ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಬಹಳ ಅತ್ಯವಶ್ಯಕ:ಪ್ರೊ: ನಾಗನ್ನವರ.

ಲೋಕದರ್ಶನ ವರದಿ

ಮುಧೋಳ 8: 19 ಮತ್ತು 20ನೇ ಶತಮಾನದ ಬ್ರಿಟೀಷ ಇಂಗ್ಲೀಷ ಸಾಹಿತ್ಯದ ಹಿನ್ನಲೆ ಮತ್ತು ವಿಮರ್ಶನಾ ಸಿದ್ದಾಂತಗಳ ಕುರಿತು ಇಂದಿನ ವಿದ್ಯಾಥರ್ಿಗಳು ತಿಳಿದು ಕೊಳ್ಳುವುದು ತೀರಾ ಅವಶ್ಯಕತೆ ಇದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ ವಿಭಾಗದ ಚೇರಮನ್ ಪ್ರೊ.ವ್ಹಿ.ಪಿ.ನಾಗನ್ನವರ ಹೇಳಿದರು.

   ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಇಂಗ್ಲೀಷ ಸ್ನಾತಕೋತ್ತರ ವಿಭಾಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಇಂಗ್ಲೀಷ ಸಾಹಿತ್ಯ ವಿಶಾಲವಾಗಿದ್ದು ಪ್ರತಿ ಹಂತದಲ್ಲು ಇಂಗ್ಲೀಷ ಸಾಹಿತ್ಯ ಬದಲಾವಣೆ ಕುರಿತು ವಿದ್ಯಾಥರ್ಿಗಳಿಗೆ ಮಾಹಿತಿ ನೀಡಬೇಕಾಗಿರುವುದು ಅತೀ ಅನಿವಾರ್ಯ.ತಾವು ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದು ತಮಗೆ ಖುಷಿ ತಂದಿದೆ ಎಂದರು.

      ಮೇಘಾಲಯ ರಾಜ್ಯದ ತುರಾ ನಾರ್ಥ್ ಇಸ್ಟ್ ಹಿಲ್ಲ್ ವಿಶ್ವವಿದ್ಯಾಲಯದ ಇಂಗ್ಲೀಷ ವಿಭಾಗದ ಪ್ರೊ.ದ್ವಿಜನ್ ಶಮರ್ಾ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಇಂಗ್ಲೀಷ ಸಾಹಿತ್ಯ ಕುರಿತು ಎಷ್ಟು ಅಧ್ಯಯನ ಮಾಡಿದರೂ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾಥರ್ಿಗಳು ಇಂಗ್ಲೀಷ ಭಾಷೆಯ ಉಗಮ, ವಿಕಾಸ, ವಿಸ್ತಾರವನ್ನು ತಿಳಿದುಕೊಳ್ಳಬೇಕಾದರೆ ಬೇರೆ ರಾಷ್ಟ್ರದ ಭಾಷೆಗಳನ್ನು ತಿಳಿದುಕೊಂಡಿರಬೇಕು. ಕಾರಣ ಇಂಗ್ಲೀಷ ಭಾಷೆ ಮತ್ತು ಸಾಹಿತ್ಯ ಕುರಿತು ನಿರಂತರ ಅಧ್ಯಯನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತಾವುಗಳು ಕಾರ್ಯಪ್ರವೃತ್ತರಾಗಬೇಕೆಂದು ಹೇಳಿ ವಿದ್ಯಾಥರ್ಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. 

    ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ಇಂಗ್ಲೀಷ ಸ್ನಾತಕೊತ್ತರ ವಿಭಾಗದ ವಿದ್ಯಾರ್ಥಿ ಗಳು ವಿಶ್ವವಿದ್ಯಾ ಲಯಕ್ಕೆ ಈಗಾಗಲೇ ರ್ಯಾಂಕ್ ಪಡೆದಿರುತ್ತಾರೆ. ಅನುಭವಿ ಉಪನ್ಯಾಸಕರನ್ನು ಹೊಂದಿರುವ ಇಂಗ್ಲೀಷ ವಿಭಾಗವು ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಲಿಸಿದರೂ ಕಡಿಮೆ ಇಲ್ಲ ಎಂದು ಹೇಳಿದರು.

     ಇಂಗ್ಲೀಷ ವಿಭಾಗದ ಸಂಯೋಜಕ ಪ್ರೊ.ಪಿ.ಬಿ.ಬಡಿಗೇರ ಅತಿಥಿಗಳನ್ನು ಸ್ವಾಗತಿಸಿ,ಪರಿಚಯಿಸಿದರು. ವಿದ್ಯಾರ್ಥಿ  ಡಿ.ಕೆ.ಅಮರಿ,ಜ್ಯೋತಿ ಬಿರಾದಾರ, ಹೇಮಲತಾ ಬಾಳನ್ನವರ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲೀಷ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಚ್.ಜೋಗಿ ವಂದಿಸಿದರು.