ಮದ್ಲೂರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ಮದ್ಲೂರ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಬಿಜೆಪಿ

ಮುನವಳ್ಳಿ 01: ಕನಕದಾಸರು ಜಾತಿ ಬೇಧ ಅಳಿಸಲು ಹೋರಾಡಿದ ಸಂತನಾದರೆ, ಸಂಗೊಳ್ಳಿ ರಾಯಣ್ಣ ನಾಡಿನ ಉಳಿವಿಗೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಅಂಥ ಮಹಾತ್ಮರ ಒಗ್ಗಟ್ಟಾಗಿ ಆಚರಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರು ಸಂಗೊಳ್ಳಿ ರಾಯಣ್ಣನ ಗುಣಗಳನ್ನು ಮೈಗೂಡಿಸಿಕೊಂಡು ದೇಶದ ಒಗ್ಗಟ್ಟಿಗೆ ಹಾಗೂ ಉನ್ನತಿಗೆ ಶ್ರಮಿಸಬೇಕು. ನಮ್ಮ ದೇಶದ ಸಂಸ್ಕೃತಿ ಪರಂಪರೆ ಜಗತ್ತಿಗೆ ಮಾದರಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಸಮೀಪದ ಮದ್ಲೂರ ಗ್ರಾಮದಲ್ಲಿ ನ. 30 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೂತನ ಪ್ರತಿಮೆ ಅನಾವರಣಗೊಳಿಸಿ ಹಾಗೂ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆನಂದ ಮಾಮನಿ ಕನಕದಾಸರು ತಮ್ಮ ಪದಗಳ ಮೂಲಕ ಸಮಾಜದ ಡೊಂಕು ತಿದ್ದುವಲ್ಲಿ ಶ್ರಮಿಸಿದ್ದಾರೆ. ಕೇವಲ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸುವುದು ಮುಖ್ಯವಲ್ಲ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ ಅಂದರು.

ಸಾನಿಧ್ಯ ವಹಿಸಿದ್ದ ಧಾರವಾಡ ಮನಸೂರಮಠದ ಬಸವರಾಜ ದೇವರು ಹಾಗೂ ಸವದತ್ತಿಯ ಶಿವಾನಂದ ಶ್ರೀಗಳು ಆಶೀರ್ವಚನ ನೀಡಿದರು.

ಗ್ರಾಮದಲ್ಲಿ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಕುಂಭಮೇಳ, ವಾದ್ಯವೃಂದದೊಂದಿಗೆ ಅದ್ದೂರಿಯಾಗಿ ಜರುಗಿತು.

್ಲ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತ ದೇಸಾಯಿ, ಫಕೀರಪ್ಪ ಹದ್ದನ್ನವರ, ಎಂ.ಎಸ್. ಹಿರೇಕುಂಬಿ, ಗುರುನಾಥ ಗಂಗಲ, ಎಸ್.ಎಸ್.ಮುಗಳಿ, ಜಿ.ಜಿ.ಪಾಟೀಲ, ಪುಂಡಲೀಕ ಮೇಟಿ, ರುದ್ರಪ್ಪ ರೇವಣ್ಣವರ, ಪ್ರಕಾಶ ನರಿ, ಮಾರುತಿ ಕುರಿ, ಪಡೆಪ್ಪ ನರಿ, ಬೀರಪ್ಪ ಕುರಿ, ಬಾಬುಸಾಬ ಪರಾಶಿ, ಪಾಂಡಪ್ಪ ಕಲಕುಟ್ರಿ, ಬಸವರಾಜ ಮನಿಕಟ್ಟಿ, ಫಕೀರಪ್ಪ ಕುರಿ, ಷಡಕ್ಷರಿ ಮುರಗೋಡ, ಕಾಶವ್ವ ಗೌಡರ, ಮಲ್ಲವ್ವ ಕಲ್ಲೋಳ್ಳಿ, ಕರೆವ್ವ ಗೌಡರ, ನಿರ್ಮಲಾ ಕಡಕೋಳ, ಎಂ. ಬಿ. ಕಲಕುಟ್ರಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 

ಸ್ವಾಗತವನ್ನು ಅಶೋಕ ಕಮತಗಿ ನಿರೂಪಣೆಯನ್ನು ಅಶೋಕ ಬಡಿಗೇರ ಮಾಡಿದರು.