ಬಾಲಿವುಡ್ ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟಿ ಅನುಷ್ಕಾ ಶಮರ್ಾ, ಸೋನಂ ಕಪೂರ್, ನೇಹಾ ಧೂಪಿಯಾ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯದಲ್ಲೇ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಇಷ್ಟು ದಿನ ಮದುವೆ ಬೇಡ ಎಂದು ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಇದೀಗ ಹಸೆಮಣೆ ಏರಲು ಮನಸ್ಸು ಮಾಡಿದ್ದಾರಂತೆ. ತಮ್ಮ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ರನ್ನ ವರಿಸಲು ಸುಷ್ಮಿತಾ ಸೇನ್ ಮುಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಎರಡು ತಿಂಗಳ ಹಿಂದೆಯಷ್ಟೇ ಫ್ಯಾಶನ್ ಈವೆಂಟ್ ಒಂದರಲ್ಲಿ ಸುಷ್ಮಿತಾ ಸೇನ್ ಹಾಗೂ ರೋಹ್ಮನ್ ಶಾಲ್ ಭೇಟಿ ಆಗಿದ್ದರು. ಪರಿಚಯ ಸ್ನೇಹವಾಗಿ, ಇದೀಗ ಸ್ನೇಹ ಪ್ರೀತಿಗೆ ತಿರುಗಿರುವುದರಿಂದ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಹಾಕಿಸಿಕೊಳ್ಳಲು ಜೋಡಿ ತೀಮರ್ಾನ ಮಾಡಿದ್ಯಂತೆ.
ರೋಹ್ಮನ್ ಶಾಲ್ ರನ್ನ ಮದುವೆ ಆಗಲು ಸುಷ್ಮಿತಾ ಸೇನ್ ಗೆ ಇಬ್ಬರೂ ಹೆಣ್ಮಕ್ಕಳೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೀಗಾಗಿ, ಮುಂದಿನ ವರ್ಷ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಸುಷ್ಮಿತಾ ಸೇನ್ ಎಲ್ಲೇ ಹೋದರೂ, ಅವರ ಜೊತೆಗೆ ರೋಹ್ಮನ್ ಶಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ದೀಪಾವಳಿ ಕೂಡ ಆಚರಿಸಿದ್ದಾರೆ. ಇಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.