ವಿದ್ಯಾಥರ್ಿಗಳು ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ಗೆ ಭೇಟಿ

ಲೋಕದರ್ಶನ ವರದಿ

ಶಿಗ್ಗಾವಿ26: ರಾಣೆಬೆನ್ನೂರಿನ ಪರಿಣಿತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿಗಳು ತಮ್ಮ ಶಿಕ್ಷಕರೊಂದಿಗೆ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್ಗೆ ಭೇಟಿ ನೀಡಿ ಕಲೆ ಮತ್ತು ಸಂಸ್ಕೃತಿಯ ಪರಿಚಯ ಪಡೆದು ಸಂಭ್ರಮಿಸಿದರು.

       ಗಾರ್ಡನ್ನ ಪ್ರವೇಶದ್ವಾರದಲ್ಲಿನ ರಾಜ್ಕುಮಾರ್ ಸರ್ಕಲ್ ವೀಕ್ಷಿಸುತ್ತಿದ್ದಾಗ, ಅವರಕಣ್ಣು ಮೊದಲು ಬಿದ್ದದ್ದು ಅಣ್ಣಾವ್ರ 'ಆಕಸ್ಮಿಕ' ಚಿತ್ರದ ಶಿಲ್ಪದ ಮೇಲೆ. ನೋಡ್ರೋ ! ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡಿನ ದೃಶ್ಯ ಎಂದು ತಮ್ಮೊಳಗೆ ಸಂಭ್ರಮದಿಂದ ಚಚರ್ಿಸುತ್ತಿದ್ದುದು ಕಂಡು ಬಂತು. ಜತೆಗಿದ್ದ ಶಿಕ್ಷಕರು ತದ್ರೂಪ ರಾಜಣ್ಣನಂತಿರುವ ಶಿಲ್ಪಗಳನ್ನು ನೋಡಿ ಚಕಿತರಾದರು. ಗ್ರಾಮ ಹಾಗೂ ಉತ್ತರ ಕನರ್ಾಟಕ ಹಿಂದಿನ ಗ್ರಾಮ ಸಂಸ್ಕೃತಿಯ ಗ್ಯಾಲರಿಗಳು ತಮ್ಮ ಬಾಲ್ಯಾವಸ್ಥೆಯನ್ನು ನೆನಪಿಸಿದವು. ಮಕ್ಕಳು ಇದೇನ್ ಸರ್ !, ಇದೇನ್ ಸರ್! 

  ಎಂದು ಶಿಕ್ಷಕರಿಗೆ ಪ್ರಶ್ನೆಗಳ ಸುರಿಮಳೆ ಗೈಯಲು ಪ್ರಾರಂಭಿಸಿದರು ಎಂದು ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಹೇಳಿದರು.

  ಇಂದಿನ ಮಕ್ಕಳಿಗೆ ಹಿಂದಿನ ಗ್ರಾಮೀಣ ಕಲೆ, ಸಂಸ್ಕೃತಿ ಹಾಗೂ ಬದುಕಿನ ಪರಿಚಯ ಮಾಡಿಸಬೇಕೆಂದರೆ ಮಕ್ಕಳೊಂದಿಗೆ ಶಿಕ್ಷಕರು ಒಮ್ಮೆ ಉತ್ಸವ ರಾಕ್ ಗಾರ್ಡನ್ಗೆ ಭೇಟಿ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇಂಡಿಯನ್ ಗಾರ್ಡನ್ನಲ್ಲಿನ ಸಾಹಸಮಯ ಆಟಗಳು, ನೀರಾಟ, ಎತ್ತಿನ ಗಾಡಿ-ಟಾಂಗಾ ಸವಾರಿ, ದೋಣಿ ವಿಹಾರ,  ಮಳೆ ಸ್ನಾನಗಳು ವಿದ್ಯಾಥರ್ಿಗಳನ್ನು ಭರಪೂರ ರಂಜಿಸಿದವು ಎಂದು ಸಹ ಶಿಕ್ಷಕರು ನುಡಿದರು.

    ಉತ್ಸವ ರಾಕ್ ಗಾರ್ಡನ್ ನಿಜವಾಗಿಯೂ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ. ಜಾನಪದ ರಂಗಮಂದಿರವಂತೂ ನಮ್ಮ ನಾಡು,ನುಡಿ ಸಂಸ್ಕೃತಿಯ ಮೆರಗೂ ಹೆಚ್ಚಿಸಿದೆೆ ಎಂದು ವಿದ್ಯಾಥರ್ಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

        ಗಾರ್ಡನ್ನ ಪ್ರತಿಯೊಂದು ಶಿಲ್ಪಗಳು ನಮ್ಮನ್ನು ಮಾತನಾಡಿಸಿ ಮುಂದೆ ಹೋಗಿ ಎಂದು ಪ್ರವಾಸಿಗರಿಗೆ ಹೇಳುತ್ತಿರುವಂತೆ  ಭಾಸ ಆಗುತ್ತದೆ. ಗ್ರಾಮೀಣ ಸಾಮ್ರಾಜ್ಯದ ಪರಿಚಯದೊಂದಿಗೆ ಗ್ರಾಮೀಣರ ವೃತ್ತಿಗಳ ಬಗ್ಗೆಯೂ ಶಿಲ್ಪಗಳ ಮೂಲಕ ಅದ್ಭುತವಾಗಿ ಗಾರ್ಡನ್ನಲ್ಲಿ ತೋರಿಸಲಾಗಿದ್ದು ವಿದ್ಯಾಥರ್ಿಗಳಿಗೆ ಹಾಗೂ ಶಿಕ್ಷಕರಿಗೆ ಉಪಯುಕ್ತಕಾರಿ ಆಗಿದೆ ಎಂದು ತಂಡದೊಂದಿಗಿದ್ದ ಸಹ ಶಿಕ್ಷಕರು ವಿವರಿಸಿದರು.