ವಿದ್ಯಾಥರ್ಿಗಳು ಸಮಯವ್ಯರ್ಥ ಮಾಡಬಾರದು: ನಿಪ್ಪಾಣಿಕರ

ಲೋಕದರ್ಶನ ವರದಿ

ಬೆಳಗಾವಿ 06:  ಭಾರತೀಯ ಆಡಳಿತ ಸೇವೆ ಹಾಗೂ ಭಾರತೀಯ ಪೋಲಿಸ್ ಸೇವೆ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾಥರ್ಿಗಳು ಸರಿಯಾಗಿ ತಯಾರಿ ನಡೆಸಬೇಕು ಸಮಯವನ್ನು ವ್ಯರ್ಥ ಮಾಡಬಾರದೆಂದು ಮೊದಲ ಪ್ರಯತ್ನದಲ್ಲೆ ಆಯ್ಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 563 ನೇ ರ್ಯಾಂಕ್ ಪಡೆದ ಬೆಳಗಾವಿಯ ನಿಖಿಲ್ ನಿಪ್ಪಾಣಿಕರ ನುಡಿದರು.

ಅವರು ಮಂಗಳವಾರ ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶ್ವಸ್ವಿಯಾಗಲು ಹೇಗೆ ತಯಾರಿ ನಡೆಸಬೇಕೆಂಬ ಕಾಯರ್ಾಗಾರದಲ್ಲಿ ಮಾತನಾಡಿದರು.

ಆಯ್.ಎ.ಎಸ್ ಹಾಗೂ ಆಯ್.ಪಿ.ಎಸ್ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸ, ಬದ್ಧತೆ, ನಿಖರತೆ, ಸ್ಥಿರತೆ ಇರಬೇಕು ಆಗ ಮಾತ್ರ ಪರೀಕ್ಷೆಯಲ್ಲಿ ಸಫಲಾರಾಗಬಹುದೆಂದು ತಿಳಿಸಿದರು. ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ತಯಾರಿ ನಡೆಸುವವರು 6ನೇ ತರಗತಿಯಿಂದ 10ನೇ ತರಗತಿಯ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು ಎಂದು ತಮ್ಮ ಅನುಭವಗಳನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಂಡರು. 

ಪರೀಕ್ಷೆಗಾಗಿ ವಿದ್ಯಾಥರ್ಿಗಳು ಕೆಲವು ಕಠಿಣ ನಿಧರ್ಾರ ತಳೆಯಬೇಕು. ಆಧುನಿಕ ತಂತ್ರಜ್ಞಾನವನ್ನು ಸರಿಯಾಗಿ ಬಳಸಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯಬಾರದು. ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತಯಾರಿ ನಡೆಸುವವರಿಗೆ ಇಂಗ್ಲೀಷ ಭಾಷೆಯಲ್ಲಿ ಹೆಚ್ಚಾಗಿ ಅಧ್ಯಯನ ಸಾಮಗ್ರಿಗಳು ದೊರೆಯುವುದರಿಂದ ಇಂಗ್ಲೀಷ ಭಾಷೆಯನ್ನು ವಿದ್ಯಾಥರ್ಿಗಳು ಕಲಿಯಬೇಕೆಂದರು ಕಠಿಣ ಪರಿಶ್ರಮದ ಅಧ್ಯಯನದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದರು. ನಂತರ ವಿದ್ಯಾಥರ್ಿಗಳೊಂದಿಗೆ ಸಂವಾದ ನಡೆಸಿದರು.

ಬಿ.ಎ ಮತ್ತು ಬಿ.ಕಾಂ ವಿಭಾಗದ 100 ವಿದ್ಯಾಥರ್ಿಗಳು ಕಾಯರ್ಾಗಾರದಲ್ಲಿ ಭಾಗವಹಿಸಿದ್ದರು. ಕೆ.ಎಲ್.ಇ ಸಂಸ್ಥೆಯ ಪ್ಲೆಸಮೆಂಟ ಆಫಿಸರ್ ಸಮೀರ ಮಜಳಿ ಸ್ವಾಗತಿಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸಿದ್ದನಗೌಡ ಪಾಟೀಲ ಉಪಸ್ಥಿತರಿದ್ದರು.