ಲೋಕದರ್ಶನ ವರದಿ
ಮಾಂಜರಿ 30: ವಿದ್ಯಾಥರ್ಿಗಳಿಗೆ ಮಾನವೀಯ ಮೌಲ್ಯಗಳ ಕುರಿತು, ಅತಿಯಾದ ಮೊಬೈಲ್ ಬಳಕೆಯ ನಿಷೇಧ, ಸಮಯ ಪಾಲನೆ, ಗುರು ಹಿರಿಯರಿಗೆ ಗೌರವ, ಸ್ಪಧರ್ಾತ್ಮಕ ಪರೀಕ್ಷೆಯ ತಯಾರಿ ಯಾವ ರೀತಿಯಾಗಿರಬೇಕು, ಸ್ವಯಂ ಸೇವಕರಾಗುವ ಗುಣ ಹಾಗೂ ಋಣಾತ್ಮಕ ಗುಣಗಳಿಂದ ದೂರ ಇರಬೇಕೆಂದು ಕಿವಿಮಾತು ಪ್ರೊ. ಉದಯಸಿಂಗ್ ರಜಪೂತ ಹೇಳಿದರು.
ಚಿಕ್ಕೋಡಿ ತಾಲುಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಸಂಸ್ಥೆಯ ಅಂಗಸಂಸ್ಥೆಯಾದ ಶಾರದಾದೇವಿ ಕೋರೆ ಪದವಿ ಪೂರ್ವ ಕಾಲೇಜು, ವಿದ್ಯಾಥರ್ಿಗಳ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಪಠ್ಯೇತತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಡಾ ಆರ್. ಡಿ. ಗಿಝರೆಯವರು ವಹಿಸಿಕೊಂಡಿದ್ದರು. ಆರಂಭದಲ್ಲಿ ಸಹನಾ ಚಲವಾದಿ ಪ್ರಾರ್ಥನಾಗೀತೆಯನ್ನು ಹಾಡಿದರು. ಕಾಲೇಜಿನ ಪ್ರಾಚಾರ್ಯ ಆರ್. ಸಿ ಪಾಟೀಲರವರು ಸ್ವಾಗತ ಕೋರಿದರು. ಪ್ರಾಸ್ತಾವಿಕ ಹಾಗೂ ವರದಿ ವಾಚನವನ್ನು ಡಾ. ಚಂದ್ರಕಾಂತ ಆರ್. ಬಿ.ಯವರು ಮಾಡಿದರು. ಸಂದೇಶ ವಾಚನವನ್ನು ಎಂ.ಎಂ. ಮೈಶಾಳೆಯವರು ಓದಿದರು. ಪಿ. ಎನ್. ತಳವಾರರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಸ್. ಕೆ. ಖೋತರವರು ಪುಷ್ಪಾರ್ಪಣೆಯ ನಿರೂಪಣೆಯನ್ನು ನಿರ್ವಹಿಸಿದರು. ವಾಯ್. ಬಿ. ಮಾಚಕನೂರರವರು ಬಹುಮಾನ ವಿತರಣೆಯ ಯಾದಿಯನ್ನು ಓದಿದರು. ಕು. ಭಾರತಿ ಪಿ. ಡೊಂಗರೆಯವರು ವಂದನೆಗೈದರು.
ಕಾರ್ಯಕ್ರಮದ ನಿರೂಪನೆಯನ್ನು ಕೆ.ಎಸ್. ಗುಡೋಡಗಿ ಹಾಗೂ ಕುಮಾರ ಎನ್. ಎಸ್. ಅಮಟೆಯವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಅದಲ್ಲದೆ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಆಗೂ ಕಾಲೇಜಿನ ಎಲ್ಲಾ ವಿದ್ಯಾಥರ್ಿ- ವಿದ್ಯಾಥರ್ಿನಿಯರು ಭಾಗವಹಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು.