ತಂದೆ-ತಾಯಿಗಳನ್ನು ಗೌರವಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ: ಎ.ಬಿ.
ಸಂಕೇಶ್ವರ 20 : ಎಂ.ಬಿ. ಘಸಿ ಇಂದಿನ ಯುವಪಿಳಿಗೆ ಹಿಂದಿನ ಇತಿಹಾಸವನ್ನು ಮರೆತು ತಂದೆ-ತಾಯಿಗಳನ್ನು ಸ್ಮರಿಸಿ ಗುರುವೃಂದಕ್ಕೆ ಗೌರವಿಸಬೇಕೆಂದು ಕಾಯಕಯೋಗಿ, ಸಹಕಾರ ಮಹರ್ಷಿ ಶಿಕ್ಷಣ ಶಿಲ್ಪಿ ಲಿಂ. ಶ್ರೀ. ಬಸಗೌಡ ಅ. ಪಾಟೀಲರ 6 ನೇ ಪುಣ್ಯಸ್ಮರಣೆಯ ಸಮಾರಂಭದಲ್ಲಿ ಶ್ರೀ. ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘ ಹಾಗೂ ಜಗದ್ಗುರು ದುರದುಂಡೀಶ್ವರ ಶಿಕ್ಷಣ ಸಂಘ ಸಂಕೇಶ್ವರ ನಿಡಸೋಶಿ ಕಾಲೇಜಿನ ಆವರಣದಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲರು ಹಾಗೂ ಅಧ್ಯಕ್ಷರು ಶ್ರೀ. ದು.ವಿ.ಸಂ. ಸಂಘ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪ ಪ್ರಜ್ವಲಗೊಳಿಸಿ ವೇದಿಕೆಯ ಮೇಲೆ ಅಧ್ಯಕ್ಷ ಸ್ಥಾನವಹಿಸಿ ಮಾತನಾಡುತ್ತಿದ್ದರು ಮುಂದುವರೆದು ಮಾತನಾಡುತ್ತಾ ಸೃಷ್ಠಿಕರ್ತ ಭೂಮಿ ಗಾಳಿ ಪೂಜೆ ಭಾವದಿಂದ ಗುರುಹಿರಿಯರನ್ನು ಪೂಜಿಸಬೇಕೆಂದು ಎ.ಬಿ. ಪಾಟೀಲರು ವಿದ್ಯಾರ್ಥಿಗಳಿಗೆ ಕರೆ ನೀಡಿದಲ್ಲದೇ ಎಸ್.ಡಿ.ವ್ಹಿ.ಎಸ್. ಸಂಘದ ಅಧಿಕಾರವಹಿಸಿಕೊಂಡ ನಂತರ ತಾವು 15 ವಿವಿಧ ಶಿಕ್ಷಣ ಕೋರ್ಸಗಳನ್ನು ಆರಂಭಿಸಿದೆಂದು ಹೇಳಿದರು ತಮ್ಮ ತಂದೆ ದಿ. ಬಸಗೌಡಾ ಅ. ಪಾಟೀಲರು ದಿ. ಅಪ್ಪಣಗೌಡಾ ಪಾಟೀಲರ ಅಪ್ಪಟ ಅನುಯಾಯಿಗಳು ಆಗಿದ್ದರು ಶೈಕ್ಷಣಿಕ ರಂಗ ಮತ್ತು ಸಹಕಾರಿ ರಂಗಗಳನ್ನು ಬೆಳೆಸಿ ಉತ್ತುಂಗ ಮಟ್ಟದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳುತ್ತಾ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಶ್ರೀಮತಿ. ಶಾರವ್ವಾ ದರೋಜಿ, ಚಿಕಾಲಗುಡ್ಡ, ಶ್ರಮಜೀವಿ ಫೌಂಡೇಶನ ಅಧ್ಯಕ್ಷರು ಇವರು ಕವಂದಿಗಳನ್ನು ತಯಾರಿಸಿ ವಿದೇಶಕ್ಕೆ ಮಾರಾಟ ಮಾಡುತ್ತಿದ್ದರು ಮತ್ತು ಸೀರೆಯ ಮೇಲೆ ಕಲೆಯನ್ನು ತೆಗೆದು ಮಾರಾಟ ಮಾಡುತ್ತಿದ್ದರು ಈ ಬಡಮಹಿಳೆ ಪ್ರತಿಯೊಬ್ಬ ಹೆಣ್ಣು ಮಗಳು ಸ್ವಾವಲಂಬಿ ಜೀವನ ನಡೆಸಬೇಕೆಂದು ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಇವರ ಕಾಯಕದ ಬಗ್ಗೆ ತಮಗೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಏಷಿಯಾ ಖಂಡದಲ್ಲಿ ಹೆಸರು ವಾಸಿಯಾಗಲು ದಿ. ಅಪ್ಪಣ್ಣಗೌಡಾ ಪಾಟೀಲರು ಮತ್ತು ದಿ. ಬಸಗೌಡಾ ಪಾಟೀಲರು ಸರ್ವಸ್ವವನ್ನು ತ್ಯಾಗ ಮಾಡಿದ ದ್ಯೋತಕವಾಗಿ ಇಂದು ಕಾರ್ಖಾನೆಯು ಹೆಮ್ಮರವಾಗಿ ರೈತರಿಗೆ ಕಾಮಧೇನು ಕಲ್ಪವೃಕ್ಷವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಪುಣ್ಯದ ಅಲೆಯಲ್ಲಿ ದುರದುಂಡೀಶ್ವರ ಶಿಕ್ಷಣ ಸಂಘ ನಿಡಸೋಶಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು ಎಲ್ಲ ದಾನಗಳಕ್ಕಿಂತ ವಿದ್ಯೆಯೇ ಶ್ರೇಷ್ಟ ದಾನವೆಂದು ಮನಗೊಂಡ ಅಪ್ಪಟ ಗಾಂಧಿ ತತ್ವವಾದಿ ಸರಳ ಸಜ್ಜನಿಕೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಹಕಾರಿ ರಂಗದ ಭೀಷ್ಮ ದಿ. ಅಪ್ಪಣಗೌಡಾ ಪಾಟೀಲರು ಮತ್ತು ಸಹಕಾರಿ ಮಹರ್ಷಿ ದಿ. ಬಸಗೌಡಾ ಪಾಟಿಲರು ಅವರು ಅವಳಿ ದೇವತೆಗಳೆಂದು ಕುವೆಂಪು ಪ್ರಶಸ್ತಿ ಪುರಸ್ಕೃತರಾದ ಡಾ: ಗುರುಪಾದ ಮರಿಗುದ್ದಿಯವರು ಬಸಗೌಡಾ ಪಾಟೀಲರ ಪುಣ್ಯತಿಥಿ ನಿಮಿತ್ಯ ಮಾತನಾಡುತ್ತಿದ್ದರು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಶ್ರೀಮತಿ. ಶಾರವ್ವಾ ದರೋಜಿ ಚಿಕಾಲಗುಡ್ಡ ಶ್ರಮಜೀವಿ ಫೌಂಡೇಶನ ಅಧ್ಯಕ್ಷರಾದ ಇವರು ಈ ಪುಣ್ಯ ಸಮಾರಂಭದಲ್ಲಿ ಭಾಗವಹಿಸಿ ಬಸಗೌಡಾ ಪಾಟೀಲರು ಬಲು ಅಪರೂಪದ ವ್ಯಕ್ತಿ ವಿದ್ಯಾಕಾಶಿ ಮಾಡಿದ ಬಸಗೌಡಾ ಪಾಟೀಲರನ್ನು ಎಲ್ಲರೂ ನೆನಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಇದರಂತೆಯೆ ಶಿವನಾಯಕ ನಾಯಿಕ ಇವರು ಸಹ ಸಮಾರಂಭದಲ್ಲಿ ಭಾಗವಹಿಸಿ ಬಸಗೌಡಾ ಪಾಟೀಲರನ್ನು ಏಕೆ ಸ್ಮರಿಸಬೇಕು ಮಾಡಿದ ಶೈಕ್ಷಣಿಕ ಸಂಸ್ಥೆಗಳು ಹುಟ್ಟು ಹಾಕಿ ಈ ಭಾಗದ ಬಡರೈತರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲಿಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಈಗ ಜನತೆ ಉಪಕಾರಗಳನ್ನು ಯಾರು ನೆನಪಿಸಿಕೊಳ್ಳುತ್ತಿಲ್ಲವೆಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಹಿರಿಯ ನಿರ್ದೇಶಕ ಶಿವನಾಯಕ ನಾಯಿಕ ಇವರು ವಿಶಾದ ವ್ಯಕ್ತ ಪಡಿಸಿದರು ಈ ಸಂದರ್ಭದಲ್ಲಿ ಎ.ಬಿ.ಪಾಟೀಲರು ಎಲ್ಲರನ್ನು ಸತ್ಕರಿಸಿದರು ವೇದಿಕೆಯ ಮೇಲೆ ಕಲಗೌಡಾ ನಿಂಗನೂರಿ ಆರ್.ಬಿ. ಪಾಟೀಲ ನಿರಂಜನ ಪಾಟೀಲ ಬಿ.ಜೆ. ಪಾಟೀಲ, ಬಾಳಪ್ಪಾ ಅಕ್ಕೋಳಿ ಎಸ್.ಎನ್. ಪಾಟೀಲ ಬಿ.ಎಸ್. ಪೂಜಾರಿ ಜಿ.ಸಿ. ಕೋಟಗಿ ಅಣ್ಣಾಗೌಡಾ ಪಾಟೀಲ (ಕೇಸ್ತಿ) ಪ್ರಕಾಶ ಇಟೇಕರ ಕಾಶೀನಾಥ ಶಿರಕೋಳಿ ರಾಯಪ್ಪಾ ಯಶವಂತ ವಿಶ್ವನಾಥ ತೋಡಕರ ಎಲ್.ಬಿ. ಪಾಟೀಲ ಜಯಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು ಆರಂಭದಲ್ಲಿ ದಿ. ಬಸಗೌಡಾ ಪಾಟೀಲ ಇವರ ಅಮ್ಮಿನಭಾವಿಯ ಅವರ ಸ್ವಗೃಹದ ಮುಂಭಾಗದಲ್ಲಿ ಅವರ ಸಮಾಧಿಗೆ ಪುತ್ರ ಮಾಜಿ ಸಚಿವ ಎ.ಬಿ. ಪಾಟೀಲರು ಹೂಮಾಲೆ ಹಾಕಿ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಹಿತೈಶಿಗಳು ಸಹ ಹೂಮಾಲೆಯನ್ನು ಹಾಕಿದರು ನಿಡಸೋಶಿ ಶಿಕ್ಷಣ ಸಂಘದ ಕಾರ್ಯದರ್ಶಿ ವಿರುಪಾಕ್ಷಿ ಚೌಗಲಾ ಇವರು ಸ್ವಾಗತಿಸಿದರು ಎ.ಬಿ. ಗುರವ ಶಿಕ್ಷಕರಿಂದ ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.