ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ತಾಳಿಕೋಟಿ 07 : ಪಟ್ಟಣದ ದಿ.ಸಹಕಾರಿ ಕೋ-ಆಫ್ ಬ್ಯಾಂಕ್ ನ 5 ವರ್ಷಗಳ ಆಡಳಿತ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ಜನವರಿ 19ರಂದು ಜರಗುವ ಚುನಾವಣೆಗೆ ಹಿಂದುಳಿದ ವರ್ಗ ಎ-1 ಸ್ಥಾನಕ್ಕೆ ಪುರಸಭೆ ಮಾಜಿ ಸದಸ್ಯ ಪ್ರಕಾಶ ಹಜೇರಿ ತಮ್ಮ ನಾಮಪತ್ರ ಸಲ್ಲಿಸಿದರು. ಮಂಗಳವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ಸಹಾಯಕ ಚುನಾವಣಾ ಅಧಿಕಾರಿ ಆರಿ್ಬ.ಧಮ್ಮೂರಮಠ ಇವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿಯಡೆಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಸೇವಾ ಮನೋಭಾವದೊಂದಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಮತದಾರ ಬಾಂಧವರು ನನಗೆ ಆಶೀರ್ವಾದ ಮಾಡಬೇಕು ಎಂದರು. ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಪುರಸಭೆ ಸದಸ್ಯರಾದ ಮುತ್ತಪ್ಪ ಚಮಲಾಪೂರ,ಅಣ್ಣಾಜಿ ಜಗತಾಪ,ಪರಶುರಾಮ ತಂಗಡಗಿ, ಅಲ್ಪ ಸಂಖ್ಯಾತ ಮುಖಂಡ ಇಬ್ರಾಹಿಂ ಮನ್ಸೂರ,ಮಾನಸಿಂಗ್ ಕೊಕಟನೂರ,ಮಹಾಂತೇಶ ಮುರಾಳ,ಗೋಪಾಲಸಿಂಗ್ ರಜಪೂತ,ಬಾಬು ಹಜೇರಿ,ತಿಪ್ಪಣ್ಣ ಸಜ್ಜನ,ಮುತ್ತು ಕಶಟ್ಟಿ,ಭರತ್ ವಿಜಾಪುರ,ಸುರೇಶ ಹಜೇರಿ, ಮಂಜೂರ ಬೇಪಾರಿ,ರವಿ ಕಟ್ಟಿಮನಿ,ಮಹಿಬೂಬ ಕೆಂಭಾವಿ, ಪ್ರಹ್ಲಾದ್ ಹಜೇರಿ, ಹರಿಸಿಂಗ ಕೊಕಟನೂರ, ರತನಸಿಂಗ ಕೊಕಟನೂರ, ರಘು ಸೇಠ್, ವಿಶ್ವ, ತನ್ವಿರ್ ಮನಗೂಳಿ,ರಾಮು ಜಗತಾಪ್, ರಿಯಾಜ್ ಡೋಣಿ ಮತ್ತೀತರರು ಇದ್ದರು.