ಯರಗಟ್ಟಿ 03: ಸರಿಯಾಗಿ ಬಸ್ ಇಲ್ಲದಿರುವುದರಿಂದ ಯರಗಣವಿ, ಕಡಬಿ, ಮಾಡಮಗೇರಿ, ಕೋ.ಶಿವಾಪೂರ, ಗೊರಗುದ್ದಿ ಗ್ರಾಮಗಳ ವಿದ್ಯಾಥರ್ಿಗಳು ಹಾಗೂ ಗ್ರಾಮಸ್ಥರು ಸ್ಥಳೀಯ ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ವಿದ್ಯಾಥರ್ಿಗಳು ಮಾತನಾಡುತ್ತಾ ಹೆಚ್ಚಿನ ವ್ಯಾಸಂಗಕ್ಕಾಗಿ ಯರಗಟ್ಟಿಯಲ್ಲಿರುವ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಈ ಗ್ರಾಮಗಳಿಂದ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಹತ್ತಕ್ಕೂ ಹೆಚ್ಚಿನ ಹಳ್ಳಿಗಳಿಂದ ಸುಮಾರು ಎರಡನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಮತ್ತು ಸಾರ್ವಜನಿಕರು ಪ್ರಯಾಣಿಸುತ್ತಿದ್ದು ಮುಂಜಾನೆ ಕಾಲೇಜು ಸಮಯಕ್ಕೆ ಒಂದೇ ಒಂದು ಬಸ್ ಬರುವುದರಿಂದ ಸ್ಥಳಾವಕಾಶ ಇಲ್ಲದಿರುವುದರಿಂದ ಎಷ್ಟೋ ಬಾರಿ ಕಾಲೇಜಿಗೆ ಗೈರಾಗುವ ಪರಿಸ್ಥಿತಿ ಉಂಟಾಗುತ್ತಿದೆ. ಇದರಿಂದ ಉತ್ತಮ ಶಿಕ್ಷಣ ಪಡೆಯುವ ಮಕ್ಕಳ ಹುಮ್ಮಸ್ಸಿಗೆ, ಕನಸಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾಥರ್ಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಬಸ್ ನಿಲ್ದಾಣದಿಂದ ಎಸ್.ಬಿ.ಜಕಾತಿ ಸರಕಾರಿ ಪದವಿ ಪೂರ್ವ ಕಾಲೇಜು ಎರಡು ಕೀ.ಮಿ ಮತ್ತು ಸಿ.ಎಮ್.ಮಾಮನಿ ಸರಕಾರಿ ಪದವಿ ಕಾಲೇಜು ಐದು ಕೀ.ಮಿ ಅಂತರವಿದ್ದು ನಿಲ್ದಾಣದ ಅಧಿಕಾರಿಗಳು ಬಸ್ ಚಾಲಕರಿಗೆ ಮತ್ತು ನಿವರ್ಾಹಕರಿಗೆ ಕಾಲೇಜುಗಳಿಗೆ ನಿಲುಗಡೆ ಮಾಡಲು ಆದೇಶ ನೀಡಿದರೂ ಸರಿಯಾಗಿ ಬಸ್ ನಿಲುಗಡೆ ಮಾಡುತ್ತಿಲ್ಲ. ಇಲ್ಲಿ ಒರ್ವ ಕೆಎಸ್ಆರ್ಟಿಸಿ ಸಿಬ್ಬಂದಿ ನೇಮಿಸಿ ಬಸ್ ನಿಲುಗಡೆ ಮಾಡುವಂತಾಗಬೇಕು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸಿದರು.