ಪ್ರಜಾ ಸರ್ಕಾರದ ಸಾಫಲ್ಯತೆಗೆ ಕಟಿಬದ್ಧರಾಗಿ: ಮಹಾತ್

ಲೋಕದರ್ಶನ ವರದಿ

ಮೂಡಲಗಿ 29:  'ದೇಶದ ಪ್ರತಿಯೊಬ್ಬ ಪ್ರಜೆಯು ತಮ್ಮ ಮತವನ್ನು ಯಾವದೇ ಪ್ರೇರಣೆ, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತಚಲಾಯಿಸಿದಾಗ ಮಾತ್ರ ಪ್ರಜಾ ಸಕರ್ಾರ ಸಾಪಲ್ಯತೆ ಹೊಂದಲು ಸಾಧ್ಯ ಎಂದು ತಹಶೀಲ್ದಾರ್ ಡಿ.ಜೆ. ಮಹಾತ್ ಹೇಳಿದರು. ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಾಕ್ಷರತಾ ಕ್ಲಬ್, ಸ್ವೀಪ್ ಹಾಗೂ ತಾಲ್ಲೂಕು ಆಡಳಿತ ಸಂಯುಕ್ತವಾಗಿ ಆಚರಿಸಿದ 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಮತದಾರರ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್ನ ಸಂಚಾಲಕ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಕುಮಾರ ಶಾಸ್ತ್ರೀಮಠ ಮಾತನಾಡಿ ಮತದಾನವು ದೇಶದ ಅಭಿವೃದ್ಧಿ ಮತ್ತು ಸಮೃದ್ಧಿ ಎರಡರ ಪ್ರತೀಕವಾಗಿದ್ದು, ಮತದಾನವು ಪವಿತ್ರ ಕಾರ್ಯವಾಗಿದೆ ಎಂದರು.ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರೀಮಠ ವಿದ್ಯಾಥರ್ಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ ವಿದ್ಯಾಥರ್ಿಗಳು ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ತಹಶೀಲ್ದಾರ್ರು ಮತದಾರರ ಹೊಸ ಮಾದರಿಯ ಗುರುತಿನ ಚೀಟಿಗಳನ್ನು ಸಾಂಕೇತಿಕವಾಗಿ ಇಬ್ಬರು ನಾಗರಿಕರಿಗೆ ವಿತರಿಸಿದರು.ಪ್ರೊ. ಎಸ್.ಜಿ. ನಾಯಿಕ, ಪ್ರೊ. ಎಸ್.ಡಿ. ಮಂಟೂರ, ಪ್ರೊ. ಎಸ್.ಬಿ. ಖೋತ, ಪ್ರೊ. ವಿ.ಎಸ್. ಹಂಪಣ್ಣವರ, ಡಾ. ಬಿ.ಸಿ. ಪಾಟೀಲ, ಪ್ರೊ. ಜಿ.ವಿ. ನಾಗರಾಜ, ಎ.ಎಸ್. ಮೀಸಿನಾಯಿಕ, ವೈ.ಎ. ಗದಾಡಿ ಇದ್ದರು. ಡಾ. ವಿ.ಆರ್. ದೇವರಡ್ಡಿ ಸ್ವಾಗತಿಸಿದರು, ಪ್ರೊ. ಸಂಗಮೇಶ ಗುಜಗೊಂಡ ನಿರೂಪಿಸಿದರು, ಪ್ರೊ. ಜಿ. ಸಿದ್ರಾಮಡ್ಡಿ ವಂದಿಸಿದರು.

'ಚುನಾವಣೆಯಲ್ಲಿ ಮತದಾರರ ಪಾತ್ರ ವಿಷಯ ಕುರಿತು ಏರ್ಪಡಿಸಿದ್ದ ಭಾಷಣ ಸ್ಪಧರ್ೆಯಲ್ಲಿ ವಿಜೇತರಾದ ಪ್ರಥಮ ಬಹುಮಾನ ಗಂಗೂಬಾಯಿ ಚಿಮ್ಮಡ, ದ್ವಿತೀಯ ಬಹುಮಾನ ಸದಾಶಿವ ಹನಮಪ್ಪಗೋಳ, ತೃತೀಯ ಬಹುಮಾನ ಬಾಳೇಶ ನಾಯಿಕ, ಸಮಾಧಾನಕರ ಬಹುಮಾನ ಐಶ್ವರ್ಯ ಮುಂಜೆ, ನಿರ್ಮಲಾ ಪಾಟೀಲಗೆ ಲಭಿಸಿದೆ.