನ ಬಾಕಿ ಉಳಿಸಿಕೊಂಡಿರುವ ಕಾಖರ್ಾನೆಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ರೈತರು ಸಾಲ ಮಾಡಿ ಕಬ್ಬು ಬೆಳೆದು ಕಾಖರ್ಾನೆಗೆ ಕಳಿಸಿದ್ದಾರೆ. ಆದರೆ ಬಾಕಿ ಉಳಿಸಿಕೊಂಡಿರುವ ಕ್ರಮ ಸರಿಯಲ್ಲ, ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಕಾಖರ್ಾನೆ ಮಾಲಿಕರ ಸಭೆ ಕರೆದು ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಂಸದ ರಾಜು ಶೆಟ್ಟಿ ನೇತೃತ್ವದಲ್ಲಿ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ, ಬೇಡಕಿಹಾಳ, ಚಿಕ್ಕೋಡಿ ಭಾಗದ ಕಾಖರ್ಾನೆಗಳನ್ನು ಬಂದ್ ಮಾಡಿ ರಸ್ತೆ ತಡೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ರಮೇಶ ಪಾಟೀಲ, ಪ್ರಕಾಶ ತಾರದಾಳೆ, ಕಿರಣ ಮಂಗಾವೆ, ಸುಭಾಷ ಚೌಗಲಾ, ಎನ್.ಐ.ಖೋತ, ಸಂಜಯ ಪಾಟೀಲ, ಶಿವಗೌಡ ಪಾಟೀಲ, ಕೃಷ್ಣಾ ಚೆಂಡಕೆ, ಸಚೀನ ಖೋತ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.