ಸಂಕಲನಾತ್ಮಕ ಪರೀಕ್ಷೆ : ಬಿಇಒ ಭೇಟಿ ಪರೀಶೀಲನೆರಜಾ ಅವಧಿಯಲ್ಲೂ ಮಕ್ಕಳು ಅದ್ಯಯನಕ್ಕೆ ಆದ್ಯತೆ ನೀಡಲಿ- ಅಶೋಕ ಬಸಣ್ಣವರ
ಚಿಕ್ಕಪಡಸಲಗಿ 10 : ಇದು ಸ್ಪಧಾ9ತ್ಮಕ ಯುಗ. ಮಕ್ಕಳಿಗೆ ವಿದ್ಯಾಭ್ಯಾಸವೇ ಪ್ರಾಮುಖ್ಯತೆವಾಗಬೇಕು. ಓದಾಭ್ಯಾಸಕ್ಕೆ ಸತತ ಆದ್ಯತೆ ನೀಡಲೇ ಬೇಕು. ಶಿಕ್ಷಣದಿಂದ ಮಾತ್ರ ಜೀವನ ಚೈತ್ರ ಅರಳುತ್ತದೆ.ಭವಿಷ್ಯತ್ತಿನ ಜೀವನ ಚಿತ್ರಣ ಬದಲಾಗುತ್ತದೆ. ಆ ಕಾರಣ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಉತ್ತಮ ಶಿಕ್ಷಣ ಪಡೆಯಲು ಗಟ್ಟಿತನದ ಮನಸ್ಸು ತೋರಬೇಕು ಎಂದು ಜಮಖಂಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು.ಸೋಮವಾರ ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಅನೀರೀಕ್ಷಿತ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ಪರೀಶೀಲಿಸಿದರು. ಮಧ್ಯಾಹ್ನದ ಅವಧಿಯಲ್ಲಿ ನಡೆದ ಪ್ರಸಕ್ತ 2024-25 ನೇ ಸಾಲಿನ 8 ಹಾಗೂ 9 ನೇ ತರಗತಿ ದ್ವೀತಿಯ ಸಂಕಲನಾತ್ಮಕ ಮೌಲ್ಯಾಂಕನ (ಎಸ್.ಎ.2) ಕನ್ನಡ ವಿಷಯದ ಪರೀಕ್ಷೆಯನ್ನು ಖುದ್ದಾಗಿ ಪರೀಕ್ಷಾ ಕೊಠಡಿಗಳಿಗೆ ತೆರಳಿ ಪರೀಶೀಲಿಸಿದರು.ಅಚ್ಚುಕಟ್ಟಾಗಿ ಪರೀಕ್ಷಾ ನಡೆಯುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಪರೀಕ್ಷೆಯನ್ನು ಉತ್ಸಾಹದಿಂದ ಬರೆಯುವ ಮನೋಭಾವ ಮಕ್ಕಳು ಹೊಂದಬೇಕು. ಆ ಆತ್ಮಸ್ಥೈರ್ಯ ಅಂಕುರಗೊಳ್ಳಲು ನಿರಂತರ ಅಭ್ಯಾಸದ ಹವ್ಯಾಸ ರೂಢಿಸಿಕೊಳ್ಳಬೇಕು.ಉತ್ತಮ ಸಂಸ್ಕಾರ, ಚಾರಿತ್ರ್ಯ ವಿದ್ಯಾರ್ಥಿಗಳ ಸಮೂಹಕ್ಕೆ ಅತ್ಯಗತ್ಯ. ಇಂಥ ಗುಣ ಸ್ವಭಾವವುಳ್ಳವರೇ ಸರ್ವೋಚ್ಚರು.ಅವರು ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನಮಾನ ಪಡೆಯಬಲ್ಲರು ಎಂದರು. ಬೇಸಿಗೆ ರಜಾವಧಿಯಲ್ಲಿ ವಿದ್ಯಾರ್ಥಿಗಳು ಸುಖಾಸುಮ್ನೇ ಅತ್ತಇತ್ತ ಸುತ್ತಾಡಿ ಕಾಲ ಹರಣ ಮಾಡದೇ ನಿತ್ಯ ಅಭ್ಯಾಸದ ಕಡೆಗೆ ಗಮನ ಹರಿಸಬೇಕು.ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ತಮ್ಮ ಶೈಕ್ಷಣಿಕ ಏಳಿಗೆಗಾಗಿ ಸ್ವಯಂ ಪ್ರೇರಿತರಾಗಿ ಈಗಿಂದಲೇ ಪ್ರಯತ್ನಿಸಬೇಕು. ಎಂಟು, ಒಂಬತ್ತನೇ ತರಗತಿ ಮಕ್ಕಳು ತಮ್ಮ ಭವಿಷ್ಯತ್ತಿನ ಶ್ರೇಯಸ್ಸಿಗಾಗಿ ಶಿಸ್ತು, ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಸತತ ಪ್ರಯತ್ನ, ಕಠಿಣ ಪರಿಶ್ರಮ, ಶ್ರದ್ಧೆಯ ಭಾವ ಇದ್ದರೆ ಮಾತ್ರ ನಿಮ್ಮ ಶೈಕ್ಷಣಿಕ ಕನಸುಗಳು ಸಾಕಾರಗೊಳ್ಳಲು ಸಾಧ್ಯ. ಶಿಕ್ಷಣದ ಜೊತೆಗೆ ಉತ್ತಮ ನಡವಳಿಕೆ, ಮೌಲ್ಯಯುತ ಸಂಸ್ಕಾರ ಹೊಂದಿ. ಶಿಕ್ಷಣ ಪ್ರಗತಿಯೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಂಕಲ್ಪ ತೋರಬೇಕು.ಮೊಬೈಲ್, ಮಾದಕ ವ್ಯಸನದ ಗೀಳಿಗೆ ಒಳಗಾಗದೆ ಓದು,ಬರಹ ನಿರಂತರ ವ್ಯಾಪಕವಾಗಿ ಪ್ರಬಲವಾದಲ್ಲಿ ನೀವುಗಳು ಪ್ರತಿಭಾವಂತರಾಗಲು ಸಾಧ್ಯ. ಆ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಶೈಕ್ಷಣಿಕ ಅದ್ಯಯನಕ್ಕೆ ನಿರ್ಲಕ್ಷ್ಯ ವಹಿಸುವುದು ಸಲ್ಲದು.ಶಿಕ್ಷಣ ಜ್ಞಾನವೇ ನಿಜವಾದ ಸಂಪತ್ತು ಎಂಬುದನ್ನು ಎಂದು ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎಸ್ಸೆಸ್ಸೆಲ್ಸಿ ಮಕ್ಕಳು ಪರೀಕ್ಷೆಗೆ ಸನ್ನದರಾಗಿ : ಎಸ್ಸೆಸ್ಸೆಲ್ಸಿ ಮಕ್ಕಳು ಪರೀಕ್ಷಾ ತಯಾರಿ ಮಾಡಿಕೊಂಡು ಪ್ರಸನ್ನ ಭಾವದಿಂದ ಸನ್ನದ್ಧರಾಗಬೇಕು. ಯಾವುದೇ ರೀತಿಯ ಭಯ,ಆತಂಕ,ದುಗುಡು,ದುಮ್ಮಾನುಗಳನ್ವು ಮನಸ್ಸಿನಲಿರಿಸಿಕೊಳ್ಳದೇ ಖುಷಿಯಿಂದ ಪರೀಕ್ಷೆ ಎದುರಿಸಬೇಕು.ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಉತ್ತಮ ಫಲಿತಾಂಶ ತಮ್ಮದಾಗಿಸಿಕೊಳ್ಳಬೇಕು.ಹೆತ್ತವರಿಗೆ, ಗುರು ಹಿರಿಯರಿಗೆ ಮತ್ತು ಕಲಿತ ಶಾಲೆ,ನಿಮ್ಮ ಊರು,ನಮ್ಮ ತಾಲೂಕಿಗೆ ಹೆಸರು ತರಬೇಕು. ಪರೀಕ್ಷಾ ಭಯ ಬಿಟ್ಟು ಧೈಯೋ9ಲ್ಲಾಸದಿಂದ ಹಬ್ಬ ಆಚರಿಸುವ ರೀತಿಯಲ್ಲಿ ಪರೀಕ್ಷೆ ಎದುರಿಸಿ ಯಶಸ್ಸು ಕಾಣಬೇಕು ಎಂದು ಎಸ್ಸೆಸ್ಸೆಲ್ಸಿ ಯುವ ಸಮೂಹಕ್ಕೆ ಕರೆ ನೀಡಿದ ಬಿಇಒ ಅಶೋಕ ಬಸಣ್ಣವರ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಪಾಲಕ,ಪೋಷಕ ಹಾಗೂ ಶಿಕ್ಷಕ ಬಳಗ ಹೆಚ್ಚು ಗಮನ ಹರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಬಿಇಒ ಅವರ ಜೊತೆಯಲ್ಲಿ ಆಗಮಿಸಿದ ಜಮಖಂಡಿ ತಾಲೂಕು ಅಕ್ಷರ ದಾಸೇಹ ಅಧಿಕಾರಿ ಸಿ.ಎಸ್.ಕಲ್ಯಾಣಿ ಬಿಸಿಯೂಟ,ಆಡುಗೆ ಕೋಣೆ ಶುಚಿತ್ವ ತಪಾಸಣೆ ನಡೆಸಿದರು. ಇಲ್ಲಿನ ಪರೀಕ್ಷಾ,ಅಕ್ಷರ ದಾಸೋಹದ ವ್ಯವಸ್ಥೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಿ.ಆರಿ್ಪ. ಆರ್.ಎಚ್.ಮುದ್ನೂರ, ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ಶಿಕ್ಷಕರಾದ ಗುಲಾಬಚಂದ ಜಾಧವ, ಈರ್ಪ ದೇಸಾಯಿ, ಲೋಹಿತ ಮಿಜಿ9, ಶ್ರೀಶೈಲ ಹುಣಶಿಕಟ್ಟಿ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕಿಯರಾದ ಸಹನಾ ಹತ್ತಳ್ಳಿ (ಕಲ್ಯಾಣಿ), ಪ್ರಮೀಳಾ ತೇಲಸಂಗ, ಶೃತಿ ಲಿಗಾಡೆ ಇತರರಿದ್ದರು.ಪೋಟೋ(1್ಘ2) : ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಸೋಮವಾರ ಬಿಇಒ ಅಶೋಕ ಬಸಣ್ಣವರ ಹಾಗೂ ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಸಿ.ಎಸ್.ಕಲ್ಯಾಣಿ ಅನೀರೀಕ್ಷಿತ ಭೇಟಿ ನೀಡಿ 8,9 ನೇ ತರಗತಿ ದ್ವೀತಿಯ ಸಂಕಲನಾತ್ಮಕ ಮೌಲ್ಯಾಂಕನ (ಎಸ್.ಎ.2) ಕನ್ನಡ ಪರೀಕ್ಷೆ ಮಕ್ಕಳು ಬರೆಯುತ್ತಿರುವುದನ್ನು ಪರೀಶೀಲಿಸಿದರು. ಸಿಆರ್ ಪಿ ಆರ್.ಎಚ್.ಮುದ್ನೂರ, ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಇತರರಿದ್ದರು