ಶರಣ ಚಿಂತನೆಗಳು ಸಾರ್ವಕಾಲಕೂ ಸತ್ಯಗಳ: ಶಿಡ್ಲಾಪುರ

ಲೋಕದರ್ಶನ ವರದಿ

ಶಿಗ್ಗಾಂವಿ20 : ದೇಶೀ ಸಂಸ್ಕೃತಿಯ ಜೀವ ಸೆಲೆಯನ್ನೊಳಗೊಂಡು, ಮಾನವೀಯ ಮೌಲ್ಯಗಳ ಅನಾವರಣಗೊಳಿಸಿ, ಇಡೀ ಜಗಕ್ಕೆ ಮಾದರಿ ಆಲೋಚನೆಗಳನ್ನು ನೀಡಿದ ಶರಣ ಸಂಸ್ಕೃತಿ ಚಿಂತನೆಗಳು ಸಾರ್ವಕಾಲಿಕ ಸತ್ಯಗಳು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪುರ ನುಡಿದರು.

ಶಿಗ್ಗಾಂವಿಯ ಹಿರಿಯ ನ್ಯಾಯವಾದಿ ಜಿ.ಎ.ಹಿರೇಮಠ ಅವರ ನಿವಾಸದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ,  ವಚನ ನಿಧಿ ವನಿತಾ ಸಂಘ ಸಂಯುಕ್ತವಾಗಿ ಆಯೋಜಿಸಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಜರುಗಿತು. 

   ನಂತರ ಮಾತನಾಡಿದ ಅವರು, ಶರಣ ಸಂಸ್ಕೃತಿಯ ಪ್ರಚಾರ ಪ್ರಸಾನ ಇಂದಿನ ಅತ್ಯಗತ್ಯವಾಗಿದೆ. ಶರಣ ಸಂದೇಶಗಳು ನಮ್ಮ ಮನೆ ಮನ ತಲುಪಿಸುವಲ್ಲಿ ಪ್ರಾಮಾಣಿಕ ಯತ್ನ ನಡೆಯಬೇಕು. ಜಾತಿ ಮತದ ಸಂಕೊಲೆ ಬಿಡಿಸಿ ಮನಸ್ಸನ್ನು ಅರಳಿಸಿದ ವಚನಗಳು ಸರಳ ಸಾಮಾಜಿಕ ಸಂದೇಶಗಳಾಗಿವೆ ಎಂದರು.

ಧಾರವಾಡದ ಕನರ್ಾಟಕ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಫ್.ಚಾಕಲಬ್ಬಿ ಪರಿಷತ್ತಿನ ಸನ್ಮಾನ ಸ್ವೀಕರಸಿ ಮಾತನಾಡಿ, ಶಿಕ್ಷಣ ಕೇವಲ ನಾಲ್ಕು ಗೋಡೆಗಳ ನಡುವಿನ ಪುಸ್ತಕಗಳ ಪ್ರತಿಫಲನ ಮಾತ್ರವಲ್ಲ. ಜೀವನ ಶಿಕ್ಷಣ ಅತ್ಯಂತ ಮುಖ್ಯವಾದುದು. ಅಕ್ಷರಸ್ಥ ಅನಕ್ಷರಸ್ಥ ಎಂಬ ಕಾಲ ಇದಲ್ಲ. ಸಮಾಜಮುಖಿ, ಸಾಂಸ್ಕೃತಿಕ ಬದುಕನ್ನು ಎದುರು ನೋಡುತ್ತಿರುವ ಕಾಲವಿದು. ನಮ್ಮ ಹತಕ್ಕಾಗಿ ದಾರಿ ತೋರಿದ ಗುರು ಹಿರಿಯರನ್ನು ಮರೆಯಬಾರದು. ನಾವು ಕೃತಜ್ಞರಾಗಿರಬೇಕೆ ಹೊರತು ಸಮಾಜಕ್ಕೆ ಕೃತಘ್ನರಾಗಿರಬಾರದು. ಒಳ್ಳೆಯದನ್ನು ಸ್ವೀಕರಿಸುವ, ಸಲ್ಲದ್ದನ್ನು ತಿರಸ್ಕರಿಸುವ ಮನೋವೃತ್ತಿ ನಮ್ಮದಾಗಿರಬೇಕು ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಲತಾ ಹಿರೇಮಠ, ಶರಣರ ಸಂದೇಶಗಳನ್ನು ಕೇಳಿ ಅನುಭವಿಸುವುದೆ ಒಂದು ಸುಖ. ನಾಡಿನ ಹಿತಕ್ಕೆ ಒಡ್ಡಿಕೊಂಡ ವಚನಗಳು ಜನಸಾಮಾನ್ಯರತ್ತ ತಲುಪಬೇಕಾಗಿದೆ. ಜೀವನದ ಸತ್ಯಗಳನ್ನು ಈ ಮೂಲಕ ಅರಿಬೇಕಾಗಿದೆ. ಶರಣ ಚಿಂತನೆಗಳನ್ನು ಪ್ರಸಾರ ಮಾಡುವುದು ಒಂದು ಪುಣ್ಯದ ಕಾರ್ಯ ಎಂದರು.

ಉಪನ್ಯಾಸಕಿ ರೇಖಾ ಜವಳಿ ವಚನ ಸಾಹಿತ್ಯದಲ್ಲಿ ಮಹಿಳೆಯ ಪಾತ್ರ ವಿಷಯದ ಕುರಿತು ಮಾತನಾಡಿ, ಜಗತ್ತು ವಿಚಾರ ಮಾಡುವ ಮೊದಲೇ ಮಹಿಳೆಗೆ ಸ್ವಾತಂತ್ರ್ಯ ನೀಡಲು ಮುಂದಾದ ವಚನಕಾರರ ದೂರ ದೃಷ್ಠಿಯನ್ನು ಮೆಚ್ಚಬೇಕು. ಅಕ್ಕಮಹಾದೇವಿ ಕೇವಲ ವಚನಕಾತರ್ಿ ಮಾತ್ರವಲ್ಲ. ನಿಜವಾದ ಬಂಡಾಯಿ ಎಂಬುದನ್ನು ಅರಿಯಬೇಕು. ಸತ್ಯವನ್ನು ದೈರ್ಯದಿಂದ ಹೇಳಿದ ಅದರಂತೆ ನಡೆದ ನಿಜವಾದ ಹೃದಯವಂತ ಕ್ರಾಂತಿಕಾರಿ ಸ್ತ್ರೀ ಎಂದು ಅಕ್ಕಮಹಾದೇವಿ ಎಂದರು.

ಚಂದನ ದೂರದರ್ಶನ ಕೇಂದ್ರ ಸಹ ನಿದರ್ೆಶಕಿ ನಿರ್ಮಲಾ ಎಲಿಗಾರ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅದ್ಯಕ್ಷ ಮಲ್ಲಪ್ಪ ರಾಮಗಿರಿ, ಉಪಾಧ್ಯಕ್ಷೆ ಸುಶೀಲಕ್ಕ ಪಾಟೀಲ, ಜಿಲ್ಲಾ ಸದಸ್ಯ ಸಿ.ಡಿ.ಯತ್ನಳ್ಳಿ,  ನಗರ ಘಟಕದ ಅಧ್ಯಕ್ಷ ಕೆ.ಬಿ.ಚನ್ನಪ್ಪ, ಕಾರ್ಯದಶರ್ಿ ಎಂ.ಬಿ.ಹಳೇಮನಿ, ನ್ಯಾಯವಾದಿ ಜಿ.ಎ.ಹಿರೇಮಠ, ಗೌರವಾಧ್ಯಕ್ಷ ಟಿ.ವಿ.ಸುರಗಿಮಠ, ಪ್ರಾಚಾರ್ಯ ಸಿ.ಮಂಜುನಾಥ, ಕದಳಿ ತಾಲೂಕು ಘಟಕದ ಅಧ್ಯಕ್ಷೆ ಉಷಾ ಪಾಟೀಲ, ಶಕುಂತಲಾ ಕೋಣನವರ  ಅತಿಥಿಳಾಗಿದ್ದರು. ಮಹಾಂತೇಶ ಬಳಿಗಾರ, ಬೈಲವಾಳ ವಚನಗಳನ್ನು ಹಾಡಿದರು.