ಲೋಕದರ್ಶನ ವರದಿ
ಮುಧೋಳ: ಮುಧೋಳ ಬಸವೇಶ್ವರ ಸರ್ಕಲ್ ಬಳಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ನಡೆಸುತ್ತಿರುವ ಅನಧರ್ಿಷ್ಟವಾಧಿ ಧರಣಿ ಸತ್ಯಾಗ್ರಹಕ್ಕೆ ರವಿವಾರದಂದು ಸ್ಥಳೀಯ ಆರ್ಎಂಜಿ ಕಾಲೇಜಿನ 1992ನೇ ಸಾಲಿನ ಎಸ್.ಎಸ್ಎಲ್.ಸಿ ಬ್ಯಾಚ್ ವಿದ್ಯಾಥರ್ಿಗಳು ಬೆಂಬಲ ವ್ಯಕ್ತಪಡಿಸಿ, ಧರಣಿ ಸತ್ಯಾಗ್ರಹದಲ್ಲಿ ಕೆಲಗಂಟೆಯ ವರೆಗೆ ಕುಳಿತು ನಗರಕ್ಕೆ ಬೇಕಾ ಗುವ ಮೂಲಭೂತ ಸೌಲಭ್ಯಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಆರ್ಎಂಜಿ ಕಾಲೇಜಿನ 1992 ನೇ ಸಾಲಿನ ಎಸ್ಎಸ್ಎಲ್ಸಿ ಬ್ಯಾಚ್ ವಿದ್ಯಾಥರ್ಿ ಪ್ರಕಾಶ ರಾಮತೀರ್ಥ ಮಾತನಾಡಿ, ಮುಧೋಳ ನಗರವು ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ನಗರದ ಅಭಿವೃದ್ದಿಗೆ ತಕ್ಕಂತೆ ಮೂಲಭೂತ ಸೌಕರ್ಯಗಳು ಇಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಪಡುವಂತಾಗಿದೆ.ಮುಖ್ಯವಾಗಿ ರಾಜ್ಯ ಹೆದ್ದಾರಿ, ಬೈಪಾಸ್ ರಸ್ತೆ,ಕುಡಿಯುವ ನೀರು ಸರಬರಾಜು, ಒಳಚ ರಂಡಿ ಸೇರಿದಂತೆ ಇತರೆ ಸೌಲಭ್ಯಗಳು ಸಮರ್ಪಕವಾಗಿ ದೊರೆಯದೆ ಇರುವುದರಿಂದ ನಾಗರಿಕರು ಅನುಭವಿಸುವ ಕಷ್ಟ ಹೇಳತೀರದು.
ಜನಪ್ರತಿನಿಧಿಗಳಾಗಲಿ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಾಗಲಿ ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಕಾರಣದಿಂದಲೇ ಇಂದು ಮುಧೋಳ ನಾಗರಿಕರು ಬೀದಿಗಿಳಿದು ಹೋರಾಟ ಮಾಡು ವುದು ಅನಿವಾರ್ಯವಾಗಿದೆ ಎಂದರು.
ಡಾ.ಕೆ.ಆರ್.ಮಸಳಿ, ಎಸ್.ಎಸ್.ಶಿಂಧೆ ಅವರು ಸಾಂದಭರ್ಿಕವಾಗಿ ಮಾತನಾಡಿದರು. ಡಾ.ಕೆ.ವ್ಹಿ.ಬೂದಿಹಾಳ, ಡಾ.ಸತೀಶ ಮಲಘಾಣ, ಅಮಿತ ಶಹಾ, ಮಲ್ಲಿಕಾಜರ್ುನ ಗೋವಿಂದಪೂರಮಠ, ಶ್ರೀಶೈಲ ಆನದಿನ್ನಿ, ಬಸವರಾಜ ನಾಲವತ್ತವಾಡ, ಅಜೀತ ಧಾವಣಿ, ಅಶೋಕ ಕುಳಲಿ, ಮಾರುತಿ ಜಾಧವ, ಡಾ.ಬಿ.ಎಂ. ಮುರಗುಂಡಿ, ಕಾಶೀನಾಥ ಹೀರೇಮಠ, ಆರ್.ಎಸ್.ಕುಂಬಾರ, ಮಂಜು ಕುಂಬಾರ, ಮಾರುತಿ ವಾವ್ಹಳ,ಸಂಜು ಶಿರಗಾಂವಿ, ಪ್ರಕಾಶ ಕಪರ್ೆ, ಚಂದ್ರಹಾಸ ಗೊಬ್ಬೂರ, ಯಲ್ಲಪ್ಪ ಮರಾಠೆ, ಎಸ್.ಐ.ಹಿರೇಮಠ, ಕಿರಣ ಕುಲಕಣರ್ಿ, ಶಿವಾನಂದ ಅಕ್ಕಿ, ರಾಮಣ್ಣ ಬಿದರಿ, ಬಿ.ಆರ್. ತಿಮ್ಮಣ್ಣವರ, ಆನಂದ ಗಾಯಕವಾಡ, ಸತೀಶ ಶಿಂಧೆ, ಎಸ್.ಐ.ಮದರಖಂಡಿ, ಗುರಸಿದ್ದಪ್ಪ ಬಿದರಿ ಸೇರಿದಂತೆ ಹಲ ವರು ಉಪಸ್ಥಿತರಿದ್ದರು.