ವಿದ್ಯಾಥರ್ಿ ಜೀವನ ಅತ್ಯಮೂಲ್ಯ: ಎಸ್.ಡಿ.ಗಾಂಜಿ

ಲೋಕದರ್ಶನ ವರದಿ

ಮುದ್ದೇಬಿಹಾಳ 1:ವಿದ್ಯಾಥರ್ಿ ಜೀವನ ಅತ್ಯಮೂಲ್ಯವಾದದ್ದು ಅದನ್ನು ಸಾರ್ಥಕಗೊಳಿಸಿಕೊಳ್ಳಲು ಜ್ಞಾನದ ಸದ್ಭಳಕೆ ಮಾಡಿಕೊಂಡು ಜಾಣರಾಗಿ ಸಾಧನೆ ಮಾಡಬೇಕು ಎಂದು ಬಿಇಓ ಎಸ್.ಡಿ.ಗಾಂಜಿ ಹೇಳಿದ್ದಾರೆ.

ಇಲ್ಲಿನ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುದ್ಧ ಮಹಾಸೇವಾ ಸಂಘದಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾವಂತ ಎಸ್ಸಿ ಎಸ್ಟಿ ವಿದ್ಯಾಥರ್ಿಗಳಿಗೆ ಉಚಿತ ಡಿಕ್ಶನರಿ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜ್ಞಾನಕ್ಕೆ ಅಂತ್ಯ, ಮಿತಿ ಇಲ್ಲ. ಹೆಚ್ಚು ಓದುವುದನ್ನು ರೂಢಿಸಿಕೊಂಡಲ್ಲಿ ಆ ಜ್ಞಾನ ನಮ್ಮ ತಲೆಯಲ್ಲಿ ಸಂಗ್ರಹಗೊಳ್ಳುತ್ತದೆ. ಹೀಗೆ ಸಂಗ್ರಹಗೊಳ್ಳುವ ಜ್ಞಾನವನ್ನು ಸಮಯ ಸಂದರ್ಭಕ್ಕನುಸಾರವಾಗಿ ಬಳಕೆ ಮಾಡಿಕೊಳ್ಳುವುದನ್ನು ವಿದ್ಯಾಥರ್ಿಗಳು ತಿಳಿದಿರಬೇಕು. ಜ್ಞಾನ ಸಂಪಾದನೆಯತ್ತ ಹೆಚ್ಚು ಆಸಕ್ತಿ ವಹಿಸಬೇಕು. ಜ್ಞಾನ ಸಂಪತ್ತನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ನಡೆಯಬೇಕು ಎಂದು ಸಲಹೆ ನೀಡಿದರು.

ಸೇವಾ ಸಂಘದ ತಾಲೂಕು ಅಧ್ಯಕ್ಷ ಅಶೋಕ ಪಡೇಕನೂರ ಮಾತನಾಡಿ ಸಕರ್ಾರಿ ಶಾಲಾ ಕಾಲೇಜುಗಳಲ್ಲಿ ಬಡ ಕುಟುಂಬದಿಂದ ಬಂದ ವಿದ್ಯಾಥರ್ಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಇವರಿಗೆ ಭಾಷಾ ವಿಷಯದ ಮೇಲೆ ಹಿಡಿತ ಬರಬೇಕಾದರೆ ಡಿಕ್ಶನರಿ ಅವಶ್ಯ ಎನ್ನುವುದನ್ನು ಮನಗಂಡು ಈ ವಿನೂತನ ಕಾರ್ಯ ಹಮ್ಮಿಕೊಳ್ಳಬೇಕಾಯಿತು. ಡಿಕ್ಶನರಿಯನ್ನು ಸದ್ಭಳಕೆ ಮಾಡಿಕೊಂಡು ಜ್ಞಾನ ಸಂಪಾದನೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ.ಬೆಳಗಲ್ಲ, ಸಕರ್ಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್.ಅಂಗಡಿ ವೇದಿಕೆಯಲ್ಲಿದ್ದರು. ಇದೇ ವೇಳೆ ಎಸ್ಸಿ ಎಸ್ಟಿ ಸಮುದಾಯ ಪ್ರತಿನಿಧಿಸುವ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಡಿಕ್ಶನರಿ ವಿತರಿಸಲಾಯಿತು.