ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪರೀಕ್ಷೆ ಸಮಯದಲ್ಲಿ ಓದಿಗೆ ಹೆಚ್ಚಿನ ಮಹತ್ವ ಕೊಡಬೇಕು; ಆಯ್.ಆರ್.ನದಾಫ್
ರಾಯಬಾಗ, 17; ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆ ಸಮಯದಲ್ಲಿ ಓದಿಗೆ ಹೆಚ್ಚಿನ ಮಹತ್ವ ಕೊಡಬೇಕೆಂದು ನೀಲಜಿ ಕೆಪಿಎಸ್ ಶಾಲೆ ಪ್ರಾಚಾರ್ಯ ಆಯ್.ಆರ್.ನದಾಫ್ ಹೇಳಿದರು. ಇತ್ತೀಚಿಗೆ ತಾಲೂಕಿನ ಸುಟ್ಟಟ್ಟಿಯ ಉನ್ನತಿಕರಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು. ವಕೀಲರಾದ ಸಾರಿಕಾ ಕಾಂಬಳೆ ಅವರು, ಮಕ್ಕಳಿಗೆ ಪೋಕ್ಸೋ ಕಾಯಿದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಗಳ ಬಗ್ಗೆ ಕಾನೂನಿನ ಅರಿವನ್ನು ಮೂಡಿಸಿದರು. ನೀಲಜಿ ಸಿ.ಆರಿ್ಪ ಬಸವರಾಜ ಕಾಂಬಳೆ ಅವರು ಮಾತನಾಡಿ, ಈ ಶಾಲೆ ಪ್ರಾಂಶುಪಾಲರಾದ ರೇವತಿ ಪಾಟೀಲ್ ಅವರ ಪರಿಶ್ರಮದಿಂದ ಶಾಲೆಯು ಪ್ರಗತಿ ಹೊಂದಿದೆ ಎಂದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರೇವತಿ ಪಾಟೀಲ ವಹಿಸಿದ್ದರು.ಡಿ.ಎಸ್.ಗುಡಿಮನಿ, ರಮೇಶ ಶಿವಕ್ಕನವರ, ಶೋಭಾ ಕಾನಡೆ, ಅಶ್ವಿನಿ ಹೊನ್ನೋಲೆ, ಆಯ್.ಎಸ್.ಪಾಟೀಲ, ಜೆಡ್.ಆರ್.ಮುಲ್ಲಾ, ದಾದಾ ಪಾಟೀಲ, ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಫೋಟೊ: 16 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಸುಟ್ಟಟ್ಟಿಯ ಉನ್ನತಿಕರಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯರು ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.