ಲೋಕದರ್ಶನ ವರದಿ
ಇಂಡಿ 01:ಸರಕಾರ ಗ್ರಾಮೀಣ ಪ್ರದೇಶಗಳ ಶೈಕ್ಷಣಿಕ ಮೂಲ ಸೌಲಭ್ಯಗಳ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದರಲ್ಲಿಯೂ ಜಿ.ಪಂ ವ್ಯಾಪ್ತಿಯಲ್ಲಿ ಇತರ ಅನುದಾನಗಳಿಗಿಂತಲೂ ಶಾಲಾ ಕಟ್ಟಡ, ಶೌಚಾಲಯ ಸೇರಿದಂತೆ ಇನ್ನಿತರ ಶೈಕ್ಷಣಿಕ ಮೂಲ ಸೌಲಭ್ಯಗಳಿಗೆ ನನ್ನ ಅಧಿಕಾರಾವಧಿಯಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗುವದೆಂದು ನೂತನ ಜಿ.ಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಭರವಸೆ ನೀಡಿದರು.
ತಾಲೂಕಿನ ಸಾತಲಗಾಂವ ಪಿ.ಆಯ್. ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಉದರ್ು ಪ್ರಾಥಮಿಕ ಶಾಲೆ ಹಾಗೂ ಗ್ರಾಮದ ವತಿಯಿಂದ ನೂತನ ಜಿ.ಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಎ.ಪಿ.ಎಂ.ಸಿ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ ಅವರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ರುಚಿಕಟ್ಟಾದ ಬಿಸಿಯೂಟ ಸೇವಿಸಿ ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತೇನೆ ಎಂದರು.
ಸನ್ಮಾನಿತ ಶಿವಯೋಗೆಪ್ಪ ಚನಗೊಂಡ ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಕೊಳ್ಳುವುದರ ಜೊತೆಗೆ ಸರಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ರೈತರಿಗೆ ಮುಟ್ಟಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಮುಂಚೆ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮದ ಮುಖಂಡ ಸಂಗಣ್ಣ ಹೊಸೂರ ಶಾಲಾ ಮಕ್ಕಳಿಗೆ ಶೌಚಾಲಯದ ಕೊರತೆಯಿದ್ದು, ಶೌಚಾಲಯ ಮಂಜೂರಿಸಲು ನೂತನ ಜಿ.ಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅವರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನೂತನ ಜಿ.ಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಶಿವಯೋಗೆಪ್ಪ ಚನಗೊಂಡ ಅವರಿಗೆ ಗ್ರಾ.ಪಂ ಅಧ್ಯಕ್ಷ ಸಂಗನಬಸವ ಜಂಗಮಶೆಟ್ಟಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್.ತಲ್ಲೊಳ್ಳಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಸಿ.ಯಂಕಂಚಿ ಶಾಲು ಹೊದಿಸಿ ಸನ್ಮಾನಿಸಿದರು. ಸಮಾರಂಭದ ಸಾನಿಧ್ಯ ಶಿವಾನಂದ ಮಠಪತಿ ವಹಿಸಿದ್ದರು. ನೇತೃತ್ವ ಗ್ರಾಮದ ಸಿದ್ದ ಸಂಸ್ಥಾನ ಮಠದ ಮದ್ದಾನಿ ಮಹಾರಾಜರು ವಹಿಸಿದ್ದರು. ಅಧ್ಯಕ್ಷತೆ ಗ್ರಾ.ಪಂ ಅಧ್ಯಕ್ಷ ಸಂಗನಬಸವ ಜಂಗಮಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ, ತಾ.ಪಂ.ಸದಸ್ಯ ಜೀತಪ್ಪ ಕಲ್ಯಾಣಿ, ಪಿ.ಕೆ.ಪಿ.ಎಸ್. ಅಧ್ಯಕ್ಷ ಶ್ರೀಶೈಲ ಮಸಳಿ, ಗೌಡಪ್ಪಗೌಡ ಪಾಟೀಲ, ಶಂಕರಗೌಡ ಬಿರಾದಾರ, ಹಣಮಂತ ಕೋರಳ್ಳಿ, ಸಿದ್ದರಾಮಗೌಡ ಪಾಟೀಲ, ರಾಜುಗೌಡ ಪಾಟೀಲ, ಶಿವಾನಂದ ನಂದಾಗೋಳ ಆಗಮಿಸಿದ್ದರು. ಎಸ್.ಎಸ್.ತೆಲ್ಲೊಳ್ಳಿ ಸ್ವಾಗತಿಸಿದರು, ಎಸ್.ಎಸ್.ಅರಳಗುಂಡಗಿ ನಿರೂಪಿಸಿದರು. ಎಮ್.ಎ.ಬಾಗವಾನ ವಂದಿಸಿದರು.