ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟು ತೆರವು

ಲೋಕದರ್ಶನ ವರದಿ

ಮೂಡಲಗಿ 30: ಪಟ್ಟಣದ ಪ್ರಮುಖ ರಸ್ತೆಗಳಲ್ಲಿರುವ  ಅಂಗಡಿ ಮುಂಗಟ್ಟುಗಳು ಅಕ್ರಮಿಸಿಕೊಂಡಿದ್ದ ರಸ್ತೆಯ ಜಾಗವನ್ನು ಪುರಸಭೆಯ ಮತ್ತು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಗುರುವಾರ ಬೆಳ್ಳಂಬೆಳಗ್ಗೆ ಏಕಾಏಕಿ ಜೆಸಿಬಿ ಯಂತ್ರದ ಮೂಲಕ ತೆರವು ಕಾಯರ್ಾಚರಣೆ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿದರು.

   ಪಟ್ಟಣದ ಕಲ್ಮೇಶ್ವರ ವೃತ್ತದಿಂದ ಎಪಿಎಮ್ಸಿ ರಸ್ತೆ, ಮಾಕರ್ೆಟ್ ರಸ್ತೆಯಲ್ಲಿರುವ ಕಿರಾಣಿ ಅಂಗಡಿ, ಹೋಟೆಲ್, ಪಾನ್ಶಾಪ್, ಇನ್ನಿತರ ಅಂಗಡಿಗಳು ರಸ್ತೆ ಬದಿ ಜಾಗವನ್ನು ಅಕ್ರಮಿಸಿಕೊಂಡಿದ್ದರಿಂದ ಈ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಡ್ಡಿಯಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಈ ಕಾರಣಕ್ಕಾಗಿ ಪೊಲೀಸ್ ಇಲಾಖೆಯೂ ಪುರಸಭೆಯೊಂದಿಗೆ ಕಾರ್ಯಚರಣೆ ನಡೆಸಿ ಅಕ್ರಮಿಸದ ಜಾಗವನ್ನು ತೆರವುಗೊಳಿಸಿದರು. 

    ಈ ಸಂದರ್ಭದಲ್ಲಿ ಪಿ.ಎಸ್.ಐ ಮಲ್ಲಿಕಾಜರ್ುನ ಸಿಂಧೂರ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಕಿರಿಯ ಆರೋಗ್ಯ ನಿರೀಕ್ಷಕ ಪ್ರೀತಂ ಭೋವಿ, ಎಎಸ್ಐ ಎಸ್.ಎಫ್ ತಲ್ಲೂರ, ಪೊಲೀಸ್ ಸಿಬ್ಬಂದಿಗಳಾದ ಎನ್.ಎಸ್,ಒಡೆಯರ, ಎ.ಬಿ ಗೌಡರ ಉಪಸ್ಥಿತರಿದ್ದರು.